
LPG ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ – ಗ್ರಾಹಕರಿಗೆ ಇಂದಿನಿಂದಲೇ ಬೆಲೆಯೇರಿಕೆಯ ಬಿಸಿ
- ವಾಣಿಜ್ಯ ಸುದ್ದಿ
- November 1, 2023
- No Comment
- 73
ನ್ಯೂಸ್ ಆ್ಯರೋ : ನವೆಂಬರ್ ತಿಂಗಳ ಮೊದಲ ದಿನದಂದೇ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 103 ರೂ. ಏರಿಕೆ ಮಾಡಲಾಗಿದೆ.
ಇಂದಿನಿಂದ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 103 ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್ಪಿಜಿ ಸಿಲಿಂಡರ್ 1833 ರೂ.ಗೆ ಏರಿಕೆಯಾಗಿದೆ.
ಕಳೆದ ಅಕ್ಟೋಬರ್ 1 ರಂದು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಸುಮಾರು 209 ರೂ.ಗೆ ಹೆಚ್ಚಿಸಲಾಯಿತು. ಅಂದರೆ, ಒಂದು ತಿಂಗಳಲ್ಲಿ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ 310 ರೂ. ಹೆಚ್ಚಳವಾಗಿದೆ. ಕಳೆದ ತಿಂಗಳು ಕೋಲ್ಕತ್ತಾದಲ್ಲಿ ಬೆಲೆ 203.50 ರೂ., ಈ ತಿಂಗಳು 103.50 ರೂ. 31 ದಿನಗಳಲ್ಲಿ ಸಿಲಿಂಡರ್ ಬೆಲೆ 307 ರೂ.ಗಳಷ್ಟು ದುಬಾರಿಯಾಗಿದೆ.
ಮುಂಬೈನಲ್ಲಿ ಇಂದು 101.50 ರೂ. ಒಂದು ತಿಂಗಳಲ್ಲಿ ಸಿಲಿಂಡರ್ ಬೆಲೆ 303.50 ರೂ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.50 ರೂ., ಕಳೆದ ತಿಂಗಳು 203 ರೂ. ಅಂದರೆ, ಒಂದು ತಿಂಗಳಲ್ಲಿ, ಪ್ರತಿ ಸಿಲಿಂಡರ್ ಗೆ 304.50 ರೂ.ಗಳ ಹೆಚ್ಚಳವಾದಂತಾಗಿದೆ.
ಪ್ರಮುಖ ನಗರಗಳಲ್ಲಿ ಸಿಲಿಂಡರ್ ಬೆಲೆ ಹೀಗಿದೆ.
ದೆಹಲಿ 1833 ರೂ.
ಕೊಲ್ಕತ್ತಾ 1943 ರೂ.
ಮುಂಬೈ 1785.5 ರೂ.
ಚೆನ್ನೈ 1999.5 ರೂ.