ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ

ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ

ನ್ಯೂಸ್‌ ಆ್ಯರೋ : ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ ಜಿ ಟೊಮೆಟೊ ಬೆಲೆ ₹30ಕ್ಕೆ ಇಳಿದಿದ್ದು ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್‌ ಕೇವಲ ₹500ಕ್ಕೆ ಮಾರಾಟವಾಗಿದೆ. ಈ ಮೂಲಕ ಟೊಮೆಟೊ ದರದಲ್ಲಿ ದಿಢೀರ್ ಇಳಿಮುಖವಾಗಿದ್ದು, ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಹರಾಜಿನಲ್ಲಿ ಗರಿಷ್ಠ ₹ 530 ಹಾಗೂ ಕನಿಷ್ಠ ₹ 150ಕ್ಕೆ ಮಾರಾಟವಾಗಿದೆ. ರೈತನಿಗೆ ಕೆ.ಜಿಗೆ ಸರಾಸರಿ ₹33 ದರ ಲಭಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಇದೇ ದರ ಇದೆ.

ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಈಗ ಫಸಲು ಕೊಡಲು ಶುರುವಾಗಿದ್ದರಿಂದ ಮಾರುಕಟ್ಟೆಗೆ ಬರುತ್ತಿರುವ‌ ಟೊಮೆಟೊ ತೀರಾ ಹೆಚ್ಚಳವಾಗಿದೆ. ಇದರಿಂದ ಎಪಿಎಂಸಿಯಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಆವಕವಾಗುತ್ತಿದೆ. ಇದರಿಂದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ಭಾರಿ ಇಳಿಕೆಯಾಗಿದೆ.

ಜುಲೈ ತಿಂಗಳಿನಲ್ಲಿ ಟೊಮೆಟೊ ದರ ಕೆಜಿಗೆ ಶತಕದ ಗಟಿ ದಾಟಿ ದಾಖಲೆ ನಿರ್ಮಾಣವಾಗಿತ್ತು. ಇದೀಗ ನಿಧಾನ ಗತಿಯಲ್ಲಿ ಟೊಮೆಟೊ ದರದಲ್ಲಿ ಇಳಿಮುಖವಾಗುತ್ತಿದೆ. ಜುಲೈ 31 ರಂದು ಗರಿಷ್ಠ ₹ 2,700ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 17 ದಿನಗಳ ಅಂತರದಲ್ಲಿ 15 ಕೆ.ಜಿ.ಟೊಮೊಟೊ ಬಾಕ್ಸ್‌ ದರ ₹ 2 ಸಾವಿರಕ್ಕೂ ಅಧಿಕ ಇಳಿಕೆ ಆದಂತಾಗಿದೆ.

ಗುರುವಾರ ಕೋಲಾರ ಎಪಿಎಂಸಿಗೆ 17,546 ಕ್ವಿಂಟಲ್‌ ಅಂದರೆ 1.17 ಲಕ್ಷ ಬಾಕ್ಸ್‌ ಟೊಮೆಟೊ ಆವಕವಾಗಿತ್ತು. 17 ದಿನಗಳ ಅಂತರದಲ್ಲಿ ಸುಮಾರು 64 ಸಾವಿರ ಬಾಕ್ಸ್‌ ಆವಕ ಹೆಚ್ಚಿದೆ‌. ಜುಲೈ 31 ರಂದು ಕೇವಲ 52,820 ಬಾಕ್ಸ್‌ ಆವಕವಾಗಿತ್ತು. ಹೀಗಾಗಿ, ಬೇಡಿಕೆ ತಗ್ಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಈಚೆಗೆ ಅಡುಗೆ ಕೋಣೆಯಲ್ಲಿ ಪ್ರಮುಖವಾಗಿರುವ ಟೊಮೆಟೊ ದರ ಏರಿಕೆ ಕಂಡು ತಮಾಷೆ ಮಾಡಿ ಟ್ರೋಲ್ ಮಾಡಿದುಂಟು. ಅದಲ್ಲದೆ ಬೆಲೆ ಏರಿಕೆಯಾಗಿದ್ದರಿಂದ ರೈತರು ಬೆಲೆದ ಟೊಮೆಟೊ ಕಳವು ಆದ ಪ್ರಕರಣಗಳು ಇವೆ. ಆದರೆ ಇದೀಗ ಟೊಮೆಟೋ ದರದಲ್ಲಿ ದಿಢೀರ್ ಇಳಿಕೆಯಿಂದ ಗ್ರಾಹಕರು ಖುಷಿಯಾಗಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *