ಹೈಡನ್ ಬರ್ಗ್ ವರದಿಗೆ ಬೆಚ್ಚಿಬಿದ್ದ ಅದಾನಿ ಗ್ರೂಪ್‌ – ಒಂದೇ ದಿನ ₹46 ಸಾವಿರ ಕೋಟಿ ಕರಗಿದ ಕಂಪನಿಯ ಮೌಲ್ಯ..!

ಹೈಡನ್ ಬರ್ಗ್ ವರದಿಗೆ ಬೆಚ್ಚಿಬಿದ್ದ ಅದಾನಿ ಗ್ರೂಪ್‌ – ಒಂದೇ ದಿನ ₹46 ಸಾವಿರ ಕೋಟಿ ಕರಗಿದ ಕಂಪನಿಯ ಮೌಲ್ಯ..!

ನ್ಯೂಸ್‌ ಆ್ಯರೋ : ಅದಾನಿ ಸಮೂಹದ ಷೇರುಗಳಿಗೆ ಈ ಶುಕ್ರವಾರ ಶುಭವಾಗಿಲ್ಲ. ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆಯಾದ ಹೈಡನ್ ಬರ್ಗ್ ರಿಸರ್ಚ್ ಅದಾನಿ ಸಮೂಹದ ಬಗ್ಗೆ ಹಾನಿಕರ ಆರೋಪಗಳ ಪರಿಣಾಮವಾಗಿ ಷೇರುಗಳು ಕುಸಿತ ಕಂಡಿವೆ.

ಬಿಎಸ್ಇ ನಲ್ಲಿ ಅದಾನಿ ಟೋಟಲ್ ಗ್ಯಾಸ್ ನ ಷೇರುಗಳು ಶೇ 19.65 ರಷ್ಟು ಕುಸಿತ ಕಂಡಿದ್ದರೆ, ಅದಾನಿ ಟ್ರಾನ್ಸ್ಮಿಷನ್ ಶೇ 19 ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್ ಎನರ್ಜಿ ಶೇ 15.50 ರಷ್ಟು ಅದಾನಿ ಎಂಟರ್ ಪ್ರೈಸಸ್ ಶೇ 6.19 ರಷ್ಟು ಕುಸಿತ ಕಂಡಿದೆ.

ಅದಾನಿ ಪೋರ್ಟ್ ಹಾಗೂ ವಿಶೇಷ ಆರ್ಥಿಕ ಜೋನ್ ನ ಷೇರುಗಳು ಶೇ 5.31 ರಷ್ಟು ಅದಾನಿ ವಿಲ್ಮಾರ್ ಷೇರುಗಳು ಶೇ 5 ರಷ್ಟು ಹಾಗೂ ಅದಾನಿ ಪವರ್ ಷೇರುಗಳು ಶೇ4.99 ಕ್ಕೆ ಕುಸಿತ ಕಂಡಿದೆ ಎಂದು ಹೇಳಲಾಗಿದೆ.

ಆಧಾರ ರಹಿತ ವರದಿ:

ಹೈಡನ್‌ ಬರ್ಗ್ ರಿಸರ್ಚ್‌ನ ವರದಿಯ ನಂತರ ಒಂದೇ ದಿನ ಅದಾನಿ ಸಮೂಹ ಕಂಪನಿಯ ಮೌಲ್ಯ ₹ 46 ಸಾವಿರ ಕೋಟಿ ಕರಗಿದೆ. ಈ ವರದಿ ಆಧಾರ ರಹಿತ ಎಂದು ಅದಾನಿ ಗ್ರೂಪ್‌ ಪ್ರತಿಕ್ರಿಯಿಸಿದೆ.

ನಮ್ಮ ಸಂಸ್ಥೆಯ ವಿರುದ್ಧ ಪ್ರಕಟಿಸಿದ ವರದಿ ನಮಗೆ ಆಘಾತ ತಂದಿದೆ. ಭಾರತದ ಅತ್ಯುನ್ನತ ನ್ಯಾಯಾಲಯಗಳಿಂದ ಪರೀಕ್ಷಿಸಲ್ಪಟ್ಟ ಮತ್ತು ತಿರಸ್ಕರಿಸಲ್ಪಟ್ಟ ಹಳೆಯ, ಆಧಾರರಹಿತ ಆರೋಪಗಳನ್ನು ಆಧಾರಿಸಿ ವರದಿ ಮಾಡಲಾಗಿದೆ. ಹಣಕಾಸು ತಜ್ಞರು ಮತ್ತು ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಸಿದ್ಧಪಡಿಸಿದ ವಿವರವಾದ ವಿಶ್ಲೇಷಣೆ ಮತ್ತು ವರದಿಗಳ ಆಧಾರದ ಮೇಲೆ ಹೂಡಿಕೆದಾರ ಸಮುದಾಯವು ಯಾವಾಗಲೂ ಅದಾನಿ ಗ್ರೂಪ್‌ನಲ್ಲಿ ನಂಬಿಕೆಯನ್ನು ಇರಿಸಿದೆ.

ನಮ್ಮ ತಿಳಿವಳಿಕೆಯುಳ್ಳ ಮತ್ತು ಜ್ಞಾನವುಳ್ಳ ಹೂಡಿಕೆದಾರರು ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುವ ಏಕಪಕ್ಷೀಯ ಆಧಾರರಹಿತ ವರದಿಗಳಿಂದ ಪ್ರಭಾವಿತರಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ.

ವರದಿಯಲ್ಲಿ ಏನಿದೆ?:

ಎರಡು ವರ್ಷಗಳ ತನಿಖೆಯ ನಂತರ ಹೈಡೆನ್‌ಬರ್ಗ್ ವರದಿ ಪ್ರಕಟವಾಗಿದೆ. ದಶಕಗಳ ಅವಧಿಯ ವ್ಯವಹಾರದಲ್ಲಿ ಅದಾನಿ ಸಮೂಹ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಆರೋಪಿಸಿದೆ.

ಅದಾನಿ ಗ್ರೂಪ್‌ನ ಮಾಜಿ ಹಿರಿಯ ಕಾರ್ಯನಿರ್ವಾಹಕರು ಸೇರಿದಂತೆ ಹಲವಾರು ಜನರನ್ನು ಸಂಶೋಧನೆಗಾಗಿ ಸಂದರ್ಶಿಸಲಾಗಿದೆ. ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಹನ್ನೆರಡು ವಿವಿಧ ರಾಷ್ಟ್ರಗಳಲ್ಲಿ ಅದಾನಿ ಕಂಪನಿಗಳನ್ನು ವೀಕ್ಷಿಸಲಾಗಿದೆ. ಅದಾನಿ ಗ್ರೂಪ್‌ ಭಾರಿ ಸಾಲ ಮಾಡಿದೆ. ತಮ್ಮ ಸಾಲಗಳಿಗೆ ಷೇರುಗಳನ್ನೇ ಒತ್ತೆ ಇಡುತ್ತಿದೆ. ಇದರಿಂದಾಗಿ ಸಮೂಹದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಈ ವರದಿ ಷೇರುಪೇಟೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *