ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತ; ರದ್ದಾಗಿರುವ ಕಾರ್ಡ್‌ಗೆ ರೇಷನ್ ಸಿಗುತ್ತಾ ?

Apl bpl card
Spread the love

ನ್ಯೂಸ್ ಆ್ಯರೋ: ರಾಜ್ಯದಲ್ಲಿ ಈವರೆಗ ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗೆ ಬದಲಾಗಿರುವ ಎಲ್ಲ ಕಾರ್ಡ್‌ಗಳನ್ನು ಕಾರ್ಡ್‌ಗಳನ್ನು ತೆಗೆದುಕೊಂಡು ಹೋದರೂ ಅವರಿಗೆ ಈ ಹಿಂದಿನಂತೆಯೇ ರೇಷನ್ ಕೊಡಲಾಗುವುದು. ಇನ್ನು ಒಂದು ವಾರದಲ್ಲಿ ಈಗಾಗಲೇ ಬದಲಾಗಿರುವ ಎಲ್ಲ ಅರ್ಹರ ರೇಷನ್‌ ಕಾರ್ಡ್‌ಗಳನ್ನು ವಾಪಸ್ ಕೊಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 4,366 ಸರ್ಕಾರಿ ಉದ್ಯೋಗಿಗಳ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ. 98,473 ಐಟಿ ರಿಟರ್ನ್​​ ಪಾವತಿದಾರರ ಬಳಿ BPL ಕಾರ್ಡ್‌ ಇವೆ. ಒಟ್ಟು 1,2,509 ಅನರ್ಹ BPL ಕಾರ್ಡ್‌ಗಳಿವೆ. ಅದರಲ್ಲಿ ರಾಜ್ಯಾದ್ಯಂತ 8,647 ಬಿಪಿಎಲ್ ಕಾರ್ಡ್‌ ರದ್ದು ಮಾಡಲಾಗಿದೆ. ಇದರಲ್ಲಿ ಬಡವರ ಕಾರ್ಡ್ ರದ್ದು ಆಗಿದ್ದರೆ ಒಂದು ವಾರದಲ್ಲಿ ವಾಪಸ್ ಹಳೆಯ ಬಿಪಿಎಲ್ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಅಂದರೆ ಒಟ್ಟಾರೆ ರಾಜ್ಯದಲ್ಲಿ ಶೇ.66ರಷ್ಟು ಬಿಪಿಎಲ್​ ಕಾರ್ಡ್‌ಗಳಿವೆ. ಸರ್ಕಾರಿ ನೌಕರರನ್ನು ಪರಿಶೀಲಿಸಿ ಎಪಿಎಲ್‌ಗೆ ಪರಿಷ್ಕರಣೆ ಮಾಡಲಾಗಿದೆ. ಆದಾಯ ತೆರಿಗೆದಾರರ ಮಾಹಿತಿ ಪಡೆದು ಕಾರ್ಡ್​ ಪರಿಷ್ಕರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಸೂಚಿಸಿದ ಮಾನದಂಡಗಳ ಅನ್ವಯ ಪರಿಶೀಲಿಸಿ ಪರಿಷ್ಕರಣೆ ಮಾಡಲಾಗುತ್ತದೆ. ಸರ್ಕಾರಿ, ಅರೆ ಸರ್ಕಾರಿ ನೌಕರರ 4,036 ಕಾರ್ಡ್​​ ಅನರ್ಹ ಮಾಡಲಾಗಿದೆ. ಆದಾಯ ತೆರಿಗೆ ಪಾವತಿಸುವ 98,473 ಜನರ ಕಾರ್ಡ್​ ರದ್ದುಗೊಳಿಸಲಾಗುದೆ. ಇದೀಗ 1,02,509 ಕಾರ್ಡ್‌ಗಳನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ ಎಂದರು.

ಇದರಲ್ಲಿ ಬಡವರ BPL ಕಾರ್ಡ್ ರದ್ದಾಗಿದ್ದರೂ ಅಕ್ಕಿ ಕೊಡುತ್ತೇವೆ. ರದ್ದಾಗಿರುವ ಎಲ್ಲ ಕಾರ್ಡ್‌ಗಳ ವಾಪಸ್ ಪಡೆಯುತ್ತೇವೆ. ಮುಂದಿನ 7 ದಿನಗಳಲ್ಲಿ ಬಿಪಿಎಲ್ ಕಾರ್ಡ್‌ ಸಮಸ್ಯೆ ಬಗೆಹರಿಸುತ್ತೇವೆ. ಈಗಾಗಲೇ ರದ್ದಾದ ಕಾರ್ಡ್ ತೆಗೆದುಕೊಂಡು ಹೋದರೂ ಅಕ್ಕಿ ಕೊಡಲು ಪಡಿತರ ಸರಬರಾಜುದಾರರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಯಾರು ಅನರ್ಹರು ಎಂಬುದನ್ನು ರಾಜ್ಯಾದ್ಯಂತ ಮನೆ ಮನೆಗೆ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ಮಾಡಿಸಿದ ನಂತರವೇ ಅನರ್ಹರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಸಚಿವ ಕೆ.ಎಚ್ ಮುನಿಯಪ್ಪ ಮಾಹಿತಿ ನೀಡಿದರು.

Leave a Comment

Leave a Reply

Your email address will not be published. Required fields are marked *

error: Content is protected !!