ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ – ಇಲ್ಲಿದೆ ಇವರ ಆದಾಯ, ವೈಯಕ್ತಿಕ ಬದುಕಿನ ಬಗ್ಗೆ ಚಿತ್ರಣ..

ಎಲಾನ್ ಮಸ್ಕ್ ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ – ಇಲ್ಲಿದೆ ಇವರ ಆದಾಯ, ವೈಯಕ್ತಿಕ ಬದುಕಿನ ಬಗ್ಗೆ ಚಿತ್ರಣ..

ನ್ಯೂಸ್ ಆ್ಯರೋ : ಟೆಸ್ಲಾ ಮುಖ್ಯಸ್ಥ, ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಇದೀಗ ಅವರ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಕುಳಿತಿದ್ದಾರೆ.

ಟೆಸ್ಲಾ ಷೇರುಗಳಲ್ಲಿ ಭಾರೀ ಕುಸಿತ ಕಂಡ ಬೆನ್ನಲ್ಲೇ ಎಲಾನ್ ಮಸ್ಕ್ ವಿಶ್ವದ ಮೊದಲ ಶ್ರೀಮಂತ ವ್ಯಕ್ತಿ ಎಂಬ ತನ್ನ ಸ್ಥಾನವನ್ನು ಕಳೆದುಕೊಂಡಿದ್ದರು. ಫೋರ್ಬ್ಸ್‌ ಪ್ರಕಾರ ಬರ್ನಾರ್ಡ್ ಅರ್ನಾಲ್ಟ್ ನಿವ್ವಳ ಆದಾಯವು 186.2 ಬಿಲಿಯನ್ ಡಾಲರ್ ಆಗಿದೆ. ಇನ್ನು ಭಾರತದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಗೌತಮ್ ಅದಾನಿ 134 ಬಿಲಿಯನ್ ಡಾಲರ್ ಆದಾಯವನ್ನು ಹೊಂದಿದ್ದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಕರೆಸಿಕೊಂಡಿದ್ದಾರೆ.

ಬರ್ನಾರ್ಡ್ ಅರ್ನಾಲ್ಟ್ ಆದಾಯದ ಹಿನ್ನೆಲೆ

ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಬರ್ನಾರ್ಡ್ ಅರ್ನಾಲ್ಟ್. ಲೂಯಿ ವಿಟಾನ್ ಐಷಾರಾಮಿ ವಸ್ತುಗಳ ಕಂಪನಿಯಾಗಿದೆ. ಪೋರ್ಬ್ಸ್ ಪ್ರಕಾರ ಡಿಸೆಂಬರ್ 2022ರ ಲೆಕ್ಕಾಚಾರದಂತೆ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬದ ನಿವ್ವಳ ಆದಾಯವು 188.6 ಬಿಲಿಯನ್ ಯುಎಸ್ ಡಾಲರ್ ಆಗಿದೆ.

ಬರ್ನಾರ್ಡ್ ಅರ್ನಾಲ್ಟ್ ಅವರ ವೈಯ್ಯಕ್ತಿಕ ಬದುಕು

ಬರ್ನಾರ್ಡ್ ಅರ್ನಾಲ್ಟ್ ಅವರಿಗೆ ಎರಡು ವಿವಾಹವಾಗಿದೆ. ಒಟ್ಟು ಐದು ಜನ ಮಕ್ಕಳಿದ್ದಾರೆ. ಎಲ್ಲ ಮಕ್ಕಳು ಎಲ್‌ವಿಎಂಎಚ್‌ಯ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್‌ನ ಎರಡನೇ ಪುತ್ರನಾದ ಆಂಟನಿ ಅರ್ನಾಲ್ಟ್ ಕ್ರಿಶ್ಚಿಯನ್ ಡಿಯಾರ್ ಎಸ್‌ಇ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

1949ರಲ್ಲಿ ಫ್ರಾನ್ಸ್‌ನ ರೌಬೆಕ್ಸ್‌ನಲ್ಲಿ ಜನಿಸಿ ಬರ್ನಾರ್ಡ್ ಅರ್ನಾಲ್ಟ್ ಅವರು ಇಕೋಲ್ ಪಾಲಿಟೆಕ್ನಿಕ್‌ನ ಎಲೈಟ್ ಇಂಜಿನಿಯರಿಂಗ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ತನ್ನ ಕುಟುಂಬದ ಉದ್ಯಮದಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಬಳಿಕ 1981ರಲ್ಲಿ ಯುಎಸ್‌ಗೆ ಹೋಗಿದ್ದರು.

ಬರ್ನಾರ್ಡ್ ಅರ್ನಾಲ್ಟ್ ಉದ್ಯಮದ ಚಿತ್ರಣ:

1984ರಲ್ಲಿ ಬರ್ನಾರ್ಡ್ ಅರ್ನಾಲ್ಟ್ ಫ್ರಾನ್ಸ್‌ಗೆ ವಾಪಾಸ್ ಬಂದಿದ್ದು, ಸಾಲದಲ್ಲಿ ಇರುವ ಟೆಕ್ಸ್‌ಟೈಲ್‌ ಗ್ರೂಪ್‌ ಬೌಸ್ಸಕ್ ಸೇಂಟ್ ಫ್ರೆರೆಸ್ ಅನ್ನು ತನ್ನ ಮಾಲೀಕತ್ವಕ್ಕೆ ಪಡೆದುಕೊಂಡರು. ಬಳಿಕ ಬೇರೆ ಉದ್ಯಮಗಳ ಷೇರನ್ನು ಖರೀದಿ ಮಾಡಿದರು. ಬಳಿಕ ಲಾಭ ಗಳಿಸಿದಾಗ ಎಲ್‌ವಿಎಂಎಚ್‌ನ ಎರಡು ಪ್ರಮುಖ ಅಂಗಸಂಸ್ಥೆಗಳಾದ ಲೂಯಿಸ್ ವಿಟಾನ್, ಮಾಯ್ಟ್ ಹೆನ್ನೆಸ್ಸಿಯನ್ನು ಖರೀದಿ ಮಾಡಿದರು.

ದಶಕಗಳಲ್ಲಿ ಬರ್ನಾರ್ಡ್ ಅರ್ನಾಲ್ಟ್ ಎಲ್‌ವಿಎಂಎಚ್‌ ಐಷಾರಾಮಿ ವಸ್ತುಗಳನ್ನು ಮಾರಾಟ ಮಾಡುವ ಕಂಪನಿಯನ್ನಾಗಿ ಪರಿವರ್ತಿಸಿದರು. ಐಷಾರಾಮಿ ಚಾಂಪೇನ್, ವೈನ್, ಸ್ಪಿರೀಟ್, ಫ್ಯಾಷನ್, ಚರ್ಮದ ವಸ್ತುಗಳು, ವಾಚ್‌ಗಳು, ಜ್ಯುವೆಲ್ಲರಿ, ಹೊಟೇಲ್, ಪರ್ಫ್ಯೂಮ್, ಮೇಕಪ್ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯನ್ನಾಗಿಸಿದರು.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *