ಮಗುವನ್ನು ಟ್ರಾಲಿ ಬ್ಯಾಗ್​ನಲ್ಲಿರಿಸಿ ಪಾದಯಾತ್ರೆ ಹೊರಟ ದಂಪತಿ: ಇದಕ್ಕಿದೆ ಅದ್ಬುತ ಕಾರಣ

Baby in Trolley Bag
Spread the love

ನ್ಯೂಸ್ ಆ್ಯರೋ: ಮದುವೆಯಾಗಿ 12 ವರ್ಷಗಳ ಬಳಿಕ ಮನೆಯಲ್ಲಿ ಮಗುವಿನ ನಗು ಪ್ರತಿಧ್ವನಿಸಿದಾಗ ಪೋಷಕರ ಆನಂದಕ್ಕೆ ಪಾರವೇ ಇರಲಿಲ್ಲ. ಆಸೆ ಈಡೇರಿದ್ದು, ಮೊದಲೇ ಬೇಡಿಕೊಂಡಂತೆ ದೇವಸ್ಥಾನವೊಂದಕ್ಕೆ ದಂಪತಿ ಕಾಲ್ನಡಿಗೆಯಲ್ಲೇ ಪಯಣಿಸಿದ್ದಾರೆ. ಮಗುವನ್ನು ಟ್ರಾಲಿ ಬ್ಯಾಗ್​ಗೆ ಹಾಕಿ ಎಳೆದುಕೊಂಡು 118 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ.

ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ, ಬಿಲ್ವಾರಾ-ಕೋಟಾ ಹೆದ್ದಾರಿಯಲ್ಲಿ ಟ್ರಾಲಿ ಬ್ಯಾಗ್​ನಲ್ಲಿ ಮಗುವನ್ನು ನೋಡಿದ ಜನರು ಆಶ್ಚರ್ಯಚಕಿತರಾದರು.

ಮಾಹಿತಿ ಪ್ರಕಾರ ಜಿಲ್ಲೆಯ ಬಾಗೂರು ಬಳಿ ವಾಸವಿದ್ದ ದಂಪತಿ ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಅವರಿಗೆ ಮಗುವಾಗಿರಲಿಲ್ಲ. ಜೋಗನಿಯ ಮಾತೆಗೆ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಈ ದಂಪತಿಗೆ ಮಗು ಜನಿಸಿದೆ. ಹಾಗಾಗಿ ಅವರು ತಾಯಿಯ ಆಶೀರ್ವಾದ ಪಡೆಯಲು ನವರಾತ್ರಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದ್ದಾರೆ.

ಸಣ್ಣ ಮಗುವಾಗಿದ್ದರಿಂದ ಅದನ್ನು ಮನೆಯಲ್ಲಿ ಬಿಟ್ಟು ಹೋಗದೆ ಪ್ಲ್ಯಾನ್ ಮಾಡಿ ಟ್ರಾಲಿ ಬ್ಯಾಗ್​ನಲ್ಲಿ ಮಲಗಿಸಿಕೊಂಡು ತೆರಳಿದ್ದಾರೆ. ಇನ್ನು ಈ ಪಾದಯಾತ್ರೆ ವೇಳೆ ಚಪ್ಪಲಿ, ಶೂ ಧರಿಸಿದೆ ಬರಿಗಾಲಿನಲ್ಲಿ ಮಾತೆಯ ಆಸ್ಥಾನಕ್ಕೆ ತೆರಳಿದ್ದಾರೆ ಈ ದಂಪತಿ.

Leave a Comment

Leave a Reply

Your email address will not be published. Required fields are marked *

error: Content is protected !!