ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗೆ ಹೃದಯಾಘಾತ; ರಾತ್ರೋರಾತ್ರಿ ಆಸ್ಪತ್ರೆಗೆ ದಾಖಲು

Gangavva
Spread the love

ನ್ಯೂಸ್ ಆ್ಯರೋ: ದೇಶ್ಯಾದ್ಯಂತ ಕಿರುತೆರೆಯಲ್ಲಿ ಬಿಗ್‌ ಬಾಸ್ ರಿಯಾಲಿಟಿ ಶೋನದ್ದೇ ಹವಾ ಶುರುವಾಗಿದೆ. ಬಹುತೇಕ ಎಲ್ಲಾ ಪ್ರಮುಖ ಭಾಷೆಯಲ್ಲಿಯೂ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗಿದೆ. ಈಗಾಗಲೇ ಬಿಗ್ ಬಾಸ್ ಕನ್ನಡ ಮೂರನೇ ವಾರಕ್ಕೆ ಕಾಲಿಟ್ಟಿದೆ. ಅದರಂತೆ, ಬಿಗ್ ಬಾಸ್ ಹಿಂದಿ, ಬಿಗ್ ಬಾಸ್ ತೆಲುಗು, ಬಿಗ್‌ ಬಾಸ್ ತಮಿಳು ಆರಂಭ ಆಗಿವೆ. ಈ ಎಲ್ಲಾ ಶೋಗಳು ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಿವೆ.

ತೆಲುಗಿನಲ್ಲಿ 8ನೇ ಸೀಸನ್ ಆರಂಭ ಆಗಿದೆ. ಅಲ್ಲಿ ಟಾಲಿವುಡ್ ಮನ್ಮಥ ನಾಗಾರ್ಜುನ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ಇದೇ ಮನೆಯೊಳಗೆ ಸ್ಪರ್ಧಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದವರಿಗೆ ದಿಢೀರನೇ ಹೃದಯಾಘಾತವಾಗಿದೆ ಎಂಬ ಸುದ್ದಿ ಆತಂಕ ಹುಟ್ಟಿಸಿದೆ.

Gangavva

ಹೌದು. . ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ ಈ ಬಾರಿಗೆ 60 ವರ್ಷದ ಮಹಿಳೆಯೊಬ್ಬರು ಎಂಟ್ರಿ ಕೊಟ್ಟಿದ್ದರು. ತೆಲುಗಿನ ಜನಪ್ರಿಯ ಯೂಟ್ಯೂಬರ್ ಗಂಗಮ್ಮ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಕೊಡಿಸಲಾಗಿತ್ತು. ಇದೇ ಸ್ಪರ್ಧಿ ಮನೆಯೊಳಗೆ ಇರುವಾಗಲೇ ಹೃದಯಾಘಾತವಾಗಿದೆ ಎಂಬ ಸುದ್ದಿ ಬಂದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Gangavva.jpg

ತೆಲುಗು ರಾಜ್ಯಗಳಲ್ಲಿ ಗಂಗವ್ವ ಸಿಕ್ಕಾಪಟ್ಟೆ ಫೇಮಸ್. ಈ ಕಾರಣಕ್ಕೆ 60 ವರ್ಷದ ಗಂಗವ್ವರನ್ನು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಕಳುಹಿಸಿಕೊಡಲಾಗಿತ್ತು. ಉಳಿದ ಸ್ಪರ್ಧಿಗಳಿಗೆ ಪೈಪೋಟಿ ಕೊಡುತ್ತಿದ್ದ ಗಂಗವ್ವಗೆ ಸೋಮವಾರ ರಾತ್ರಿ (ಅ.21) ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಕೂಡಲೇ ಅವರನ್ನು ಶೋ ನಿಂದ ಹೊರಗೆ ಕರೆದುಕೊಂಡು ಬಂದಿದ್ದು ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!