ಷೇರು ಮಾರುಕಟ್ಟೆ ಪ್ರವೇಶಿಸಿದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ – ಸ್ವತಂತ್ರವಾಗಿ ಖರೀದಿ, ಮಾರಾಟಕ್ಕೂ‌ ಇನ್ನು ಮುಕ್ತ ಅವಕಾಶ

ಷೇರು ಮಾರುಕಟ್ಟೆ ಪ್ರವೇಶಿಸಿದ ಜಿಯೋ ಫೈನಾನ್ಷಿಯಲ್ ಸರ್ವಿಸಸ್ – ಸ್ವತಂತ್ರವಾಗಿ ಖರೀದಿ, ಮಾರಾಟಕ್ಕೂ‌ ಇನ್ನು ಮುಕ್ತ ಅವಕಾಶ

ನ್ಯೂಸ್ ಆ್ಯರೋ‌ : ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಬೇರ್ಪಟ್ಟ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ (ಜೆ.ಎಫ್.ಎಸ್.ಎಲ್.) ಷೇರು ಮಾರುಕಟ್ಟೆಗೆ ಪ್ರವೇಶಿಸಿದೆ. ನಿನ್ನೆಯಿಂದಲೇ ಜೆ.ಎಫ್.ಎಸ್.ಎಲ್. ಷೇರು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಾಗಿದೆ.

ಬೆಲೆ ನಿಗದಿ

ಜುಲೈ 20ರಂದು ನಡೆದ ವಿಶೇಷ ಬೆಲೆ ಅನ್ವೇಷಣೆ ಭಾಗವಾಗಿ ಹೊಸ ಸ್ಟಾಕ್ ನ ಪ್ರಿ ಲಿಸ್ಟಿಂಗ್ ಬೆಲೆಯು ಪ್ರತಿ ಷೇರಿಗೆ 261.85 ರೂ. ನಿಗದಿಪಡಿಸಲಾಗಿದೆ. ಎನ್.ಬಿ.ಎಫ್.ಸಿ.ಯ ಷೇರುಗಳನ್ನು ಕಳೆದ ವಾರ 1:1 ಅನುಪಾತದಲ್ಲಿ ಅರ್ಹ ಆರ್.ಐ.ಎಲ್. ಷೇರುದಾರರ ಖಾತೆಗಳಿಗೆ ಜಮೆ ಮಾಡಲಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಒಂದೇ ಷೇರನ್ನು ಜುಲೈ 20ರ ವರೆಗೆ ಉಳಿಸಿದವರಿಗೆ ಸ್ವಯಂಚಾಲಿತವಾಗಿ ಜೆ.ಎಫ್.ಎಸ್.ಎಲ್. ಷೇರು ಲಭಿಸುತ್ತದೆ.

ಜುಲೈಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಡಿ-ಮರ್ಜರ್ ಘೋಷಿಸಿತ್ತು. ಇದರೊಂದಿಗೆ ಜೆ.ಎಫ್.ಎಸ್.ಎಲ್. ಈ ವಲಯದ 5ನೇ ಅತಿದೊಡ್ಡ ಕಂಪೆನಿಯಾಗಿ ಹೊರ ಹೊಮ್ಮಿದೆ. ಇತ್ತೀಚೆಗೆ ಈ ಕಂಪೆನಿ ಮ್ಯೂಚುವಲ್ ಫಂಡ್ ವಲಯವನ್ನು ಪ್ರವೇಶಿಸಲು ಒಪ್ಪಂದ ಮಾಡಿಕೊಂಡಿತ್ತು.

ರಿಲಯನ್ಸ್ ಸ್ಟಾಟೆಜಿಕ್ ಇನ್ ವೆಸ್ಟ್ ಮೆಂಟ್ ಲಿಮಿಟೆಡ್ (ಆರ್.ಎಸ್.ಐ.ಎಲ್.) ನಿನ್ನೆಯಿಂದ ಆರ್.ಐ.ಎಲ್.ನಿಂದ ಬೇರ್ಪಡಿಸಲಾಗಿದೆ. ಈಗ ಅದರ ಹೆಸರು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಎಂದಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *