ಬಾಳೆಹಣ್ಣಿನ ಸಿಪ್ಪೆಯನ್ನು ಎಸೆಯಬೇಡಿ; ಹೀಗೆ ಬಳಸಿದ್ರೆ ಸೊಳ್ಳೆಗಳು ಓಡಿ ಹೋಗುತ್ತೆ
ಹೆಚ್ಚಿನವರು ಬಾಳೆಹಣ್ಣು ತಿಂದು ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಈ ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೋಷಕಾಂಶಗಳು ಹಾಗೂ ಫೈಟೊನ್ಯೂಟ್ರಿಯೆಂಟ್ ಗಳಿಂದ ಸಮೃದ್ಧವಾಗಿದೆ. ಈ ಸಿಪ್ಪೆ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅನೇಕ ಚರ್ಮದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಆದರೆ ಈ ಸಿಪ್ಪೆಯಿಂದ ಸೊಳ್ಳೆಯನ್ನು ಓಡಿಸಬಹುದು.
ಸೊಳ್ಳೆಗಳನ್ನು ಓಡಿಸಲು ಈ ಬಾಳೆಹಣ್ಣಿನ ಸಿಪ್ಪೆಯೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಮನೆಯಲ್ಲಿ ಸೊಳ್ಳೆ ಕಾಟ ಅಧಿಕವಾಗಿದ್ದರೆ ರಾತ್ರಿ ಮಲಗುವ ಒಂದು ಗಂಟೆ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಕೋಣೆಯ ನಾಲ್ಕು ಮೂಲೆಗಳಲ್ಲಿ ಇಡಬೇಕು. ಈ ಸಿಪ್ಪೆಯ ವಾಸನೆಗೆ ಸೊಳ್ಳೆಗಳು ಹತ್ತಿರ ಕೂಡ ಬರಲ್ಲ.
ಬಾಳೆಹಣ್ಣಿನ ಸಿಪ್ಪೆಗಳನ್ನು ಸುಲಿದು ಮಿಕ್ಸಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮನೆಯ ಮೂಲೆಮೂಲೆಗಳಿಗೆ ಹಚ್ಚಿದರೆ, ಇದರ ವಾಸನೆಗೆ ಸೊಳ್ಳೆಗಳು. ಇಷ್ಟ ಪಡುವುದಿಲ್ಲ. ಈ ಸಿಪ್ಪೆ ಪೇಸ್ಟ್ ಸೊಳ್ಳೆಗಳು ಬರದಂತೆ ತಡೆಯುತ್ತದೆ. ಈ ರೀತಿ ಮಾಡಿಟ್ಟರೆ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
ಬಾಳೆಹಣ್ಣಿನ ಸಿಪ್ಪೆಯನ್ನು ಸುಡುವುದರಿಂದಲೂ ಸೊಳ್ಳೆಗಳನ್ನು ಓಡಿಸಬಹುದು. ಬಾಳೆಹಣ್ಣಿನ ಸಿಪ್ಪೆಗಳನ್ನು ಒಣಗಿಸಿಟ್ಟುಕೊಳ್ಳಿ, ಈ ಸಿಪ್ಪೆಯಿಂದ ಧೂಪದಂತೆ ಹೊಗೆ ಹಾಕಿದರೆ ಸೊಳ್ಳೆಗಳು ಮನೆಯೊಳಗೆ ಒಂದು ನಿಮಿಷ ಕೂಡ ನಿಲ್ಲುವುದಿಲ್ಲ. ಇದೊಂದು ಸಾವಯವ ಸೊಳ್ಳೆ ನಿವಾರಕವಾಗಿದ್ದು, ಇದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ.
ಮಾತ್ರವಲ್ಲದೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಇರುವ ಕೆಲವು ಮಿನರಲ್ಸ್‌ಗಳು ಹಲ್ಲನ್ನು ಬಿಳಿಯಾಗಿಸಲು ಸಹಾಯ ಮಾಡುತ್ತವೆ. ಹೀಗಾಗಿ ನೀವು ಬಾಳೆ ಹಣ್ಣಿನ ಸಿಪ್ಪೆಯನ್ನು ಹಲ್ಲಿಗೆ ಉಜ್ಜಿಕೊಂಡರೆ ಕ್ರಮೇಣ ನಿಮ್ಮ ಹಲ್ಲು ಬಿಳಿಯಾಗಲಿದೆ.
ಅಲ್ಲದೆ ಹಳದಿ ಹಲ್ಲಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಆದರೆ ನೆನಪಿಡಿ, ಬಾಳೆಹಣ್ಣಿನ ಸಿಪ್ಪೆಯ ಬಳಕೆಯ ನಂತರ ಹಲ್ಲನ್ನು ನೀಟ್ ಆಗಿ ಕ್ಲೀನ್ ಮಾಡಿಕೊಳ್ಳಿ.ಇಲ್ಲವಾದರೆ ಹಲ್ಲುಗಳ ಮಧ್ಯೆ ಸಿಲುಕಿ ಹುಳುಕಿಗೆ ಕಾರಣವಾಗಬಹುದು.
ಬಾಳೆಹಣ್ಣಿನ ಸಿಪ್ಪೆಯ ಉರಿಯೂತ ನಿವಾರಕ ಗುಣಲಕ್ಷಣಗಳು ಮತ್ತು ವಿಟಮಿನ್ ಸಿ ಅಂಶವನ್ನು ಹೊಂದಿದೆ. ಹೀಗಾಗಿ ಸನ್ ಟ್ಯಾನ್ ಸೇರಿದಂತೆ ಚರ್ಮದ ಸಮಸ್ಯೆಗಳು, ಮೊಡವೆಗಳು ಮತ್ತು ದೀರ್ಘಕಾಲದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಇತರ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಬಿಸಿಲಿನಿಂದ ಮನೆಗೆ ಹೋದ ನಂತರ ಬಾಳೆಹಣ್ಣು ಅಥವಾ ಅದರ ಸಿಪ್ಪೆಯಿಂದ ಮುಖವನ್ನು ಉಜ್ಜಿಕೊಳ್ಳಿ. ಇದರಿಂದ ಚರ್ಮದ ಮೇಲಾದ ಹಾನಿ ಕಡಿಮೆಯಾಗುತ್ತದೆ. ಜೊತೆಗೆ ಚರ್ಮವೂ ಮೃದುವಾಗುತ್ತದೆ.
ವೆಬ್ ಎಂ.ಡಿ ಡಾಟ್ ಕಾಮ್ ಹೇಳುವ ಪ್ರಕಾರ, ಬಾಳೆಹಣ್ಣಿನ ಸಿಪ್ಪೆಗಳು ಪಾಲಿಫಿನಾಲ್‌ಗಳು, ಕ್ಯಾರೊಟಿನಾಯ್ಡ್‌ಗಳು ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ, ಅದು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ.
ಬಾಳೆಹಣ್ಣಿನ ಸಿಪ್ಪೆಗಳನ್ನು ತಿನ್ನುವುದು, ವಿಶೇಷವಾಗಿ ತಾಜಾ ಬಾಳೆಹಣ್ಣಿನ ಸಿಪ್ಪೆ ಸೇವನೆಯಿಂದ ಉತ್ಕರ್ಷಣ ನಿರೋಧಕ ಮಟ್ಟವನ್ನು ಹೆಚ್ಚಿಸಬಹುದು ಮತ್ತು ನಿಮ್ಮ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Leave a Comment