Bestune Xiaoma : ಕೇವಲ ₹.3 ಲಕ್ಷ ಬೆಲೆಯ ಈ ಕಾರು ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 1,200 ಕಿಮೀ ಓಡುತ್ತೆ.!

IMG 20240910 WA0022
Spread the love

ನ್ಯೂಸ್ ಆ್ಯರೋ : ಜಗತ್ತಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಗಣನೀಯವಾಗಿ ಹೆಚ್ಚಾಗುತ್ತಿದೆ‌. ಈ ನಡುವೆ ವಾಹನೋದ್ಯಮದಲ್ಲಿ ಸಂಚಲನ ಸೃಷ್ಟಿಸುವಂತಹ ಕಾರೊಂದು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ‌.

ಕಡಿಮೆ ಬೆಲೆ ಅಂದರೆ ₹3 ಲಕ್ಷ ಆಸುಪಾಸಿನ‌ ಬೆಲೆಯಲ್ಲಿ ಕೈಗೆಟುಕುವ ಈ ಎಲೆಕ್ಟ್ರಿಕಲ್ ಕಾರು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 1,200 ಕಿಮೀ ಓಡುವ ಸಾಮರ್ಥ್ಯ ಹೊಂದಿದೆ. ಇದಿಷ್ಟೇ ಅಲ್ಲದೆ ಇನ್ನಷ್ಟು ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಈ ಸೂಪರ್ ಎಲೆಕ್ಟ್ರಿಕಲ್ ಕಾರಿನ ಡೀಟಿಯಲ್ಸ್ ಇಲ್ಲಿದೆ ನೋಡಿ.

ಯಾವ ಕಾರು? ಬೆಲೆ ಎಷ್ಟು?
2023ರಲ್ಲಿ ಚೀನಾದ ಶಾಂಘೈನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾದ Bestune Xiaoma ಕಾರು ಸದ್ಯ ವಾಹನೋದ್ಯಮದಲ್ಲಿ ತನ್ನ ಅತ್ಯಾಧುನಿಕ ಫೀಚರ್ ಗಳಿಂದ ಸಂಚಲನ ಸೃಷ್ಟಿಸುತ್ತಿದೆ. ಭಾರತೀಯ ರೂಪಾಯಿ ಪ್ರಕಾರ, ಈ ಕಾರಿನ ಬೆಲೆ 3.47 ಲಕ್ಷದಿಂದ 5.78 ಲಕ್ಷ ಇದೆ. ಈ ಕಾರಿನಲ್ಲಿರುವ ಅತ್ಯಾಧುನಿಕ ಫೀಚರ್ಸ್ ಗಳ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ ನೋಡಿ.

Img 20240910 Wa00234136568772674744657

ಅತ್ಯಾಧುನಿಕ ಫೀಚರ್ಸ್ ಏನಿದೆ?
ಸದ್ಯ, ಈ ಹೊಸ ಎಲೆಕ್ಟ್ರಿಕಲ್ ಕಾರು ತನ್ನ ಅತ್ಯಾಧುನಿಕ ಫೀಚರ್ಸ್ ಗಳಿಂದ ಹೆಚ್ಚು ಗಮನ ಸೆಳೆಯುತ್ತಿದೆ. ಅವುಗಳೆಂದರೆ ಕ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸುಂದರವಾದ ಡ್ಯುಯಲ್-ಟೋನ್ ಥೀಮ್ ಲಭ್ಯವಿದೆ. ಈ ಕಾರ್ FME ಆಧಾರಿತವಾಗಿದ್ದು, ಹೆವಿ ಮತ್ತು ರೇಂಜ್ ಎಕ್ಸಟೆಂಡರ್ ಗಾಗಿ ವಿಶೇಷವಾಗಿ ಡಿಸೈನ್ ಮಾಡಲಾಗಿದೆ.

ಇದಕ್ಕೂ ಮೊದಲು NAT ಹೆಸರಿನ ರೈಡ್-ಹೇಲಿಂಗ್ ಇವಿಯನ್ನು ಸಹ ಇದೇ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿತ್ತು. FME ಪ್ಲಾಟ್‌ಫಾರ್ಮ್ ನಲ್ಲಿ A1 ಮತ್ತು A2 ಹೆಸರಿನ ಎರಡು ಸಬ್‌-ಪ್ಲಾಟ್‌ಫಾರ್ಮ್‌ಗಳಿವೆ. A1 ಸಬ್‌-ಪ್ಲಾಟ್‌ಫಾರ್ಮ್ 2700-2850 mm ವ್ಹೀಲ್‌ಬೇಸ್ ಹೊಂದಿರುವ ಕಾರುಗಳಿಗೆ, A2 ಸಬ್‌-ಪ್ಲಾಟ್‌ಫಾರ್ಮ್ಅನ್ನು 2700-3000 mm ವೀಲ್‌ಬೇಸ್ ಹೊಂದಿರುವ ಕಾರುಗಳಿಗೆ ಅಳವಡಿಸಲಾಗುತ್ತದೆ.

Img 20240910 Wa0024148517564210210263
Img 20240910 Wa00254218592854369194791

ಸೇಫ್ಟಿ ಪೀಚರ್ಸ್ ಏನಿದೆ?
ಇನ್ನು‌ ಈ ಕಾರು ಸೇಫ್ಟಿ ವಿಚಾರದಲ್ಲು ಅತ್ಯುತ್ತಮವಾಗಿದೆ. ಈ ಎಲೆಕ್ಟ್ರಿಕಲ್ ಕಾರಿನಲ್ಲಿ ಬೆಸ್ಟೂನ್ ಶಾಮಾದಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್ ನೀಡಲಾಗಿದೆ. ಈ ಕಾರು 3-ಬಾಗಿಲುಗಳನ್ನು ಹೊಂದಿದ್ದು, ಉದ್ದ 3000mm, ಅಗಲ 1510mm ಮತ್ತು ಎತ್ತರ 1630mm ಆಗಿದೆ. ಇದರ ವ್ಹೀಲ್ ಬೇಸ್ 1953 ಎಂಎಂ ಆಗಿದೆ.ಸದ್ಯ ಈ ಕಾರು ಚೀನಾದಲ್ಲಿ ಹೆಚ್ಚು ಬಳಕೆಯಲ್ಲಿದ್ದು, ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Leave a Comment

Leave a Reply

Your email address will not be published. Required fields are marked *

error: Content is protected !!