ಸೂರ್ಯನ ಭಾಗ ಕಳಚಿಬೀಳುತ್ತಿದೆಯಾ? – ತಲೆಕೆಡಿಸಿಕೊಂಡ ವಿಜ್ಞಾನಿಗಳು, ವೈರಲ್ ಆಯ್ತು ಬಾಹ್ಯಾಕಾಶ ತಜ್ಞರು ಶೇರ್ ಮಾಡಿದ ವಿಡಿಯೋ…!!

ಸೂರ್ಯನ ಭಾಗ ಕಳಚಿಬೀಳುತ್ತಿದೆಯಾ? – ತಲೆಕೆಡಿಸಿಕೊಂಡ ವಿಜ್ಞಾನಿಗಳು, ವೈರಲ್ ಆಯ್ತು ಬಾಹ್ಯಾಕಾಶ ತಜ್ಞರು ಶೇರ್ ಮಾಡಿದ ವಿಡಿಯೋ…!!

ನ್ಯೂಸ್ ಆ್ಯರೋ : ಸೂರ್ಯನ ಭಾಗ ಕಳಚಿ ಬೀಳುತ್ತಿದೆಯೇ? ಹೌದು, ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ಸೆರೆಹಿಡಿರುವ ಚಿತ್ರದ ಪ್ರಕಾರ, ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈ ಭಾಗದಿಂದ ಬೇರ್ಪಟ್ಟು, ಉತ್ತರದ ಧ್ರುವದ ಸುತ್ತ ಸುಂಟರಗಾಳಿಯಂಥ ಸುಳಿಯನ್ನು ಸೃಷ್ಟಿಸಿದೆ. ಇದು ವಿಜ್ಞಾನ ಲೋಕವನ್ನೇ ದಿಗ್ಭ್ರಮೆಗೊಳಿಸಿದೆ.

ಬಾಹ್ಯಾಕಾಶ ಹವಾಮಾನ ಮುನ್ಸೂಚಕರಾದ ಡಾ. ತಮಿಥಾ ಸ್ಕೋವ್ ಅವರು ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯನು ಸೌರ ಜ್ವಾಲೆಗಳನ್ನು ಹೊರಸೂಸುತ್ತಲೇ ಇರುತ್ತಾನೆ. ಅದು ಕೆಲವೊಮ್ಮೆ ಭೂಮಿಯ ಮೇಲಿನ ಸಂವಹನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಿಜ್ಞಾನಿಗಳು ಇತ್ತೀಚಿನ ಈ ಬೆಳವಣಿಗೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುವಂತೆ ಮಾಡಿದೆ.

ಇನ್ನೂ ಸೂರ್ಯನ ಮುಖ್ಯ ಮೇಲ್ಮೈಯಿಂದ ಭಾಗವು ಕಳಚಿಕೊಂಡು ಬಿದ್ದು, ಅದರ ಉತ್ತರ ಧ್ರುವದಲ್ಲಿ, ಬೃಹತ್ ಸುಳಿಯಲ್ಲಿ ಸುತ್ತುತ್ತಿದೆ ಎಂದು ಡಾ. ಸ್ಕೋವ್ ಅವರು ತಮ್ಮ ಟ್ವಿಟ್‌ನಲ್ಲಿ ಬರೆದುಕೊಂಡಿದ್ದರು. ಇದು ಸೂರ್ಯನ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸುವ ದೊಡ್ಡ ಪ್ರಕಾಶಮಾನವಾದ ಲಕ್ಷಣವಾಗಿದೆ. ಈ ಹಿಂದೆ ಈ ರೀತಿಯಾದ ಅನೇಕ ಉದಾಹರಣೆಗಳಿದ್ದರೂ, ಈ ಬಾರಿ ಈ ಘಟನೆಯು ವೈಜ್ಞಾನಿಕ ಸಮುದಾಯಕ್ಕೆ ಸವಾಲಾಗಿ ಪರಿಣಮಿಸಿದೆ.

ಈಗ ನಡೆದಿರುವ ಬೆಳವಣಿಗೆಯನ್ನು ಅವಲೋಕಿಸಿದಾಗ, ಸೂರ್ಯನಿಂದ ಹೊರ ಬಂದಿರುವ ಭಾಗವು 60 ಡಿಗ್ರಿ ಅಕ್ಷಾಂಶದಲ್ಲಿ ಸುತ್ತಲು ಸುಮಾರು 8 ಗಂಟೆಗಳನ್ನು ತೆಗೆದುಕೊಳುತ್ತಿದ್ದು, ಇದರರ್ಥ ಈ ಘಟನೆಯಲ್ಲಿ ಸಮತಲ ಗಾಳಿಯ ವೇಗವು ಅಂದಾಜು ಸೆಕೆಂಡ್‌ಗೆ 96 ಕಿ.ಮೀ. ಅಥವಾ ಸೆಕೆಂಡ್‌ಗೆ 60 ಮೈಲು ಇರಬಹುದು ಎಂದು ಡಾ. ಸ್ಕೋವ್ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ, ಈ ರೀತಿಯ ಸುಳಿಗಾಳಿಯನ್ನು ಎಂದೂ ಕಂಡಿಲ್ಲ. ಸೂರ್ಯನಿಂದ ಹೊರ ಬಂದ ಬೃಹತ್ ಭಾಗವು, ಸೌರ ವಾತಾವರಣದಲ್ಲಿ ಕರಗಿಹೋಯಿತು ಎಂದು ಮತ್ತೊಬ್ಬ ಸೋಲಾರ್ ಸೈಕಿಸ್ಟಿಟ್ ಸ್ಕಾಟ್ ಮ್ಯಾಕ್‌ತೋಷ್ ಅವರು ಹೇಳಿದ್ದಾರೆ

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *