Skip to content
Live Updates
  • ಇಂದು ಗ್ರ್ಯಾಂಡ್​​ ಆಗಿ iPhone SE4 ಲಾಂಚ್; ಕಡಿಮೆ ಬೆಲೆಗೆ ಸಿಗುತ್ತೆ ಈ ಫೋನ್
  • ʼಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾʼ: ವಿವಾದ ಸೃಷ್ಟಿಸಿದ ಸಚಿವ ಜಾರ್ಜ್ ಹೇಳಿಕೆ
  • ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ; ಸ್ನಾನಕ್ಕೆ ಯೋಗ್ಯವಲ್ಲ, ವೈದ್ಯರ ಎಚ್ಚರಿಕೆ
  • ದಿನ ಭವಿಷ್ಯ 19-02-2025; ಇಂದಿನ ರಾಶಿಫಲ ಹೀಗಿದೆ
  • ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಮತ್ತೊಂದು ಶಾಕ್ : ಹಾಲಿನ ದರ ಹೆಚ್ಚಳಕ್ಕೆ ಸಿದ್ಧತೆ
    Saturday, June 7
    News Arrow Logo 1

    • ಕರ್ನಾಟಕ
    • ಕರಾವಳಿ
    • ಕ್ರೈಂ
    • ದೇಶ
    • ರಾಜಕೀಯ

    ಲೋಗೋ ಬದಲಿಸಿ ಗುಡ್‌ನ್ಯೂಸ್ ಕೊಟ್ಟ ಬಿಎಸ್‌ಎನ್‌ಎಲ್; ಜಿಯೋ, ಏರ್‌ಟೆಲ್‌ಗೆ ಬಿಗ್ ಶಾಕ್

    BY Team News ArrowOctober 24, 2024October 24, 2024
    BSNL New Logo
    Spread the love

    ನ್ಯೂಸ್ ಆ್ಯರೋ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್‌ ನಿಗಮ್‌ ಲಿಮಿಡೆಟ್‌ (ಬಿಎಸ್ಸೆನ್ನೆಲ್‌) ಸದ್ಯಕ್ಕೆ ಕರೆ ದರ ಏರಿಕೆ ಮಾಡುವುದಿಲ್ಲ ಎಂದು ಬಿಎಸ್‌ಎನ್‌ಎಲ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾರ್ಬಟ್‌ ರವಿ ಹೇಳಿದ್ದಾರೆ, ಇತ್ತೀಚೆಗೆ ಜಿಯೋ, ಏರ್‌ಟೆಲ್‌, ವೊಡಾಫೋನ್‌ಗಳು ಭಾರಿ ಪ್ರಮಾಣದಲ್ಲಿ ದರ ಹೆಚ್ಚಿಸಿದ ಬೆನ್ನಲ್ಲೇ ರವಿ ಈ ಹೇಳಿಕೆ ನೀಡಿ, ‘ನಮಗೆ ಗ್ರಾಹಕರ ಸಂತೋಷ ಮುಖ್ಯ. ಹೀಗಾಗಿ ಸದ್ಯ ಭವಿಷ್ಯದಲ್ಲಿ ದರ ಏರಿಕೆ ಇಲ್ಲ’ ಎಂದಿದ್ದಾರೆ.

    Custom Ad

    ಈ ನಡುವೆ ಮಂಗಳವಾರದಿಂದ ಬಿಎಸ್ಸೆನ್ನೆಲ್‌ ಕೆಲವು ಹೊಸ ಸೇವೆ ಪರಿಚಯಿಸಿದೆ. ಇದರಲ್ಲಿ ಆಟೋಮೇಟೆಡ್‌ ಸಿಮ್‌ ಕಿಯೋಸ್ಕ್‌ ಕೂಡ ಸೇರಿದೆ. ಇಲ್ಲಿ ದಿನದ 24 ಗಂಟೆಯೂ ಹೊಸ ಸಿಮ್‌ ಖರೀದಿಸಬಹುದು. ಅಪ್‌ಗ್ರೇಡ್‌ ಮಾಡಬಹುದು. ಪೋರ್ಟ್‌ ಮಾಡಬಹುದು. ಕ್ಯುಆರ್‌ ಕೋಡ್‌ನಲ್ಲೇ ಪೇಮೆಂಟ್‌ ಮಾಡಬಹುದು. ಸದ್ಯ 1.8 ಕೋಟಿ ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಸೇರಿದ್ದಾರೆ.

    ಈಗಾಗಲೇ 4ಜಿ ಸೇವೆ ಆರಂಭಿಸಿರುವ ಬಿಎಸ್‌ಎನ್‌ಎಲ್, ಎಲ್ಲ ಕಡೆ ಅದನ್ನು ವಿಸ್ತರಿಸುವ ಪ್ರಕ್ರಿಯೆ ನಡೆದಿದೆ. ಇನ್ನು ಮುಂದೆ 5ಜಿ ಸೇವೆಯನ್ನೂ ಆರಂಭಿಸಲಿದೆ. ಮೊದಲು ಈ ಸೇವೆ ಮುಂಬೈ ಹಾಗೂ ದಿಲ್ಲಿ ನಗರಗಳಲ್ಲಿ ಆರಂಭವಾಗಲಿದೆ.

    ಒಂದು ದಶಕದಿಂದಲೂ ಖಾಸಗಿ ಪ್ರಭಾವದ ಜತೆಗೆ ಹಲವಾರು ನೀತಿಗಳಿಂದ ನಲುಗಿ ಮುಚ್ಚುವ ಹಂತಕ್ಕೂ ಹೋಗಿರುವ ಬಿಎಸ್‌ಎನ್‌ಎಲ್‌ಗೆ ಹೊಸ ರೂಪ ನೀಡುವ ಪ್ರಯತ್ನ ಶುರುವಾಗಿದೆ. ಇದರ ಮೊದಲ ಹಂತವಾಗಿ ಬಿಎಸ್‌ಎನ್‌ಎಲ್‌ ಲೋಗೋ ಬದಲಾಗಿದೆ. ನೀಲಿ- ಬಿಳಿ ಬಣ್ಣದಲ್ಲಿದ್ದ ಲೋಗೋ ಈಗ ಕೇಸರಿ ಬಣ್ಣವನ್ನು ಬದಲಿಸಿಕೊಂಡಿದೆ. ಈ ಮೂಲಕ ಹೊಸ ಮನ್ವಂತರಕ್ಕೆ ಅಣಿಯಾಗುತ್ತಿದೆ. ಇದರೊಟ್ಟಿಗೆ ಹೊಸ ಹೊಸ ಪ್ಲಾನ್‌ಗಳನ್ನು ರೂಪಿಸಿ ಬಿಎಸ್‌ಎನ್‌ಎಲ್‌ ಸಿಮ್‌ ಹಾಗೂ ನೆಟ್‌ ವರ್ಕ್‌ ಅನ್ನು ಜನ ಬಳಕೆ ಮಾಡುವಂತೆ ಪ್ರೇರೇಪಿಸುತ್ತಿದೆ.‌

    Hon'ble Minister of Communications Sh @JM_Scindia launched BSNL's NEW LOGO, in the presence of Hon'ble MoS Dr @PemmasaniOnX

    The new logo reflects BSNL's unwavering mission of "Connecting Bharat – Securely, Affordably, and Reliably” pic.twitter.com/IExoGXJGSR

    — DoT India (@DoT_India) October 22, 2024
    Previous Post

    ಮೋದಿಯನ್ನು ತುಂಡು ತುಂಡು ಮಾಡುವೆ ಎಂದ ಸಂಸದ; ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿ ಇಮ್ರಾನ್‌

    Next Post

    ಬೆಸ್ಟ್ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಆಫರ್; ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಇಷ್ಟೊಂದು ಕಡಿಮೆ ಬೆಲೆಗೆ ಸಿಗ್ತಿದೆ

    Leave a Comment

    Leave a Reply Cancel reply

    Your email address will not be published. Required fields are marked *

    Recent Posts

    • ಇಂದು ಗ್ರ್ಯಾಂಡ್​​ ಆಗಿ iPhone SE4 ಲಾಂಚ್; ಕಡಿಮೆ ಬೆಲೆಗೆ ಸಿಗುತ್ತೆ ಈ ಫೋನ್
    • ʼಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾʼ: ವಿವಾದ ಸೃಷ್ಟಿಸಿದ ಸಚಿವ ಜಾರ್ಜ್ ಹೇಳಿಕೆ
    • ಕುಂಭ ಮೇಳದ ನೀರಿನಲ್ಲಿ ಮಲ ಬ್ಯಾಕ್ಟೀರಿಯಾ ಪತ್ತೆ; ಸ್ನಾನಕ್ಕೆ ಯೋಗ್ಯವಲ್ಲ, ವೈದ್ಯರ ಎಚ್ಚರಿಕೆ
    • ದಿನ ಭವಿಷ್ಯ 19-02-2025; ಇಂದಿನ ರಾಶಿಫಲ ಹೀಗಿದೆ
    • ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಮತ್ತೊಂದು ಶಾಕ್ : ಹಾಲಿನ ದರ ಹೆಚ್ಚಳಕ್ಕೆ ಸಿದ್ಧತೆ

    Categories

    • Blog
    • Popular
    • ಆರೋಗ್ಯ ಮಾಹಿತಿ
    • ಉದ್ಯಮ ಉದ್ಯೋಗ
    • ಎಡಿಟರ್ ಟಾಕ್
    • ಕರಾವಳಿ
    • ಕರ್ನಾಟಕ
    • ಕ್ರೀಡೆ
    • ಕ್ರೈಂ
    • ಜಾಹೀರಾತು
    • ಟೆಕ್
    • ದಿನ ಭವಿಷ್ಯ
    • ದೇಶ
    • ಬೆಂಗಳೂರು
    • ಮನರಂಜನೆ
    • ರಾಜಕೀಯ
    • ಲೈಫ್ ಸ್ಟೈಲ್
    • ವಿಜ್ಞಾನ ವಿಶೇಷ
    • ವಿದೇಶ
    • ವೈರಲ್ ನ್ಯೂಸ್

    Related Posts

    Spam
    ಟೆಕ್

    ಅದ್ಭುತ ಫೀಚರ್​ ಪರಿಚಯಿಸಿದೆ ಜಿಯೋ; ಇನ್ಮುಂದೆ ಗ್ರಾಹಕರಿಗೆ ಟೆನ್ಶನ್​ ಇರಲ್ಲ

    Spread the loveನ್ಯೂಸ್ ಆ್ಯರೋ: ಸ್ಪ್ಯಾಮ್ ಕರೆಗಳು, ಮೆಸೇಜ್​ಗಳು ದಿನದಿನಕ್ಕೆ ಹೆಚ್ಚುತ್ತಿವೆ. ಈ ಕರೆಗಳು ಮತ್ತು ಸಂದೇಶಗಳನ್ನು ಎಐ ಮತ್ತು ಮಷಿನ್​ ಲರ್ನಿಂಗ್​ ನಿಯಂತ್ರಿಸುತ್ತೆದೆ ಎಂದು ಎಂದಿಗೂ ಭಾವಿಸಬೇಡಿ. ಏಕೆಂದರೆ, ಸೈಬರ್​ ಅಪರಾಧಿಗಳೂ

    smart mobiles
    ಟೆಕ್

    ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಫರ್; ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​​, ಟ್ಯಾಬ್ಲೆಟ್​​ ಮೇಲೆ ಭರ್ಜರಿ ರಿಯಾಯಿತಿ

    Spread the loveನ್ಯೂಸ್ ಆ್ಯರೋ: ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗಾಗಿ ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಭರ್ಜರಿ ಆಫರ್​ ನೀಡಿದೆ. ಕೆಲವು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸ್ಮಾರ್ಟ್​ಫೋನ್​, ಲ್ಯಾಪ್​ಟಾಪ್​​

    Kinder Joys Harry Potter
    ಟೆಕ್

    “ಹ್ಯಾರಿ ಪಾಟರ್” ಪ್ಲಾನ್ ಗ್ರ್ಯಾಂಡ್ ಸಕ್ಸಸ್; ಭಾರತದಲ್ಲಿ ಮಕ್ಕಳನ್ನು ಆಕರ್ಷಿಸಿದ ಕಿಂಡರ್ ಜಾಯ್

    Spread the loveನ್ಯೂಸ್ ಆ್ಯರೋ: ಕಿಂಡರ್ ಜಾಯ್ ಮಕ್ಕಳ ಅತ್ಯಂತ ಪ್ರೀತಿಯ ಚಾಕೋಲೇಟ್ ಬ್ರ್ಯಾಂಡ್ . ಅಂಗಡಿಗೆ ಹೋದಾಗ ಮಕ್ಕಳು ಮೊದಲು ಡಿಮ್ಯಾಂಡ್ ಮಾಡೋದು ಕಿಂಡರ್ ಜಾಯನ್ನು. ಮಕ್ಕಳನ್ನು ಸೆಳೆಯಲು ಕಿಂಡರ್ ಜಾಯ್ ನಾನಾ ಪ್ರಯತ್ನಗಳನ್ನು ಮಾಡ್ತಿರು

    Copyright © 2024 | News Arrow |About Us | Privacy Policy | Disclaimer | Contact Us | WordPress Theme: Xews Lite
      Contact Us

        This form is powered by:Sticky Floating Forms Lite