ಒಂದು ಹೆಜ್ಜೆ ಮುಂದಿಟ್ಟ ಬಿಎಸ್‌ಎನ್‌ಎಲ್: ಕಡಿಮೆ ಬೆಲೆಗೆ 3300 GB ಡೇಟಾ

ನ್ಯೂಸ್ ಆ್ಯರೋ: ಕಳೆದ ಮೂರ್ನಾಲ್ಕು ತಿಂಗಳಿನಿಂದ ಬಿಎಸ್‌ಎನ್ಎಲ್ ಕೈಗೆಟಕುವ ಪ್ಲಾನ್‌ಗಳಿಂದ ಟೆಲಿಕಾಂ ಅಂಗಳದಲ್ಲಿ ಬಿಎಸ್‌ಎನ್‌ಎಲ್ ಸದ್ದು ಮಾಡುತ್ತಿದೆ. ಖಾಸಗಿ ಕಂಪನಿಗಳು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಗ್ರಾಹಕರನ್ನು ಆಕರ್ಷಿಸಲು ಬಿಎಸ್ಎನ್‌ಎಲ್ ಹೊಸ ಆಫರ್‌ಗಳನ್ನು ಪರಿಚಯಿಸುತ್ತಿದೆ. ಹೈ ಸ್ಪೀಡ್ ಇಂಟರ್‌ನೆಟ್ ಕನೆಕ್ಷನ್ ನೀಡಲು ಬಿಎಸ್ಎನ್‌ಎಲ್ ಏರ್ ಫೈಬರ್ ಮುಂದಾಗಿದ್ದು, ನಾಲ್ಕು ಪ್ಲಾನ್‌ಗಳನ್ನು ಇಂಟ್ರಡ್ಯೂಸ್ ಮಾಡಿದೆ. ಏರ್‌ಫೈಬರ್ ಬ್ರಾಡ್‌ಬ್ಯಾಂಡ್ ಸರ್ವಿಸ್‌ಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಈ ಮೂಲ ರಿಲಯನ್ಸ್ ಜಿಯೋ ಮತ್ತು ಏರ್‌ಟಲ್ ಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ.
ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ 5ಜಿ ಸರ್ವಿಸ್ ಆರಂಭಿಸುವ ಮೊದಲೇ ಬಎಸ್‌ಎನ್ಎಲ್ ವಯರ್‌ಲೆಸ್ ಆಕ್ಸೆಸ್ ನೀಡುತ್ತಿದೆ. ಹೌದು. . ಬಿಎಸ್‌ಎನ್ಎಲ್ ಏರ್‌ಫೈಬರ್ ಸರ್ವಿಸ್ ಭಾರತದ ಎಲ್ಲಾಮ ಪ್ರದೇಶಗಳಲ್ಲಿಯೂ ಲಭ್ಯವಿದೆ. ಹೈ ಕನೆಕ್ಟಿವಿಟಿ ಜೊತೆ ಅತ್ಯಧಿಕ ಡೇಟಾ ಗ್ರಾಹಕರಿಗೆ ನೀಡಲಾಗುತ್ತಿದೆ. ಸದ್ಯ ರೂ.499, ರೂ.699 ಮತ್ತು ರೂ.899 ಎಂಬ ಮೂರು ಬಿಎಸ್‌ಎನ್ಎಲ್ ಏರ್ ಫೈಬರ್ ಸರ್ವಿಸ್ ಪ್ಲಾನ್‌ಗಳು ಜನಪ್ರಿಯವಾಗಿವೆ.
499 ರೂಪಾಯಿಯ ಬೇಸಿಕ್ ಪ್ಲಾನ್‌ನಲ್ಲಿ ಗ್ರಾಹಕರಿಗೆ 30 Mbps ಸ್ಪೀಡ್‌ನಲ್ಲಿ 3,300GB ಡೇಟಾ ಸಿಗುತ್ತದೆ. ಡೇಟಾ ಲಿಮಿಟ್ ಮುಕ್ತಾಯವಾದ ಬಳಿಕ ಸ್ಪೀಡ್ 2 Mbps ಆಗುತ್ತದೆ. 499 ರೂಪಾಯಿ ಬೇಸಿಕ್ ಪ್ಲಾನ್ ಒಂದು ತಿಂಗಳದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಇದೇ ರೀಚಾರ್ಜ್ ಪ್ಲಾನ್‌ನಲ್ಲಿ ರಿಜಿಸ್ಟ್ ಸಂಖ್ಯೆಗೆ ಅನ್‌ಲಿಮಿಟೆಡ್ ಕಾಲಿಂಗ್ ಸೌಲಭ್ಯ ಸಿಗುತ್ತದೆ.
ಬಿಎಸ್ಎನ್ಎಲ್ ಏರ್‌ಫೈಬರ್ ಸರ್ವಿಸ್ ನ 699 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ 40 Mbps ವೇಗದಲ್ಲಿ 3,300GB ಡೇಟಾ ಸಿಗಲಿದೆ. ಡೇಟಾ ಲಿಮಿಟ್ ಮುಕ್ತಾಯವಾಗುತ್ತಿದ್ದಂತೆ ಸ್ಪೀಡ್ 4 Mbps ಆಗುತ್ತದೆ. ಈ ಪ್ಲಾನ್‌ನಲ್ಲಿ ರಿಜಿಸ್ಟರ್ ಸಂಖ್ಯೆಗೆ ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ಸಹ ನೀಡಲಾಗುತ್ತದೆ.
ಬೇಸಿಕ್ ವ್ಯಾಲ್ಯೂ ಪ್ಲಾನ್ ಬೆಲೆ 899 ರೂಪಾಯಿ ಆಗಿದೆ. ಗ್ರಾಹಕರಿಗೆ 50 Mbps ವೇಗದಲ್ಲಿ 3,300GB ಡೇಟಾ ಸಿಗಲಿದೆ. ಡೇಟಾ ಲಿಮಿಟ್ ಮುಕ್ತಾಯವಾಗುತ್ತಿದ್ದಂತೆ ಸ್ಪೀಡ್ 6 Mbps ಆಗುತ್ತದೆ. ಈ ಪ್ಲಾನ್‌ನಲ್ಲಿ ರಿಜಿಸ್ಟರ್ ಸಂಖ್ಯೆಗೆ ಅನ್‌ಲಿಮಿಟೆಡ್ ಕಾಲಿಂಗ್ ಆಫರ್ ಸಹ ನೀಡಲಾಗುತ್ತದೆ.
ಬುಕ್ ಮಾಡೋದು ಹೇಗೆ?
Step 1: ಬಿಎಸ್‌ಎನ್ಎಲ್ ಏರ್ ಫೈಬರ್ ಬುಕ್ ಮಾಡಿಕೊಳ್ಳಲು ಗೂಗಲ್ ನಲ್ಲಿ “book my fibre,” ಸರ್ಚ್ ಮಾಡಬೇಕು. ಆನಂತರ ಸಿಗುವ https://bookmyfiber.bsnl.co.in/. ಲಿಂಕ್ ಮೇಲೆ ಕ್ಲಿಕ್ ಮಾಡಿ.
Step 2: ನಂತರ ಅಲ್ಲಿ ಕೇಳಲಾಗುವ ಮಾಹಿತಿಯನ್ನು ಎಂಟ್ರಿ ಮಾಡಬೇಕು.
Step 3: ಕೊನೆಗೆ ನಿಮ್ಮಿಷ್ಟದ ಪ್ಲಾನ್ ಆಯ್ಕೆ ಮಾಡಿಕೊಂಡು ಅಡ್ರೆಸ್ ನಮೂದಿಸಬೇಕು. ನಂತರ ಅಲ್ಲಿ ಕೇಳಲಾಗುವ ಮಾಹಿತಿಯನ್ನು ವಿವರವಾಗಿ ನಮೂದಿಸಿದ್ರೆ ಬಿಎಸ್ಎನ್‌ಎಲ್ ಏರ್‌ಫೈಬರ್ ಸೇವೆ ಸಿಗುತ್ತದೆ.
Leave a Comment