ವೈಲ್ಡ್ ಕಾರ್ಡ್​ ಎಂಟ್ರಿ ಬೆನ್ನಲ್ಲೇ ಬಿಗ್​ಬಾಸ್​ ಮನೆ ಧಗಧಗ; ಮನೆಯಿಂದ ಹೊರ ಬರಲು ಡೋರ್ ತಟ್ಟಿದ ಗೋಲ್ಡ್ ಸುರೇಶ್

gold suresh
Spread the love

ನ್ಯೂಸ್ ಆ್ಯರೋ: ಬಿಗ್​ಬಾಸ್​ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್​ಕಾರ್ಡ್ ಮೂಲಕ ಎಂಟ್ರಿ ನೀಡಿರುವ ರಜತ್ ಕಿಸನ್ ಮೇಲೆ ಬೇಸರಗೊಂಡಿರುವ ಗೋಲ್ಡ್​ ಸುರೇಶ್, ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್​ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ.

ಇಂದು ರಾತ್ರಿ 9.30ಕ್ಕೆ ಪ್ರಸಾರವಾಗುವ ಎಪಿಸೋಡ್​​ಗೆ ಸಂಬಂಧಿಸಿದ ಪ್ರೊಮೋವನ್ನು ಕಲರ್ಸ್ ಕನ್ನಡ ಶೇರ್ ಮಾಡಿಕೊಂಡಿದೆ. ಅದರಲ್ಲಿ ಬಿಗ್​ಬಾಸ್ ಟಾಸ್ಕ್​ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ಬಿಗ್​ಬಾಸ್ ಆಟದ ನಿಯಮದಲ್ಲಿತ್ತು.

ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ಯುದ್ಧಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್​ ಸುರೇಶ್​ಗೆ ಬಳಸಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ಆಕ್ಷೇಪಾರ್ಹವಾಗಿವೆ. ನನಗೆ ಬೇಸರ ಆಗಿದೆ.

ಬಿಗ್​ಬಾಸ್​ ಅವರು ನನಗೆ ‘ಮಗನೆ, ಗಿಗನೆ’ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್​ಬಾಸ್ ನಾನು ಆಡಲ್ಲ. ಬಿಗ್​​ಬಾಸ್​ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!