Paytm ಗೆ ಗುಡ್ ಬೈ ಹೇಳಿದ ಅಲಿಬಾಬ – ಭಾರತೀಯ ಡಿಜಿಟಲ್ ಪೇಮೆಂಟ್ ವೇದಿಕೆಯಿಂದ ಚೀನಾ ಕಂಪನಿ ಔಟ್

Paytm ಗೆ ಗುಡ್ ಬೈ ಹೇಳಿದ ಅಲಿಬಾಬ – ಭಾರತೀಯ ಡಿಜಿಟಲ್ ಪೇಮೆಂಟ್ ವೇದಿಕೆಯಿಂದ ಚೀನಾ ಕಂಪನಿ ಔಟ್

ನ್ಯೂಸ್ ಆ್ಯರೋ : ಫಿನ್ ಟೆಕ್ ಸಂಸ್ಥೆ ಪೇಟಿಎಂನಲ್ಲಿರುವ ತನ್ನ ಎಲ್ಲಾ ಷೇರುಗಳನ್ನು ಚೀನಾದ ಅಲಿಬಾಬ ಗ್ರೂಪ್ ಮಾರಾಟ ಮಾಡಿದೆ. ಇದರಿಂದಾಗಿ ಪೇಟಿಎಂ‌ ಷೇರುಗಳು ಶೇ.7.82ರಷ್ಟು ಕುಸಿದಿದ್ದು, 650.75 ರೂ.ಗೆ ಇಳಿದಿರುವ ಬಗ್ಗೆ ವರದಿಯಾಗಿದೆ.

ಪೇಟಿಎಂನ ಮಾತೃ ಸಂಸ್ಥೆ ಒನ್97 ಕಮ್ಯುನಿಕೇಶನ್ಸ್ ಲಿಮಿಟೆಡ್ ನಲ್ಲಿ ಶೇ.3.4 ರಷ್ಟು ಅಥವಾ 2.1 ಕೋಟಿ ಷೇರುಗಳನ್ನು ಚೀನಾ‌ ಮೂಲದ ಅಲಿಬಾಬ ಹೊಂದಿತ್ತು‌. ಈ ಷೇರುಗಳ ಮಾರುಕಟ್ಟೆ ಮೌಲ್ಯ ಸುಮಾರು 13 ಸಾವಿರ ಕೋಟಿಗಳಷ್ಟಿತ್ತು. ಸದ್ಯ ಈ ಎಲ್ಲ ಷೇರುಗಳನ್ನು ಅಲಿಬಾಬ ಮಾರಾಟ ಮಾಡಿದ್ದು, ಪೇಟಿಎಂನಿಂದ ಹೊರಗುಳಿದಿದೆ.

ಈ ವರ್ಷದ ಜನವರಿಯಲ್ಲಿ ತನ್ನ ಶೇ.6.26 ರಷ್ಟು ಷೇರುಗಳ ಶೇ. 3.1 ರಷ್ಟನ್ನು‌ ಮಾರಾಟ ಮಾಡಿತ್ತು. ಈ ಉಳಿದೆಲ್ಲ ಷೇರುಗಳಿಂದ ಹಿಂದಡಿಯಿಟ್ಟಿದೆ. ಇತ್ತೀಚೆಗಷ್ಟೇ ಅಲಿಬಾಬ ಜೊಮ್ಯಾಟೋ ಹಾಗೂ ಬಿಗ್ ಬ್ಯಾಸ್ಕೆಟ್‌ಗಳಲ್ಲಿಯೂ ತನ್ನ‌ ಪಾಲುದಾರಿಕೆಯನ್ನು ಹಿಂಪಡೆದಿದೆ. ಆ ಮೂಲಕ ಅಲಿಬಾಬ ಭಾರತವನ್ನು‌ ತೊರೆಯಲು ನಿರ್ಧರಿಸಿದಂತಿದೆ.

2023ನೇ ಆರ್ಥಿಕ ವರ್ಷದಲ್ಲಿ ಪೇಟಿಎಂ ಸಂಸ್ಥೆಯ ಆದಾಯ 2,062 ಕೋಟಿ ರೂಪಾಯಿಯಷ್ಟು ಹೆಚ್ಚಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 42% ಶೇಕಡಾ ಹೆಚ್ಚಾಗಿದೆ. ಇದರಿಂದಾಗಿ ಪೇಟಿಎಂ‌ ಗಣನೀಯ ಲಾಭ ಕಂಡಿತ್ತು.

ಆದರೆ ಇದೀಗ ಭಾರತೀಯ ಮೂಲದ ಪೇಟಿಎಂ‌ ಸಂಸ್ಥೆಯ ಷೇರು ಪಾಲುದಾರರು ನಷ್ಟದಲ್ಲೇ‌ ಮುಂದುವರೆಯುವಂತಾಗಿದೆ. ಐಪಿಒದಲ್ಲಿ 2,150 ರೂ. ನೀಡಿ ಹೂಡಿಕೆದಾರರು ಷೇರು ಖರೀದಿಸಿದ್ದರು. ಶುಕ್ರವಾರ(ಫೆ.10) ಈ ಷೇರುಗಳು‌ ಸುಮಾರು ಶೇ. 70% ರಷ್ಟು ಕುಸಿದಿದ್ದು, ಷೇರು ದರ 650 ರೂ. ಇತ್ತು ಎಂದು ವರದಿಯಾಗಿದೆ. ಇದರಿಂದಾಗಿ ಜಾಕ್ ಮಾ ನೇತೃತ್ವದ ಅಲಿಬಾಬ ಸಂಸ್ಥೆ ನಷ್ಟದಲ್ಲಿದ್ದು, ಭಾರತೀಯ ವ್ಯವಹಾರದಿಂದ ಹಿಂದಡಿಯಿಡಲು ಸಜ್ಜಾಗಿದೆ ಎನ್ನಲಾಗುತ್ತಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *