ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್; ಬಾಕ್ಸ್ ಆಫೀಸ್ ಕಿಂಗ್ ಪ್ರಭಾಸ್ ಆಸ್ತಿ ಎಷ್ಟು ಗೊತ್ತಾ?

ನ್ಯೂಸ್ ಆ್ಯರೋ: ನಟ ಪ್ರಭಾಸ್ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಇಂದು ಅವರು 43ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಪ್ರಭಾಸ್ ಕೇವಲ ತೆಲುಗು ನಟನಾಗಿ ಮಾತ್ರ ಗುರುತಿಸಿಕೊಳ್ಳದೇ ಪ್ಯಾನ್ ಇಂಡಿಯಾ ನಟರಾಗಿದ್ದಾರೆ.
ಪ್ರಭಾಸ್ ಸಿನಿಮಾಗಳು ಹಲವು ದಾಖಲೆಗಳನ್ನು ಬರೆದಿವೆ. ‘ಬಾಹುಬಲಿ: ದಿ ಬಿಗಿನಿಂಗ್’ ರಿಲೀಸ್ ಆದ ಮೊದಲ ದಿನವೇ ₹75 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿತ್ತು. ಇದರ ನಂತರ ‘ಬಾಹುಬಲಿ: ದಿ ಕನ್‌ಕ್ಲೂಷನ್’ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ₹200 ಕೋಟಿ ಗಳಿಸಿತ್ತು. ಇನ್ನು ‘ಸಾಹೋ’ ಮೊದಲ ದಿನ ₹130 ಕೋಟಿ ಗಳಿಸಿದರೆ, ‘ಸಲಾರ್’ ₹178 ಕೋಟಿ ಕಲೆಕ್ಷನ್ ಮಾಡಿದೆ. ‘ಕಲ್ಕಿ 2898 AD’ ಸಿನಿಮಾ ₹180 ಕೋಟಿ ಗಳಿಸಿ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿತ್ತು.
ಇತ್ತೀಚೆಗೆ ಬಿಡುಗಡೆಯಾದ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಸಿನಿಮಾ, ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ವಿಶ್ವಾದ್ಯಂತ ₹1,100 ಕೋಟಿ ಗಳಿಸಿ, ಜಾಗತಿಕ ಸಿನಿಮೀಯ ಐಕಾನ್ ಆಗಿ ಪ್ರಭಾಸ್ ಸ್ಥಾನವನ್ನು ಭದ್ರಪಡಿಸಿತು. ಈ ಚಿತ್ರ ಮೊದಲ ವಾರಾಂತ್ಯದಲ್ಲೇ ₹500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಹೊಸ ದಾಖಲೆಯನ್ನೂ ಬರೆದಿದೆ. ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ, ವಿದೇಶದಲ್ಲಿಯೂ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಇದೆ.

ಉಪ್ಪಳಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು ಅನ್ನೋದು ಪ್ರಭಾಸ್ ಅವರ ಮೂಲ ಹೆಸರು. ಅವರು ಜನಿಸಿದ್ದು 1979ರ ಅಕ್ಟೋಬರ್ 23ರಂದು. ಅವರು ಆಸ್ತಿ 241 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಚಿತ್ರಕ್ಕೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ‘ಬಾಹುಬಲಿ’ ಚಿತ್ರಕ್ಕಾಗಿ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದರು. ಅವರು ‘ಕಲ್ಕಿ 2898 ಎಡಿ’ ಚಿತ್ರಕ್ಕೆ 80 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ.

ಪ್ರಭಾಸ್ ಹೈದರಾಬಾದ್ನಲ್ಲಿ ಸುಮಾರು 60 ಕೋಟಿ ಮೌಲ್ಯದ ಮನೆ ಹೊಂದಿದ್ದಾರೆ. ಇದಲ್ಲದೇ ಮುಂಬೈನಲ್ಲಿ 10 ಕೋಟಿ ಮೌಲ್ಯದ ಮನೆ ಇದೆ. ಇದಲ್ಲದೇ ಇಟಲಿಯಲ್ಲಿ ಫ್ಲಾಟ್ ಕೂಡ ಖರೀದಿಸಿದ್ದಾರಂತೆ.
ಇವುಗಳ ಜೊತೆಗೆ ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳೂ ಕೂಡ ಪ್ರಭಾಸ್ ಬಳಿ ಇವೆ ಎಂದು ವರದಿಯಾಗಿದೆ. ಪ್ರಭಾಸ್ಗೆ ಕಾರ್ ಕಲೆಕ್ಷನ್ ಬಗ್ಗೆ ವಿಶೇಷ ಪ್ರೀತಿ ಇದೆ. 1 ಕೋಟಿ ರೂಪಾಯಿಯ ರೇಂಜ್ ರೋವರ್ ಸ್ಪೋರ್ಟ್ಸ್, ಆಡಿ ಎ6, ಬಿಎಂಡಬ್ಲ್ಯೂ 7 ಸೀರಿಸ್, ಜಾಗ್ವಾರ್, ರೋಲ್ಸ್ ರಾಯ್ಸ್ ಪ್ಯಾಂಟಮ್ ಕಾರುಗಳು ಅವರ ಬಳಿ ಇವೆ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ, ಪ್ರಭಾಸ್ ಅವರ ನಿವ್ವಳ ಮೌಲ್ಯ 30 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ ಸರಿಸುಮಾರು 250 ಕೋಟಿ ರೂಪಾಯಿಗಳು ಎನ್ನಲಾಗ್ತಿದೆ.

ಇಂದು ಈ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬವಾಗಿದ್ದು, ಲೇಡಿ ಫ್ಯಾನ್ಸ್ ನಾಲ್ಕು ದಿನಗಳ ಮುಂಚೆಯೇ ವಿದೇಶದಲ್ಲಿ ಪ್ರಭಾಸ್ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಡಾರ್ಲಿಂಗ್ ಹೆಸರು ಟ್ರೆಂಡ್ ಆಗುತ್ತದೆ. ತಮ್ಮ ನೆಚ್ಚಿನ ನಾಯಕನಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಅಪರೂಪದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ಅವರು ಸದ್ಯ ‘ರಾಜಾ ಸಾಬ್’ ಹಾಗೂ ‘ಸ್ಪಿರಿಟ್’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.
Leave a Comment