ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟ ಶರಣ್, ಅದಿತಿ ಪ್ರಭುದೇವ​; ಇಂದು ಗ್ರ್ಯಾಂಡ್​ ಫಿನಾಲೆಗೆ ಆಯ್ಕೆ ಆದಾ ಸ್ಪರ್ಧಿ ಯಾರು ?

BBK
Spread the love

ನ್ಯೂಸ್ ಆ್ಯರೋ: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಸ್ಪರ್ಧಿಗಳಿಗೆ ಸರಣಿ ಟಾಸ್ಕ್​ಗಳನ್ನು ಕೊಡಲಾಗುತ್ತಿದೆ. ಈಗಾಗಲೇ ನಾಲ್ವರು ಫಿನಾಲೆಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಇದರಲ್ಲಿ ಒಬ್ಬರು ಮಾತ್ರ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ. ಆ ಅದೃಷ್ಟಶಾಲಿ ಸ್ಪರ್ಧಿ ಯಾರು ಎನ್ನುವುದು ಎಲ್ಲರ ಕುತೂಹಲವಾಗಿದೆ. ಅಭಿಮಾನಿಗಳ ಈ ಕುತೂಹಲಕ್ಕೆ ಬ್ರೇಕ್ ಹಾಕಲು ಬಿಗ್​ಬಾಸ್​ಗೆ ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಎಂಟ್ರಿ ಕೊಟ್ಟಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಕಠಿಣ ಟಾಸ್ಕ್​ಗಳನ್ನು ಸ್ಪರ್ಧಿಗಳ ಪೂರ್ಣಗೊಳಿಸಬೇಕಿದೆ. ಸದ್ಯ ಫೈನಲ್​ ಟಿಕೆಟ್​ಗಾಗಿ ಹನುಮಂತು, ರಜತ್, ಭವ್ಯ ಹಾಗೂ ತ್ರಿವಿಕ್ರಮ್ ಈ ನಾಲ್ವರ ನಡುವೆ ಪೈಪೋಟಿ ನಡೆದಿದೆ. ಇವರಲ್ಲಿ ಯಾರು ಚೆನ್ನಾಗಿ ಆಡುತ್ತಾರೋ ಅವರು ಗ್ರ್ಯಾಂಡ್​ ಫಿನಾಲೆಗೆ ಆಯ್ಕೆ ಆಗಲಿದ್ದಾರೆ. ಈ ಸಂಬಂಧ ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಅವರು ಮನೆಗೆ ಆಗಮಿಸಿದ್ದು ಈ ನಾಲ್ವರಲ್ಲಿ ಒಬ್ಬರಿಗೆ ಫಿನಾಲೆ ಟಿಕೆಟ್ ಅನ್ನು ಕೊಡಲಿದ್ದಾರೆ.

ಫಿನಾಲೆ ಟಿಕೆಟ್ ಕೊಡಲು ಶರಣ್, ಅದಿತಿ ಬರುತ್ತಿದ್ದಂತೆ ಎಲ್ಲ ಸ್ಪರ್ಧಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇಬ್ಬರಿಗೂ ವೆಲ್​ಕಮ್ ಹೇಳಿದ್ದು ಉಗ್ರಂ ಮಂಜು ಅವರು ಶರಣ್ ಅವರನ್ನು ತಬ್ಬಿಕೊಂಡು ಸ್ವಾಗತಿಸಿದರು. ರಿಲೀಸ್ ಆಗಿರುವ ವಿಡಿಯೋದಲ್ಲಿ ಒಬ್ಬರಿಗೆ ಮಾತ್ರ ಫಿನಾಲೆ ಟಿಕೆಟ್​ನ್ನು ಶರಣ್ ಅವರು ಘೋಷಣೆ ಮಾಡಿದ್ದಾರೆ. ಆದರೆ ಆ ಸ್ಪರ್ಧಿ ಯಾರು ಎಂದು ಹೆಸರು ಹೇಳಿಲ್ಲ. ಇಂದು ರಾತ್ರಿ ಇದಕ್ಕೆ ತೆರೆ ಬೀಳಲಿದೆ.

ಫಿನಾಲೆ ಟಿಕೆಟ್ ಪಡೆಯಲು ಭವ್ಯ, ತ್ರಿವಿಕ್ರಮ್, ರಜತ್ ಹಾಗೂ ಹನುಮಂತು ನಡುವೆ ಬಿಗ್ ಫೈಟ್ ನಡೆದಿದೆ. ಗೌತಮಿ, ಮಂಜು ಫಿನಾಲೆ ಟಿಕೆಟ್​ನಿಂದ ಹೊರ ಬಿದ್ದಿದ್ದು ಇವರು ಸ್ಪರ್ಧೆ ಮಾಡುತ್ತಿಲ್ಲ. ಇನ್ನು ಮೋಕ್ಷಿತಾ ಕೂಡ ಟಾಸ್ಕ್​​ನಿಂದ ಹೊರಗಿದ್ದಾರೆ. ಧನರಾಜ್ ಹಾಗೂ ಚೈತ್ರಾ ಇಬ್ಬರು ಮೊದಲೇ ಫಿನಾಲೆ ಟಾಸ್ಕ್​ನಿಂದ ಹೊರಗಿದ್ದರು. ಹೀಗಾಗಿ ಉಳಿದ ನಾಲ್ವರು ಸ್ಪರ್ಧಿಗಳಲ್ಲಿ ಟಾಸ್ಕ್ ಟಫ್ ಇದೆ. ಗೆದ್ದವರಿಗೆ ಶರಣ್, ಅದಿತಿ ಫಿನಾಲೆಗೆ ಕಳುಹಿಸಲಿದ್ದಾರೆ. ಅಂದಾಜಿನ ಪ್ರಕಾರ ಹನುಮಂತ ಫಿನಾಲೆ ಟಿಕೆಟ್ ಪಡೆದಿದ್ದಾರೆ ಎಂದು ಹೇಳಲಾಗ್ತಿದೆ ಆದ್ರೆ ಕಾದು ನೋಡಕಿದೆ.

Leave a Comment

Leave a Reply

Your email address will not be published. Required fields are marked *

error: Content is protected !!