ಭುಜಬಲಕ್ಕೂ ಬುದ್ದಿಬಲಕ್ಕೂ ಜಿದ್ದಾಜಿದ್ದಿ; ಚೈತ್ರಾ ಕುಂದಾಪುರ ವಿರುದ್ಧ ತಿರುಗಿಬಿದ್ದ ರಜತ್​

BBK11
Spread the love

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, 67ನೇ ದಿನಕ್ಕೆ ಕಾಲಿಟ್ಟಿದೆ. 10ನೇ ವಾರಕ್ಕೆ ಕಾಲಿಟ್ಟಿದ್ದ ಬಿಗ್​ಬಾಸ್​ ದಿನಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ.

ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಮತ್ತೆ ರೆಬೆಲ್​ ಆಗಿದ್ದಾರೆ. ಅದರಂತೆ ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಇಬ್ಬರು ಸ್ಪರ್ಧಿಗಳ ನಡುವೆ ಮಾತಿನ ಸಮರ ನಡೆದಿದೆ. ಬಿಗ್​​ಬಾಸ್​ ಮನೆಯಲ್ಲಿ ಇದೀಗ ಮುಂದಿನ ವಾರಕ್ಕೆ ನಾಯಕನ ಆಯ್ಕೆಯ ಟಾಸ್ಕ್​​ಗಳು ಶುರುವಾಗಿದೆ.

ಜೊತೆಗೆ ಈ ವಾರ ಅರ್ಹತೆ ಇಲ್ಲದ ಓರ್ವ ಸ್ಪರ್ಧಿಯನ್ನು ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಬೇಕಿತ್ತು. ಅದರಂತೆ ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ರಜತ್​ ತಂಡ ಗೆದ್ದು ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರ ಹಾಕಿದ್ದಾರೆ. ಇದಕ್ಕೆ ಕೋಪಗೊಂಡ ಚೈತ್ರಾ ಮತ್ತೆ ಜೋರಾಗಿ ಸೌಂಡ್​ ಮಾಡಿದ್ದಾರೆ.

ಅಲ್ಲದೇ ರಜತ್​ ಜೊತೆಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಮತ್ತೆ ಕೋಪದಲ್ಲಿ ಚೈತ್ರಾ ಅವರಿಗೆ ದಿನೇ ದಿನೇ ಹುಚ್ಚು ಜಾಸ್ತಿ ಆಗ್ತಾ ಇದೆ ಅಂತ ರಜತ್ ಹೇಳಿದ್ದಾರೆ. ‘ಹೌದು’ ಎಂದು ತ್ರಿವಿಕ್ರಮ್ ಧ್ವನಿಗೂಡಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!