ನ್ಯೂಸ್ ಆ್ಯರೋ : ಈ ಬಾರಿಯ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಅದರಲ್ಲೂ ಮುಖ್ಯವಾಗಿ ಕುಂದಾಪುರ ಮತ್ತು ಬ್ರಹ್ಮಾವರ ಭಾಗದಲ್ಲಿ ತಗ್ಗು ಪ್ರದೇಶಗಳು ನೆರೆ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕುಂದಾಪುರ ಮತ್ತು ಬ್ರಹ್ಮಾವರ ವಲಯದ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಶನಿವಾರ (ಜುಲೈ 6) ರಜೆ ಘೋಷಣೆ ಮಾಡಲಾಗಿದೆ.
ಬಂಟ್ವಾಳ : ಎಣ್ಮೂರು ಗರಡಿ ಕೋಟಿ ದರ್ಶನ ಪಾತ್ರಿ ಗಿರೀಶ್ ನಾಪತ್ತೆ ಪ್ರಕರಣ – ಮೃತದೇಹ ಪತ್ತೆ, ಆತ್ಮಹತ್ಯೆ ಶಂಕೆ..!
ನ್ಯೂಸ್ ಆ್ಯರೋ : ಕುಕ್ಕಿಪಾಡಿಯ ರಿಕ್ಷಾ ಚಾಲಕ, ಎಣ್ಮೂರು ನಾಗಬ್ರಹ್ಮ ದೈವಸ್ಥಾನದ ಗರಡಿಯ ಕೋಟಿ ದರ್ಶನ ಪಾತ್ರಿ ಗಿರೀಶ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಅವರ ಮೃತದೇಹವು ಬಂಟ್ವಾಳ ಸಮೀಪ ಪತ್ತೆಯಾಗಿದೆ. ಆಟೋ ಚಾಲಕರಾಗಿರುವ ಗಿರೀಶ್ ಅವರು ಕಳೆದ ಬುಧವಾರ ತಡರಾತ್ರಿ 2 ಗಂಟೆ ವೇಳೆಗೆ ಮನೆಯಿಂದ ಆಟೋ ಸಹಿತ ತೆರಳಿದವರು ಬಳಿಕ ನಾಪತ್ತೆಯಾಗಿದ್ದರು. ಪೂಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿ
ಮಂಗಳೂರು ಪಾಲಿಕೆ ಆಯುಕ್ತ ಸಿ.ಎಲ್ ಆನಂದ ವರ್ಗಾವಣೆ – ನೂತನ ಆಯುಕ್ತರಾಗಿ ರವಿಚಂದ್ರ ನಾಯಕ್
ನ್ಯೂಸ್ ಆ್ಯರೋ : ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಸಿ ಎಲ್ ಆನಂದ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಗೊಳಿಸಿದೆ. ಅವರ ಸ್ಥಾನಕ್ಕೆ ಶಿವಮೊಗ್ಗ ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ರವಿಚಂದ್ರ ನಾಯಕ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಸಿ.ಎಲ್ ಆನಂದ ಅವರಿಗೆ ಆದೇಶದಲ್ಲಿ ಯಾವುದೇ ಸ್ಥಾನ ತೋರಿಸಿಲ್ಲ.
ಉಡುಪಿ : ವಿಶೇಷ ಚೇತನ ಮಗುವನ್ನು ಎತ್ತಿಕೊಂಡು ತುಂಬಿ ಹರಿಯುತ್ತಿರುವ ಹೊಳೆ ದಾಟಿದ ತಂದೆ – ವಿಡಿಯೋ ವೈರಲ್ ಬೆನ್ನಲ್ಲೇ ಶಾಸಕ ಗಂಟಿಹೊಳೆ ಸ್ಥಳಕ್ಕೆ ಭೇಟಿ, ಶಾಶ್ವತ ವ್ಯವಸ್ಥೆ ರೂಪಿಸುವ ಭರವಸೆ
ನ್ಯೂಸ್ ಆ್ಯರೋ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿ ಎಂಬಲ್ಲಿ ಸೇತುವೆ ಇಲ್ಲದ ಕಾರಣ ಶಾಲೆಗೆ ಹೋಗುವ ಮಕ್ಕಳನ್ನು ಪೋಷಕರೇ ಎತ್ತಿಕೊಂಡು ಹೊಳೆ ದಾಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದೇ ರೀತಿ ತಂದೆಯೊಬ್ಬರು ತನ್ನ ವಿಶೇಷ ಚೇತನ ಮಗುವನ್ನು ಹೆಗಲ ಮೇಲೆ ಕೂರಿಸಿ ಹೊಳೆ ದಾಟುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಬೈಂದೂರು
SP on Charge : ದ.ಕ. ಜಿಲ್ಲಾ ವರಿಷ್ಠಾಧಿಕಾರಿಯಾಗಿ ಯತೀಶ್ ಎನ್. ಅಧಿಕಾರ ಸ್ವೀಕಾರ – ಸಿ.ಬಿ.ರಿಷ್ಯಂತ್ ಸೇವೆಗಾಗಿ ಬೆಂಗಳೂರಿನತ್ತ…
ನ್ಯೂಸ್ ಆ್ಯರೋ : ರಾಜ್ಯ ಸರ್ಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿದ್ದ ಶ್ರೀ ಯತೀಶ್.ಎನ್ (ಐಪಿಎಸ್) ಅಧಿಕಾರ ಸ್ವೀಕರಿಸಿದ್ದಾರೆ. ಈ ಮೊದಲು ದ.ಕ.ಎಸ್ಪಿಯಾಗಿದ್ದ ಸಿ.ಬಿ.ರಿಷ್ಯಂತ್ ಅವರು ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಯತೀಶ್ ಅವರು ನಿಯುಕ್ತರಾಗಿದ್ದಾರೆ. 2016ರ ಕರ್ನಾಟಕ ಕೇಡರ್ ನ IPS ಅಧಿಕಾರಿಯಾಗಿರುವ ಯತೀಶ್ ಎನ್ ಅವರು ಈ ಮೊದಲು ಮಂ