ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಈ ನಾಲ್ವರು ಹೋಗೋದು ಖಚಿತ ?: ಚೈತ್ರಾ, ಹನುಮಂತು ಅವರನ್ನೇ ಮೊದಲು ಟಾರ್ಗೆಟ್ ಮಾಡಿದ್ರಾ ರಜತ್ ?
ನ್ಯೂಸ್ ಆ್ಯರೋ: ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇನ್ನೇನು ಸಮೀಪಿಸುತ್ತಿದೆ. ಮನೆಯ ಸ್ಪರ್ಧಿಗಳು ಫುಲ್ ಅಲರ್ಟ್ ಆಗಿ ಆಡುತ್ತಿದ್ದಾರೆ. ಕ್ಯಾಪ್ಟನ್ ಪಟ್ಟ ಕೂಡ ಬದಲಾವಣೆ ಆಗಿದ್ದು ಭವ್ಯಗೌಡ ಬಳಿಕ ರಜತ್ ಕ್ಯಾಪ್ಟನ್ ಆಗಿದ್ದಾರೆ. ಇಂದಿನ ಪ್ರೋಮೋ ರಿಲೀಸ್ ಆಗಿದ್ದು ಚೈತ್ರಾ ಹಾಗೂ ನಾಯಕ ರಜತ್ ಮಧ್ಯೆ ಸಖತ್ ಟಾಕ್ ವಾರ್ ನಡೆದಿದೆ. ಮನೆಯ ಖಳನಾಯಕ ಆಗಿರುವ ರಜತ್, ಸ್ಪರ್ಧಿಗಳ ಕೊರಳಿಗೆ ಬೋರ್ಡ್ ಹಾಕಿದ್ದು ಇವರಲ್ಲಿ ಒಬ್ಬರು ಮನೆ ಖಾಲಿ ಮಾಡುವುದು ಗ್ಯಾರಂಟಿ ಆಗಿದೆ.
ಬಿಗ್ಬಾಸ್ ಕೊಟ್ಟಿರುವ ಟಾಸ್ಕ್ನಲ್ಲಿ ರಜತ್ ಅವರು ಖಳನಾಯಕ ಆಗಿ ಆಡುತ್ತಿದ್ದಾರೆ. ಇನ್ನು ರಜತ್ ಅವರು ಮನೆಗೆ ಬಂದ ಮೇಲೆ ಯಾವತ್ತೂ ಹನುಮಂತು, ಚೈತ್ರಾ ಪರವಾಗಿ ಮಾತನಾಡಿಲ್ಲ ಎಂದು ಹೇಳಬಹುದು. ಅದರಂತೆ ರಜತ್ ಪರವಾಗಿಯೂ ಈ ಇಬ್ಬರು ಒಳ್ಳೆಯ ಮನಸ್ಥಿತಿ ಹೊಂದಿಲ್ಲ. ಆರಂಭದಿಂದಲೂ ಇವರಲ್ಲಿ ಮುನಿಸು ಸ್ಫೋಟವಾಗುತ್ತಲೇ ಇದೆ.
ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಬಿಗ್ಬಾಸ್ ಹೇಳಿದ್ದಾರೆ. ಇದಕ್ಕೆ ಹನುಮಂತು, ಚೈತ್ರಾ, ಗೌತಮಿ, ಭವ್ಯಗೌಡ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಬೋರ್ಡ್ ಹಾಕಿದ್ದಾರೆ. ಅಂದರೆ ಈ ಐವರಲ್ಲಿ ಈ ವಾರ ಒಬ್ಬರು ಹೊರ ಬರುವುದು ಪಕ್ಕಾ ಆಗಿದೆ.
ಇದರ ಜೊತೆಗೆ 5 ಸ್ಪರ್ಧಿಗಳು ಫಿನಾಲೆಗೂ ಹೋಗುವುದಿಲ್ಲ ಎನ್ನುವುದು ಖಚಿತ ಎಂದು ಹೇಳಿದಂತೆ ಆಗಿದೆ. ಅಂದರೆ ಈ 5 ಸ್ಪರ್ಧಿಗಳಿಗೆ ಫಿನಾಲೆಗೆ ಹೋಗುವ ಅರ್ಹತೆ ಇಲ್ಲವೆಂದು ಮೊದಲೇ ಸೂಚನೆ ಕೊಟ್ಟಂತೆ ಆಗಿದೆ. ಅಲ್ಲದೇ ಮಂಜು, ತ್ರಿವಿಕ್ರಮ್, ರಜತ್ ಹಾಗೂ ಧನರಾಜ್ ಈ 4 ಸ್ಪರ್ಧಿಗಳು ಫೈನಲ್ಗೆ ಟಿಕೆಟ್ ಪಡೆಯುತ್ತಾರೆ ಎಂದು ಈ ಟಾಸ್ಕ್ ಮೂಲಕ ಗೊತ್ತಾಗುತ್ತದೆ.
ಇನ್ನು ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಮಾತಿನ ಸಮರ ನಡೆದಿದ್ದು ಎಲ್ಲರ ಗಮನ ಸೆಳೆದಿದೆ. ರಜತ್ ಹಾಗೂ ಚೈತ್ರಾ ಇಬ್ಬರು ಪರಸ್ಪರ ಬೈದಾಡಿಕೊಳ್ಳುವಾಗ ಉಳಿದ ಸ್ಪರ್ಧಿಗಳು ಕುಳಿತು ನಕ್ಕು ಎಂಜಾಯ್ ಮಾಡಿದ್ದಾರೆ. ಆದರೆ ವಾರದ ಕೊನೆಯಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.
Leave a Comment