ಮಹಾ ಪ್ರಬಂಧವನ್ನು 20 ನಿಮಿಷದಲ್ಲಿ ಬರೆದು ಬಿಸಾಕಿದ CHAT GTP -ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಕಂಡು ನಿಬ್ಬೆರಗಾದ ವಿಜ್ಞಾನಿಗಳು..!!

ಮಹಾ ಪ್ರಬಂಧವನ್ನು 20 ನಿಮಿಷದಲ್ಲಿ ಬರೆದು ಬಿಸಾಕಿದ CHAT GTP -ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಕಂಡು ನಿಬ್ಬೆರಗಾದ ವಿಜ್ಞಾನಿಗಳು..!!

ನ್ಯೂಸ್ ಆ್ಯರೋ : ಚಾಟ್ ಜಿಟಿಪಿ ಎಂದು ಕರೆಯಲ್ಪಡುತ್ತಿರುವ ಚಾಟ್ ಬಾಟ್ ಬಳಕೆದಾರರ ಜತೆ ಲೋಕಾಭಿರಾಮ ಸಂಭಾಷಣೆ ಮಾಡುವ, ಅವರ ವಿವಿಧ ಪ್ರಶ್ನೆಗಳಿಗೆ ಕ್ಷಣ ಮಾತ್ರದಲ್ಲಿ ಉತ್ತರಿಸುತ್ತಾ ಮೋಡಿ ಮಾಡುತ್ತಿದೆ‌. ಕಠಿಣ ಪರೀಕ್ಷೆಗಳಲ್ಲೂ ಜನರನ್ನು‌ ಇದು ಪಾಸ್ ಮಾಡಿಸುತ್ತಿದೆ. ಈ ಮಿತಿಮೀರಿದ ಬುದ್ಧಿಶಕ್ತಿ, ಸಾಮರ್ಥ್ಯವನ್ನು ಕಂಡು ವಿಜ್ಞಾನಿಗಳು ಬೆರಗಾಗಿದ್ದಾರೆ. ಇದರ ದುರ್ಬಳಕೆಯಾಗುವ ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಈ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯಕ್ಕೆ ಮತ್ತೊಂದು ನಿದರ್ಶನ ದೊರೆತಿದೆ‌.

ಬ್ರಿಸ್ಟಲ್ ಯೂನಿವರ್ಸಿಟಿಯ ಪದವೀಧರ ಪೀಟರ್ ಎಂಬವರು ಬ್ರಿಟನ್‌ನ ಕೇಂಬ್ರಿಡ್ಜ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಸೆಲ್ ಗ್ರೂಪ್ ಯೂನಿವರ್ಸಿಟಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಇತ್ತೀಚೆಗೆ ಉನ್ನತಾಧಿಕಾರಿಗಳ ಅನುಮತಿಯ ಮೇರೆಗೆ ತಮ್ಮ ಶೈಕ್ಷಣಿಕ ಕಾರ್ಯದ ಭಾಗವಾಗಿ ‘ಸಾಮಾಜಿಕ ನೀತಿಯ’ ಬಗ್ಗೆ 2000 ಪದಗಳ ಪ್ರಬಂಧವನ್ನು ಬರೆಯಲು ಚಾಟ್ ಜಿಟಿಪಿಗೆ ಆದೇಸಿಸಿದ್ದರು.

20 ನಿಮಿಷದಲ್ಲಿ ಪ್ರಬಂಧ ಬರೆದ ಚಾಟ್ ಜಿಟಿಪಿ

ಪೀಟರ್ ಪ್ರಬಂಧ ಬರೆಯಲು ಚಾಟ್ ಜಿಟಿಪಿಗೆ ಆದೇಶಿಸಿದ್ದೇ ತಡ, ಕೇವಲ 20 ನಿಮಿಷದಲ್ಲಿ ಕೃತಕ ಬುದ್ಧಿಮತ್ತೆಯ ಚಾಟ್ ಬಾಟ್ ಸುದೀರ್ಘ ಪ್ರಬಂಧವನ್ನು ಬರೆದು ಬಿಸಾಕಿದೆ‌. ಸಾಮಾನ್ಯವಾಗಿ ಇಂತಹ ಪ್ರಬಂಧವನ್ನು ಬರೆಯಲು 3 ತಿಂಗಳ ಅಧ್ಯಯನದ ಅವಶ್ಯಕತೆಯಿದೆ. ಪೀಟರ್ ಇದನ್ನು ಅಧ್ಯಾಪಕರಿಗೆ ತೋರಿಸಿ ಮೌಲ್ಯಮಾಪನ ಮಾಡುವಂತೆ ಕೇಳಿದರು‌. ಅಧ್ಯಾಪಕರು ಇದಕ್ಕೆ 100ಕ್ಕೆ 53 ಅಂಕಗಳನ್ನು‌ ನೀಡುವುದಾಗಿ ಘೋಷಿಸಿದ್ದರು. ಇದೀಗ ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು ಕಂಡು ಎಲ್ಲರೂ ಬೆಕ್ಕಸ ಬೆರಗಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧ್ಯಾಪಕರು, ‘ ಪ್ರಬಂಧ ಸಂಶಯಾಸ್ಪದವಾಗಿತ್ತು. ವಿಷಯ ವಿಶ್ಲೇಷಣೆಯಲ್ಲಿ ಅಷ್ಟೊಂದು ಆಳವಿರಲಿಲ್ಲ. ಬೌದ್ಧಿಕ ವಿಶ್ಲೇಷಣೆಯ ಅಗತ್ಯವಿರುತ್ತದೆ. ಆದರೆ ಚಾಟ್ ಜಿಟಿಪಿಯ ಪ್ರಬಂಧದಲ್ಲಿ ಅದು ಇರಲಿಲ್ಲ. ಸೋಮಾರಿ ವಿದ್ಯಾರ್ಥಿಗಳ ಕಿಲಾಡಿತನವನ್ನು ಇದು ಜಾಹೀರಾತುಪಡಿಸುತ್ತದೆ’ ಎಂದಿದ್ದಾರೆ.

ತೀವ್ರ ಸ್ಪರ್ಧೆಯ ನಡುವೆ ಆತಂಕ!
ಮೈಕ್ರೋಸಾಫ್ಟ್ ಅಭಿವೃದ್ದಿಪಡಿಸಿದ ಇಂತಹ ಕೃತಕ ಬುದ್ಧಿಮತ್ತೆ ಚಾಟ್ ಜಿಟಿಪಿಗೆ ಸ್ಪರ್ಧೆ ನೀಡುವಂತಹ ‘ಚಾಟ್ ಬಾಟ್ ಬಾರ್ಡ್’ ಅನ್ನು ಗೂಗಲ್ ಈಗಾಗಲೇ ಬಿಡುಗಡೆ ಮಾಡಿದೆ. ಇಂತಹ ಪೈಪೋಟಿಯ ನಡುವೆ, ಚಾಟ್ ಬೋಟ್ ಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಿತ ರೂಪದಲ್ಲಿ ಕಾಣಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಭರ್ಜರಿಯಾಗಿಯೇ ಬರೆಯಬಹುದು. ಜೊತೆಗೆ‌ ಇದರಿಂದಾಗಿ ಪರೀಕ್ಷೆಗಳಲ್ಲಿ ನಕಲು ಮಾಡಲು ಇದು ನೆರವಾಗಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Related post

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…
ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…

Leave a Reply

Your email address will not be published. Required fields are marked *