ದೊಡ್ಮನೇನ ಬಾಯ್ತುಂಬ ಹೊಗಳಿದ ಧ್ರುವ ಸರ್ಜಾ; ಮಾರ್ಟಿನ್​ಗಾಗಿ ‘ಭೈರತಿ’ಯ ತ್ಯಾಗ

dhruva sarja Shivanna entertainment
Spread the love

ನ್ಯೂಸ್ ಆ್ಯರೋ: ದೊಡ್ಮನೆಯ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿರುವ ಬಹುತೇಕರಿಗೆ ಗೌರವ ಇದೆ. ಮಾತ್ರವಲ್ಲದೆ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ನೀಡಿದ ಅವಕಾಶದಿಂದ ಚಿತ್ರರಂಗದಲ್ಲಿ ನೆಲೆಕಂಡುಕೊಂಡ ಅನೇಕರು ಇದ್ದಾರೆ. ಇದನ್ನು ಶಿವಣ್ಣ ಕೂಡ ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಈಗ ‘ಮಾರ್ಟಿನ್ ಚಿತ್ರಕ್ಕಾಗಿ ಶಿವರಾಜ್​ಕುಮಾರ್ ಅವರು ‘ಭೈರತಿ ರಣಗಲ್’ ಚಿತ್ರದ ರಿಲೀಸ್​ನ ಒಂದು ತಿಂಗಳು ಮುಂದಕ್ಕೆ ಹಾಕಿಕೊಂಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ.

ಹೌದು. . ಧ್ರುವ ಸರ್ಜಾ ಅವರು ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಏರಿದ್ದಾರೆ. ಇದರಲ್ಲಿ ಶಿವರಾಜ್​ಕುಮಾರ್ ಮುಖ್ಯ ಜಡ್ಜ್ ಆಗಿದ್ದಾರೆ. ‘ಮಾರ್ಟಿನ್’ ಸಿನಿಮಾ ಪ್ರಮೋಷನ್​ಗೆ ಧ್ರುವ ಸರ್ಜಾ ಅವರು ‘ಡಿಕೆಡಿ’ ವೇದಿಕೆ ಏರಿದ್ದಾರೆ. ವೇದಿಕೆಗೆ ಬರುವಾಗ ಅವರು ಮಸ್ತ್​ ಆಗಿ ಡ್ಯಾನ್ಸ್ ಮಾಡಿಕೊಂಡೇ ಬಂದಿದ್ದಾರೆ. ಅವರ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತುಗಳನ್ನು ಆಡಿದರು. ಶಿವರಾಜ್​ಕುಮಾರ್ ಒಳ್ಳೆತನವನ್ನು ಧ್ರುವ ಕೊಂಡಾಡಿದರು.

‘ಹಾರ್ಡ್​ವರ್ಕರ್, ಡ್ಯಾನ್ಸ್, ಆ್ಯಕ್ಷನ್ ಒಳ್ಳೆಯದಾಗಿ ಮಾಡ್ತಾರೆ. ಯಂಗ್​ಸ್ಟರ್ಸ್​ನಲ್ಲಿ ಧ್ರುವ, ಅಪ್ಪು ಒಳ್ಳೆಯ ಡ್ಯಾನ್ಸರ್ಸ್ ಅನ್ನೋ ಖುಷಿ ನನಗೆ ಇದೆ’ ಎಂದರು ಶಿವಣ್ಣ. ‘ಭೈರತಿ ರಣಗಲ್ ಅಕ್ಟೋಬರ್ 4ಕ್ಕೆ ರಿಲೀಸ್ ಆಗಬೇಕಿತ್ತು. ನಾನು ಕರೆ ಮಾಡಿ ಅಣ್ಣ ನಮ್ಮ ಸಿನಿಮಾಗೆ ಥಿಯೇಟರ್ ಸಮಸ್ಯೆ ಆಗುತ್ತದೆ ಎಂದೆ. ನಾನು ಕಾಲ್ ಮಾಡ್ತೀನಿ ಎಂದರು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ. ‘ಶಿವಣ್ಣನೇ ಮತ್ತೆ ಕರೆ ಮಾಡಿದರು. ನೀವು ನನ್ನ ಕುಟುಂಬ. ಒಂದು ತಿಂಗಳು ಮುಂದಕ್ಕೆ ಹೋಗುತ್ತೇವೆ. ನಿಮ್ಮ ಸಿನಿಮಾಗೆ ಒಳ್ಳೆಯದಾಗಲಿ ಎಂದರು. ನಾವು ಇಂಡಸ್ಟ್ರಿನ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದುಕೊಳ್ಳುತ್ತೇವೆ. ಅವರು ಇಂಡಸ್ಟ್ರಿನ ಮೇಲಕ್ಕೆ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಇದನ್ನು ನಾವು ಹತ್ತಿಕೊಂಡು ಹೋದರೆ ಸಾಕಾಗಿದೆ’ ಎಂದರು ಧ್ರುವ ಸರ್ಜಾ.

Leave a Comment

Leave a Reply

Your email address will not be published. Required fields are marked *