ಭಾರತದ ಅತ್ಯಮೂಲ್ಯ ಟಾಪ್‌ – 50 ಬ್ರ್ಯಾಂಡ್‌ ಪಟ್ಟಿ ಬಿಡುಗಡೆ – ಅಗ್ರ ಸ್ಥಾನ ಯಾರಿಗೆ? ಇನ್ಫೋಸಿಸ್‌ ಬ್ರ್ಯಾಂಡ್‌ ಮೌಲ್ಯ ಎಷ್ಟು ಗೊತ್ತಾ?

ಭಾರತದ ಅತ್ಯಮೂಲ್ಯ ಟಾಪ್‌ – 50 ಬ್ರ್ಯಾಂಡ್‌ ಪಟ್ಟಿ ಬಿಡುಗಡೆ – ಅಗ್ರ ಸ್ಥಾನ ಯಾರಿಗೆ? ಇನ್ಫೋಸಿಸ್‌ ಬ್ರ್ಯಾಂಡ್‌ ಮೌಲ್ಯ ಎಷ್ಟು ಗೊತ್ತಾ?

ನ್ಯೂಸ್ ಆ್ಯರೋ‌ : ಭಾರತದ ಅತ್ಯಮೂಲ್ಯ ಟಾಪ್‌ – 50 ಬ್ರ್ಯಾಂಡ್‌ಗಳ ಪಟ್ಟಿಯನ್ನು ಕನ್ಸಲ್ಟೆನ್ಸಿ ಕಂಪನಿ ಇಂಟರ್‌ಬ್ರ್ಯಾಂಡ್‌ ಪ್ರಕಟಿಸಿದೆ. ಯಾವ ಕಂಪೆನಿ, ಯಾವ ಸ್ಥಾನದಲ್ಲಿದೆ ಎನ್ನುವುದರ ವಿವರ ಇಲ್ಲಿದೆ.

1,09,576 ಕೋಟಿ ರೂ. ಬ್ರ್ಯಾಂಡ್‌ ಮೌಲ್ಯದೊಂದಿಗೆ ಟಾಟಾ ಗ್ರೂಪ್‌ ಒಡೆತನದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಅಗ್ರಸ್ಥಾನದಲ್ಲಿದೆ. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಎರಡನೇ ಸ್ಥಾನ ಪಡೆದುಕೊಂಡಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ.ನ ಬ್ರ್ಯಾಂಡ್‌ ಮೌಲ್ಯ 65,320 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಇನ್ಫೋಸಿಸ್‌ ಗೆ ಎಷ್ಟನೇ ಸ್ಥಾನ?

ಬೆಂಗಳೂರು ಮೂಲದ ಐಟಿ ಕಂಪನಿ ಇನ್ಫೋಸಿಸ್‌ 53,323 ಕೋಟಿ ರೂ. ಬ್ರ್ಯಾಂಡ್‌ ಮೌಲ್ಯದೊಂದಿಗೆ ಮೂರನೇ ಸ್ಥಾನದಲ್ಲಿದೆ. ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ನಾಲ್ಕನೇ ಸ್ಥಾನದಲ್ಲಿದ್ದು, ಇದರ ಬ್ರ್ಯಾಂಡ್‌ ಮೌಲ್ಯ 50,291 ಕೋಟಿ ರೂ. 49,027 ಕೋಟಿ ರೂ. ಬ್ರ್ಯಾಂಡ್‌ ಮೌಲ್ಯದೊಂದಿಗೆ ರಿಲಯನ್ಸ್‌ ಜಿಯೋ ಇನ್ಫೋಕಾಮ್‌ ಲಿ. ಐದನೇ ಸ್ಥಾನದಲ್ಲಿದೆ. ಇದರ ಪ್ರತಿಸ್ಪರ್ಧಿ ಏರ್‌ಟೆಲ್‌ ಇಲ್ಲೂ ಪೈಪೋಟಿ ನೀಡಿದ್ದು ಆರನೇ ಸ್ಥಾನದಲ್ಲಿದೆ.

ಟಾಪ್‌ – 50 ಪಟ್ಟಿಯಲ್ಲಿ ಯಾರಿದ್ದಾರೆ?

ಟಾಟಾ ಸನ್ಸ್‌, ಅದಾನಿ ಗ್ರೂಪ್‌, ಮಾರುತಿ ಸುಜುಕಿ, ಐಟಿಸಿ, ಬಜಾಜ್‌ ಆಟೊ, ಅಮುಲ್‌, ಡಾಬರ್‌, ಪತಂಜಲಿ ಮತ್ತು ಬ್ರಿಟಾನಿಯಾದಂತಹ ಬ್ರ್ಯಾಂಡ್‌ಗಳು ಟಾಪ್‌ – 50 ಪಟ್ಟಿಯಲ್ಲಿ ಕಂಡು ಬಂದಿವೆ.

ಟಾಪ್‌ – 50 ಕಂಪನಿಗಳ ಸಂಯೋಜಿತ ಬ್ರ್ಯಾಂಡ್‌ ಮೌಲ್ಯವು ಮೊದಲ ಬಾರಿಗೆ 100 ಬಿಲಿಯನ್‌ ದಾಟಿದೆ ಎಂದು ವರದಿ ಹೇಳಿದೆ. ಟಿಸಿಎಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಮತ್ತು ಇನ್ಫೋಸಿಸ್‌ನ ಬ್ರ್ಯಾಂಡ್‌ ಮೌಲ್ಯವು, ‘ಟಾಪ್‌ – 10’ ಕಂಪೆನಿಗಳ ಒಟ್ಟು ಬ್ರ್ಯಾಂಡ್‌ ಮೌಲ್ಯದ ಶೇ. 46ರಷ್ಟು ಇದೆ. ಟಾಪ್‌ – 10 ಪಟ್ಟಿಯಲ್ಲಿ ಭಾರತೀಯ ಜೀವ ವಿಮಾ ನಿಗಮ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‌ ಇವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *