ಸರಿಗಮಪ ಖ್ಯಾತಿಯ ಅಂಧ ಗಾಯಕಿ ನಿಧನ; ವಿಶಿಷ್ಟ ಗಾಯನದ ಮೂಲಕ ಜನಮನ್ನಣೆ ಗಳಿಸಿದ್ದ ಮಂಜಮ್ಮ ಇನ್ನಿಲ್ಲ

ಕರ್ನಾಟಕ

ನ್ಯೂಸ್ ಆ್ಯರೋ: ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಅಂಧ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ತಮ್ಮ ಹಾಡುಗಳಿಂದಲೇ ಖ್ಯಾತಿ ಗಳಿಸಿದ್ದರು. ಇದೀಗ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಂಜಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ಫಿಕ್ಸ್; ಇದರ ಹಿನ್ನಲೆಯೇನು ತಿಳಿಯಿರಿ

ಕರ್ನಾಟಕ

ನ್ಯೂಸ್ ಆ್ಯರೋ: ಒಟ್ಟು 11 ದಿನಗಳ ಕಾಲ ನಡೆಯುವ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ ಆಗಿದೆ. ಏಪ್ರಿಲ್ 4ರಿಂದ ಏಪ್ರಿಲ್ 14 ರವರೆಗೆ ನಡೆಯಲಿದೆ. ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ಸಂಬಂಧ ಸೋಮವಾರ ರಾತ್ರಿ ಸಭೆ ನಡೆಯಿತು. ಈ ಸಭೆಯಲ್ಲಿ, ಕರಗ ಹೊರುವ ಪೂಜಾರಿಯಾಗಿ ಎ.ಜ್ಞಾನೇಂದ್ರ ಒಮ್ಮತದಿಂದ ಆಯ್ಕೆಯಾದರು. ಇವರು 14 ವರ್ಷಗಳಿಂದ ಬೆಂಗಳೂರು ಕರಗ ಹೊರುತ್ತಿದ್ದಾರೆ. ಈ ವರ್ಷ ಕೊನೆಯ

ಗಣರಾಜ್ಯೋತ್ಸವ ಹಿನ್ನೆಲೆ 95 ಯೋಧರಿಗೆ ಶೌರ್ಯ ಪದಕ; 942 ಸಿಬ್ಬಂದಿಗೆ ಶೌರ್ಯ ಪ್ರಶಸ್ತಿ ಪ್ರಕಟ

ಕರ್ನಾಟಕ

ನ್ಯೂಸ್ ಆ್ಯರೋ: 6ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶಕ್ಕಾಗಿ ಅಪ್ರತಿಮ ಸೇವೆ ಸಲ್ಲಿಸಿದ ವಿವಿಧ ಸಾಧಕರಿಗೆ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಗಣರಾಜ್ಯೋತ್ಸವ 2025 ರ ಸಂದರ್ಭದಲ್ಲಿ, ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ಸುಧಾರಣಾ ಸೇವೆಗಳ 942 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಇದರಲ್ಲಿ 95 ಯೋಧರಿಗೆ ಶೌರ್ಯ ಪದಕ, 101 ಮಂದಿಗೆ ವಿಶಿಷ್ಠ ಸೇವೆಗಾಗಿ ರ

ಮಂತ್ರಾಲಯದ ವಿದ್ಯಾಪೀಠದ ವಾಹನ ಆಕ್ಸಿಡೆಂಟ್; ಜೀವ ಕಳೆದುಕೊಂಡ ವಿದ್ಯಾರ್ಥಿಗಳು

ಕರ್ನಾಟಕ

ನ್ಯೂಸ್ ಆ್ಯರೋ: ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಾಹನ ರಸ್ತೆಯಲ್ಲಿ ಭಯಾನಕವಾಗಿ ಪಲ್ಟಿಯಾದ ಪರಿಣಾಮ ಚಾಲಕ ಸೇರಿ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಸಿಂಧನೂರು ನಗರದ ಹೊರವಲಯದಲ್ಲಿ ಈ ಘಟನೆ ಸಂಭವಿಸಿದೆ. ಕ್ರೂಶರ್ ವಾಹನದ ಚಾಲಕ ಕಂಸಾಲಿ ಶಿವ (20), ವಿದ್ಯಾರ್ಥಿಗಳಾದ ಹಯವದನ (18), ಸುಜಯೇಂದ್ರ (22), ಅಭಿಲಾಷ್ (20) ಪ್ರಾಣ ಕಳೆದುಕೊಂಡವರು. ಕ್ರೂಶರ್ ವಾಹನದಲ್ಲಿ ಒಟ್ಟು 14 ಜನರು ಮಂತ್ರಾಲಯದಿಂದ ಕೊಪ್ಪಳದ ಆನೆಗುಂದಿಯ ನರಹರಿ

ಮದ್ಯಪ್ರಿಯರಿಗೆ ಸರ್ಕಾರದಿಂದ ಶಾಕ್; ಇಂದಿನಿಂದಲೇ ದರ ಏರಿಕೆ

ಕರ್ನಾಟಕ

ನ್ಯೂಸ್ ಆ್ಯರೋ: ಮದ್ಯಪ್ರಿಯರಿಗೆ ಬಿಗ್ ಶಾಕ್. ಬಜೆಟ್‌ಗೆ ಮೊದಲೇ ಮದ್ಯದ ದರ ಏರಿಕೆಯಾಗಿದೆ. 10 ರೂಪಾಯಿಯಿಂದ 45 ರೂಪಾಯಿ ವರೆಗೂ ಬೆಲೆ ಏರಿಕೆಯಾಗಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಸಾಧಾರಣವಾಗಿ ಬಜೆಟ್‌ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್‌ ಮಂಡನೆಯಾಗುವ ಮೊದಲೇ ದರ ಏರಿಕೆಯಾಗಿದೆ. ಕಳೆದ 6 ತಿಂಗಳ ಹಿಂದೆ ಆಮದು ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಲಾಗಿತ್ತು. ಇದೀಗ ಸುಂಕವನ್ನು

Page 4 of 77