ಆನ್ ಲೈನ್ ನಲ್ಲಿ ಪಾಸ್ ಪೋರ್ಟ್ ಗೆ ಅಪ್ಲೈ ಮಾಡುವವರೇ ಎಚ್ಚರ…!
ಇದರಿಂದ ನಿಮಗೂ ವಂಚನೆಯಾಗಬಹುದು
ನ್ಯೂಸ್ ಆ್ಯರೋ : ಎಲ್ಲರೂ ಜೀವಮಾನದಲ್ಲಿ ಒಮ್ಮೆಯಾದರೂ ವಿದೇಶಕ್ಕೆ ಹೋಗಬೇಕೆಂದು ಕನಸು ಕಾಣುತ್ತೇವೆ. ಇಲ್ಲಿಂದ ಬೆಂಗಳೂರಿಗೆ ಹೋದಷ್ಟೇನೂ ಸುಲಭ ಅಲ್ಲ. ವಿದೇಶಕ್ಕೆ ಹೋಗ್ಬೇಕು ಅಂತ ಇದ್ರೆ ಮೊದಲೇ ಪಾಸ್‌ಪೋರ್ಟ್ ವೀಸಾ ಇವೆಲ್ಲಾ ಬೇಕಾಗುತ್ತದೆ. ಈಗ ಎಲ್ಲರೂ ಆನ್ ಲೈನ್ ನಲ್ಲೇ ಪಾಸ್ ಪೋರ್ಟ್ ಗೆ ಅಪ್ಲೈ ಮಾಡುತ್ತಾರೆ.
ಹೌದು, ಈ ಆನ್ ಲೈನ್ ನಲ್ಲಿ ಅಪ್ಲೈ ಮಾಡುವಾಗ ಕೆಲವೊಂದು ವಂಚನೆಗಳು ಅಥವಾ ಡಾಟಾ ಸೋರಿಕೆಯ ಅಪಾಯಗಳು ಹೆಚ್ಚಿರುತ್ತದೆ. ಇಂತಹ ವಂಚನೆಗಳಿಂದ ತಪ್ಪಿಸಿಕೊಳ್ಳಲು ಕೆಲವು ಮುನ್ನೆಚ್ಚರಿಕೆಯ ಸೂಚನೆಗಳನ್ನು ಕೇಂದ್ರ ಸರಕಾರ ನೀಡಿದ.
ಇದೀಗ ಆನ್ ಲೈನ್ ನಲ್ಲಿ ನಕಲಿ ಪಾಸ್‌ಪೋರ್ಟ್ ವೆಬ್‌ಸೈಟ್‌ಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ. ಮೋಸದ ಸೈಟ್‌ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ನಕಲಿ ಪಾಸ್‌ಪೋರ್ಟ್ ಸೈಟ್‌ಗಳು ಏಕೆ ಅಪಾಯಕಾರಿ ಎಂದು ಈ ಕೆಳಗೆ ತಿಳಿಸಲಾಗಿದೆ.
ಇಂತಹ ನಕಲಿ ಸೈಟ್‌ಗಳು ಬಳಕೆದಾರರಿಂದ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತವೆ. ಈ ಮಾಹಿತಿಗಳ ಆಧಾರದ ಮೇಲೆ ಕಳ್ಳತನ ಅಥವಾ ಇತರ ದುರುದ್ದೇಶಪೂರಿತ ಚಟುವಟಿಕೆಗಳಿಗೆ ನಿಮಗೆ ವಂಚನೆ ಮಾಡುತ್ತದೆ.
ಇಂತಹ ಮೋಸದ ಜಾಲಗಳು ದೊಡ್ಡ ಮೊತ್ತದ ಹಣವನ್ನು ಬೇಡಿಕೆ ಮಾಡುತ್ತವೆ. ಮತ್ತೇ ನಿಮಗೆ ಯಾವುದೇ ಪಾಸ್ ಪೋರ್ಟ್ ಅಥವಾ ಇನ್ನಿತರ ಸೇವೆಗಳನ್ನು ಒದಗಿಸದೆ ವಂಚನೆಯನ್ನು ಮಾಡಿ ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ.
ನಿಮ್ಮ ಎಲ್ಲಾ ಪಾಸ್‌ಪೋರ್ಟ್ ಸಂಬಂಧಿತ ಅಗತ್ಯಗಳಿಗಾಗಿ ಯಾವಾಗಲೂ ಅಧಿಕೃತ ಸರ್ಕಾರಿ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಅನ್ನು ಬಳಸಬೇಕು. ಅಧಿಕೃತ ಪೋರ್ಟಲ್ ನ ಪತ್ತೆ ಹಚ್ಚಿರಿ.
ನೀವು ಬಳಸುತ್ತಿರುವ ವೆಬ್‌ಸೈಟ್ ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಧಿಕೃತ ಸೈಟ್‌ಗಳು ಸುರಕ್ಷಿತ ಸರ್ಕಾರದ ಬೆಂಬಲವನ್ನು ಹೊಂದಿರುತ್ತವೆ.
ಅಧಿಕೃತ ಆನ್‌ಲೈನ್ ವ್ಯವಸ್ಥೆಯ ಮೂಲಕ ನಿಮ್ಮ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ. ಅಗತ್ಯವಿರುವ ಎಲ್ಲಾ ಫಾರ್ಮ್‌ಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಸರ್ಕಾರದ ಅಧಿಕೃತ ಪೋರ್ಟಲ್ ನ ಮೂಲಕ ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಬೇಕು.
Leave a Comment