ಕೋಮು ವೈಷಮ್ಯದ ಪೋಸ್ಟ್; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್

shakunthala-nataraj
Spread the love

ನ್ಯೂಸ್ ಆ್ಯರೋ: ಸಾಮಾಜಿಕ ಜಾಲತಾಣದಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಆರೋಪದಡಿ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅರೆಸ್ಟ್ ಆಗಿದ್ದಾರೆ.

ಶಕುಂತಲಾ ನಟರಾಜ್ ವಿರುದ್ಧ ನವೆಂಬರ್ 24ರಂದು ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ತುಮಕೂರು ಜಯನಗರ ಪೊಲೀಸರು ಶಕುಂತಲಾರನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕೋಮು ವೈಷಮ್ಯದ ಪೋಸ್ಟ್ ಹಾಕಿದ ಹಿನ್ನೆಲೆ ಪೊಲೀಸ್ ಕಾನ್ಸ್‌ಟೇಬಲ್ ಉಮಾಶಂಕರ್ ದೂರು ನೀಡಿದ್ದರು. ಅದರಂತೆ ಕಲಂ 299 ಬಿಎನ್‌ಎಸ್ ಅಡಿ ಎಫ್‌ಐಆರ್ ದಾಖಲಾಗಿತ್ತು. ಬುಧವಾರ ಸಂಜೆ ಪೊಲೀಸರು ಶಕುಂತಲಾರನ್ನು ಬಂಧಿಸಿದ್ದಾರೆ.

ಶಕುಂತಲಾ ಪೋಸ್ಟ್ ಏನು?

ಯೋಗಿಜಿ ರಾಜ್ಯದಲ್ಲಿ ಕಲ್ಲು ತೂರಾಟ ನಡೆಸಿದ್ದರಿಂದ ಅಲ್ಲಾ ಸಹಾಯಕ್ಕೆ ಬರಲಿಲ್ಲಾ. ಆದ್ದರಿಂದ ಜೀವ ಹೋಗಿದೆ ಅಷ್ಟೇ. ಮೇಲೆ ಹೋದಮೇಲೆ 72 ಜನ ಸುಂದರಿಯರು ಸಿಗುತ್ತಾರೆ ಎಂದು ಬರೆದುಕೊಂಡಿದ್ದರು.

ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿರೋದನ್ನು ಖಂಡಿಸಿ ಶಕುಂತಲಾ ಮತ್ತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಯತ್ನಾಳ್, ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!