ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ ಭೈರತಿ ರಣಗಲ್; 365ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ರಿಲೀಸ್
ನ್ಯೂಸ್ ಆ್ಯರೋ: ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭೈರತಿ ರಣಗಲ್ ಚಿತ್ರ ಇಂದು ರಿಲೀಸ್ ಆಗಿದೆ. ಇದು ಕರ್ನಾಟಕದ 365ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭೈರತಿ ರಣಗಲ್ ಚಿತ್ರದ ರಿಲೀಸ್ ಆಗಿದ್ದು ಶಿವಣ್ಣನ ಅಭಿಮಾನಿಗಳು ಚಿತ್ರದ ರಿಲೀಸ್ ದೊಡ್ಡ ಹಬ್ಬದಂತೆ ಸೆಲಬ್ರೇಟ್ ಮಾಡುತ್ತಿದ್ದಾರೆ.
ಒಂದು ದಿನದ ಮೊದಲೇ ಟಿಕೆಟ್ ಬುಕಿಂಗ್ ಕೂಡಾ ಶುರುವಾಗಿತ್ತು. ರಾಜಾದ್ಯಂತ ಭೈರತಿ ರಣಗಲ್ ಚಿತ್ರದ ಅಬ್ಬರ ಜೋರಾಗಿಯೇ ಕೇಳಿ ಬರ್ತಿದೆ. ಭೈರತಿ ರಣಗಲ್ ಚಿತ್ರದ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗಿದೆ. ರಾಜ್ಯದ 300 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಭೈರತಿ ರಣಗಲ್ ರಿಲೀಸ್ ಆಗಿದೆ. ಸಿನಿಮಾ ಪ್ರೇಮಿಗಳು, ಸಿನಿಮಾ ಅಭಿಮಾನಿಗಳು ಮಾತ್ರವಲ್ಲದೇ, ಸಿನಿಮಾ ಕಲಾವಿದರೂ ಈ ಚಿತ್ರವನ್ನ ನೋಡಲು ಮುಗಿ ಬಿದ್ದಿದ್ದಾರೆ.
“ಈ ಸಿನಿಮಾ ಬಹುತೇಕ ಡ್ರಾಮದ ಮೇಲೆ ಸಾಗುತ್ತೆ. ಈ ಸಿನಿಮಾದಲ್ಲಿ ಅದನ್ನು ನಿರೀಕ್ಷೆ ಮಾಡಬಹುದು. ಸೆಕೆಂಡ್ ಹಾಫ್‌ನಲ್ಲಿ ಎಲೆವೆಷನ್ ಸೀನ್‌ಗಳನ್ನು ನೋಡಬಹುದು. ಹಿನ್ನೆಲೆ ಸಂಗೀತ ಇನ್ನಷ್ಟು ಚೆನ್ನಾಗಿ ಕೊಡಬಹುದಿತ್ತು. ಕೆಲವು ಮಾಸ್ ಸೀನ್‌ಗಳು ಭಯಂಕರವಾಗಿದೆ. ಫ್ಯಾಮಿಲಿ ಜೊತೆ ಕೂಡ ಸಿನಿಮಾ ನೋಡಬಹುದು. ಒಂದೊಳ್ಳೆ ಡಿಸೆಂಟ್ ಸಿನಿಮಾ ಎನ್ನಬಹುದು ಎಂದು ನೆಟ್ಟಿಗರು ಹೇಳಿದ್ದಾರೆ.
ಇನ್ನು ಇದು ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಆಗಿದ್ದರಿಂದ ಬಿಡುಗಡೆಗೂ ಮುನ್ನವೇ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಹುಟ್ಟಾಕಿತ್ತು.
‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ಪಾತ್ರ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಆಗಿತ್ತು. ಸೆಂಚುರಿ ಸ್ಟಾರ್ ಮ್ಯಾನರಿಸಂ, ಕಣ್ಣಿನಲ್ಲೇ ಯುದ್ಧ ಸಾರುವ ಶಿವಣ್ಣನನ್ನು ನೋಡಿ ಪ್ರೇಕ್ಷಕರು ಕಳೆದು ಹೋಗಿದ್ದರು. ಭೈರತಿ ರಣಗಲ್ ಯಾರು? ಹಿಂದೆ ‘ಭೈರತಿ ರಣಗಲ್’ ಹೇಗಿದ್ದ? ಭೈರತಿ ರಣಗಲ್ ವೈಲೆಂಟ್ ಆಗಿದ್ದು ಯಾಕೆ? ಇಂತಹ ಹಲವು ಪ್ರಶ್ನೆಗಳಿಗೆ ಈ ಪ್ರೀಕ್ವೆಲ್‌ನಲ್ಲಿ ಉತ್ತರ ಕೊಡುವುದಕ್ಕೆ ಮುಂದಾಗಿದ್ದಾರೆ.
Leave a Comment