Deprecated: Required parameter $zip_path follows optional parameter $full in /home/news-arrow/public_html/wp-content/plugins/unyson/framework/extensions/backups/includes/module/tasks/class--fw-ext-backups-module-tasks.php on line 985
ಸಾನಿಯಾ ಮಿರ್ಜಾಗೆ ಕೈಕೊಟ್ಟ ಪಾಕ್ ಕ್ರಿಕೆಟಿಗ ಶೋಯಿಬ್‌ ಮಲಿಕ್ - ಜನಪ್ರಿಯ ಪಾಕ್ ನಟಿಯನ್ನು ವಿವಾಹವಾದ ಪಾಕ್ ಮಾಜಿ ನಾಯಕ -

ಸಾನಿಯಾ ಮಿರ್ಜಾಗೆ ಕೈಕೊಟ್ಟ ಪಾಕ್ ಕ್ರಿಕೆಟಿಗ ಶೋಯಿಬ್‌ ಮಲಿಕ್ – ಜನಪ್ರಿಯ ಪಾಕ್ ನಟಿಯನ್ನು ವಿವಾಹವಾದ ಪಾಕ್ ಮಾಜಿ ನಾಯಕ

ನ್ಯೂಸ್ ಆ್ಯರೋ : ಮೂಗುತಿ ಸುಂದರಿ ಖ್ಯಾತಿಯ ಭಾರತದ ಮಾಜಿ‌ ಟೆನಿಸ್ ತಾರೆ ಸಾನಿಯಾ ಮಿರ್ಜಾ ಜೊತೆಗಿನ ಪ್ರತ್ಯೇಕತೆಯ ವದಂತಿಗಳ ನಡುವೆ ಶೋಯೆಬ್ ಮಲಿಕ್ ಪಾಕಿಸ್ತಾನದ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರೊಂದಿಗೆ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳ ಮಧ್ಯೆ ಪಾಕಿಸ್ತಾನ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.

ಶೋಯೆಬ್ ಮಲಿಕ್ ಜನವರಿ 20 ರ ಶನಿವಾರ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ವಿವರವಾಗಿ ಬರೆದುಕೊಂಡಿದ್ದಾರೆ.

“ಮದುವೆ ಕಷ್ಟ. ವಿಚ್ಛೇದನ ಕಷ್ಟ. ನಿಮ್ಮ ನೆಚ್ಚಿದ್ದನ್ನು ಅನ್ನು ಆಯ್ಕೆ ಮಾಡಿ. ಬೊಜ್ಜು ಕಷ್ಟ. ಫಿಟ್ ಆಗಿರುವುದು ಕಷ್ಟ. ನಿಮ್ಮ ಹಾರ್ಡ್ ನೆಚ್ಚಿದನ್ನು ಆಯ್ಕೆ ಮಾಡಿ. ಸಾಲದಲ್ಲಿ ಸಿಲುಕುವುದು ಕಷ್ಟ. ಆರ್ಥಿಕವಾಗಿ ಶಿಸ್ತುಬದ್ಧರಾಗಿರುವುದು ಕಷ್ಟ. ನಿಮ್ಮ ನೆಚ್ಚಿದನ್ನು ಅನ್ನು ಆಯ್ಕೆ ಮಾಡಿ. ಸಂವಹನ ಕಷ್ಟ. ಸಂವಹನ ಮಾಡದಿರುವುದು ಕಷ್ಟ. ನಿಮ್ಮ ನೆಚ್ಚಿದನ್ನು ಅನ್ನು ಆಯ್ಕೆ ಮಾಡಿ. ಜೀವನ ಎಂದಿಗೂ ಸುಲಭವಲ್ಲ. ಇದು ಯಾವಾಗಲೂ ಕಷ್ಟಕರವಾಗಿರುತ್ತದೆ. ಆದರೆ ನಾವು ನಮ್ಮ ಕಠಿಣತೆಯನ್ನು ಆಯ್ಕೆ ಮಾಡಬಹುದು. ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


Comments

Leave a Reply

Your email address will not be published. Required fields are marked *