ಸದ್ದಿಲ್ಲದೇ ಎಂಗೇಜ್ ಆದ ಬಿಗ್ಬಾಸ್ ವಿನ್ನರ್ ಮಂಜು ಪಾವಗಡ: ಕೈ ಹಿಡಿದ ಬೆಡಗಿ ಯಾರು ಗೊತ್ತಾ?
ನ್ಯೂಸ್ ಆ್ಯರೋ: ಮಂಜು ಪಾವಗಡ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಮಜಾ ಭಾರತ, ಗಿಚ್ಚಿ ಗಿಲಿಗಿಲಿ, ಬಿಗ್ಬಾಸ್ ಮೂಲಕ ಎಲ್ಲರ ಮನೆಮಾತಾಗಿರೋ ನಟ ಮಂಜು ಪಾವಗಡ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೌದು. . ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಹಾಸ್ಯ ನಟ ಮಂಜು ಪಾವಗಡ ಸದ್ಯ ಜಂಟಿಯಾಗಿದ್ದಾರೆ. ಸದ್ಯ ಪಾವಗಡದಲ್ಲಿ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಮುಂದಿನ ನವೆಂಬರ್ನಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಮಂಜು ಪಾವಗಡ ಅವರು ಕೈ ಹಿಡಿದ ಹುಡುಗಿ ಯಾರು ಅಂತ ಮಾಹಿತಿ ಸಿಕ್ಕಿಲ್ಲ. ಮಂಜು ಪಾವಗಡ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋಗಳು ವೈರಲ್ ಆಗ್ತಿದೆ.
ಇನ್ನು ಈ ಹಿಂದೆ ಬೆಂಗಳೂರಲ್ಲಿ ಸ್ವಂತ ಮನೆ ಒಂದನ್ನು ಖರೀದಿ ಮಾಡಿರುವ ನಟ ಮಂಜು ಪಾವಗಡ ಅದ್ಧೂರಿಯಾಗಿ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಟರಾದ ರಾಜೀವ್, ಅಂಕಿತ ಜಯರಾಮ್ ಮುಂತಾದವರು ಆಗಮಿಸಿ ತಮ್ಮ ಗೆಳೆಯ ಮಂಜು ಪಾವಗಡ ಅವರಿಗೆ ಶುಭ ಹಾರೈಸಿದ್ದಾರೆ.
Leave a Comment