‘Cache’ ಫೈಲ್ ನಿಮ್ಮ ಮೊಬೈಲ್ ನಲ್ಲಿ ಇದ್ಯಾ…! ಹಾಗಿದ್ರೆ ಈ ಕೂಡಲೇ ಡಿಲೀಟ್ ಮಾಡಿ..
ನ್ಯೂಸ್ ಆ್ಯರೋ : ಇತ್ತೀಚೆಗೆ ಮೆಾಬೈಲ್ ಫೋನ್ ಗಳು ಜನರ ಆಧುನಿಕ ಜೀವನಶೈಲಿಯ ಒಂದು ಅವಿಭಾಜ್ಯ ಅಂಗವಾಗಿದೆ. ಫೋನ್ ಹ್ಯಾಂಗ್ ಆಗದ ರೀತಿ ಅನೇಕ ಕಾಳಜಿ ವಹಿಸುತ್ತಾರೆ. ಆದರೆ ದಿನಕಳೆದಂತೆ ಫೋನ್ ನಿಧಾನ ಕಾರ್ಯ ಮಾಡುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ.
ಈ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವ ನಾವು ಕೆಲವೊಂದು ಸಣ್ಣ ವಿಚಾರಗಳನ್ನೇ ಗಮನಿಸುವುದಿಲ್ಲ. ಮೊಬೈಲ್ ನಲ್ಲಿ ಕೆಲವೊಂದು ಫೀಚರ್ಸ್ ಗಳಿವೆ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ.
ನಮ್ಮಲ್ಲಿ ಹೆಚ್ಚಿನವರು ‘cache’ ಎಂಬ ಪದವನ್ನು ಕೇಳಿರುತ್ತೇವೆ. ಆದರೆ ಇದೇನು, ಇದು ಫೋನ್ ನಲ್ಲಿ ಯಾಕೆ ಇರುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿರುತ್ತದೆ. ಕ್ಯಾಶ್ ನಿಂದ ನಮ್ಮ ಫೋನ್ ಗೆ ಏನೆಲ್ಲಾ ಹಾನಿಯಿದೆ ತಿಳಿಯೋಣ.
Cache ಫೈಲ್ ದಿನ ಹೋದಂತೆ ನಿಮ್ಮ ಮೊಬೈಲ್ ಫೋನ್ ಹ್ಯಾಂಗ್ ಆಗುವಂತೆ ಮಾಡುತ್ತದೆ. ಇದು ಹೋಗ್ತಾ ಹೋಗ್ತಾ ನಿಮ್ಮ ಫೋನ್ ಸ್ಟೋರೇಜ್ ಅನ್ನೇ ಆಕ್ರಮಿಸಿಕೊಳ್ಳುತ್ತದೆ. ಬಳಿಕ ನಿಮ್ಮ ಫೋನ್ ನಲ್ಲಿರುವ ಆ್ಯಪ್ ಗಳ ಮೇಲೆ ಪರಿಣಾಮ ಬೀರಿ ನಿಧಾನ ಕಾರ್ಯ ಮಾಡುವಂತೆ ಮಾಡುತ್ತದೆ.
ನಿಮ್ಮ ಮೊಬೈಲ್ ಫೋನ್ ನಲ್ಲಿ ಸೆಟ್ಟಿಂಗ್ಸ್ ಎಂಬ ಆಯ್ಕೆಗೆ ಹೋಗಿ,
ಸ್ಟೋರೇಜ್ ವಿಭಾಗವನ್ನು ಕ್ಲಿಕ್ಕಿಸಬೇಕು. ಇದರಲ್ಲಿ ಹಲವು ಆಯ್ಕೆಗಳು ಇರುತ್ತದೆ. ನೀವು ಇವುಗಳಲ್ಲಿ ‘ಆಪ್ಸ್ ಸ್ಟೋರೇಜ್ ‘ ಅನ್ನು ಆಯ್ಕೆ ಮಾಡಬೇಕು. ಮುಂದೆ ನೀವು ಡೇಟಾ ತೆರವನ್ನು ಒತ್ತಬೇಕು. ಈಗ ನೀವು ಅಪ್ಲಿಕೇಶನ್ ಸೆಟ್ಟಿಂಗ್ ನಲ್ಲಿ ‘clear cache’ ಅಥವಾ ‘clear storage’ ಆಯ್ಕೆಯನ್ನು ಕಾಣಬಹುದು. ಬೇಡವಾದ ಫೈಲ್ ಗಳನ್ನು ಅಳಿಸಲು ‘ಕ್ಲೀ ಕ್ಯಾಶ್’ ಕ್ಲಿಕ್ ಮಾಡಿ. ‘clear storage’ ಅನ್ನು ಎಚ್ಚರಿಕೆಯಿಂದ ನೋಡಿ ಬೇಡವಾದ ಫೈಲ್ ಗಳನ್ನು ಡಿಲೀಟ್ ಮಾಡಬೇಕು. ಕೆಲವೊಂದು ಬಾರಿ ಇದು ಲಾಗ್ ಇನ್ ಮಾಡುವ ಎಲ್ಲಾ ಅಪ್ಲಿಕೇಶನ್ ಡೇಟಾವನ್ನು ಅಳಿಸುತ್ತದೆ. ಆದ್ದರಿಂದ ಜಾಗರೂಕತೆಯಿಂದ ಡೇಟಾಗಳನ್ನು ರಿಮೂವ್ ಮಾಡಿ.
Leave a Comment