2025ರಲ್ಲಿ ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯ?; ಮುಂದಿನ ವರ್ಷ ಜಗತ್ತಿಗೆ ಏನಾಗುತ್ತೆ ಗೊತ್ತಾ?
ನ್ಯೂಸ್ ಆ್ಯರೋ: ಬಾಬಾ ವಂಗಾ ನುಡಿದಿದ್ದರು ಎನ್ನಲಾದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ. ಬಲ್ಗೇರಿಯನ್ ಅತೀಂದ್ರಿಯ ಭವಿಷ್ಯಗಾರ್ತಿ ಹಾಗೂ ಗಿಡಮೂಲಿಕೆಗಾರ್ತಿಯೂ ಆಗಿದ್ದ ಬಾಬಾ ವಂಗ ನುಡಿದಿದ್ದ ಭವಿಷ್ಯಗಳೆಲ್ಲವೂ ಈ ಹಿಂದೆ ನಿಜವಾಗಿವೆ ಎನ್ನುವುದು ಬಹುತೇಕರು ಹೇಳುವ ಮಾತು.
ಉಗ್ರರು ಅಮೆರಿಕದ ಮೇಲೆ ನಡೆಸಿದ 9/11ರ ದಾಳಿ, ಚೆರ್ನೋಬಿಲ್ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್ ಸುನಾಮಿ, ಬರಾಕ್ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು… ಇಂಥ ಹತ್ತು ಹಲವು ಘಟನೆಗಳನ್ನು ಬಹಳ ಮುಂಚೆಯೇ ಬಾಬಾ ವಂಗಾ ನುಡಿದಿದ್ದರು.
ಇತ್ತೀಚೆಗಷ್ಟೇ ಕೊರೋನಾದಿಂದ ತತ್ತರಿಸಿ ಜಗತ್ತು ಸುಧಾರಿಸಿ ಕೊಳ್ಳುತ್ತಿದೆ. ಈ ಹೊತ್ತಲ್ಲೇ ಬಾಬಾ ವಂಗಾ ನುಡಿದಿದ್ದ ಮತ್ತೊಂದು ಭವಿಷ್ಯ ಇದೀಗ ವೈರಲ್ ಆಗಿದೆ. ವೈರಸ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಭವಿಷ್ಯ ನುಡಿದಿರುವ ಬಾಬಾ ವಂಗಾ, ಇದೀಗ ಜಗತ್ತಿನ ಕುರಿತಂತೆ 2025ರ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಇಷ್ಟು ಮಾತ್ರವಲ್ಲ. . ಬಾಬಾ ವಂಗಾ 2025ರ ವರ್ಷದ ಬಗ್ಗೆಯೂ ಅಂದೇ ಭವಿಷ್ಯ ನುಡಿದಿದ್ದಾರೆ. 2025 ರಲ್ಲಿ ಜಗತ್ತು ನಾಶವಾಗಲಿದೆ ಎಂದು ಹೇಳಿದ್ದಾರೆ. 2012ರಲ್ಲಿಯೂ ವಿಶ್ವದ ನಾಶದ ಬಗ್ಗೆಯೂ ಮುನ್ಸೂಚನೆ ನೀಡಲಾಗಿತ್ತು, ಆದರೆ ಅದು ಸಂಭವಿಸಲಿಲ್ಲ. ಆದರೆ ಬಾಬಾ ವೆಂಗಾ ಪ್ರಕಾರ, 5079 ರಲ್ಲಿ ಮನುಕುಲವು ಭೂಮಿಯಿಂದ ಕಣ್ಮರೆಯಾಗುತ್ತದೆ ಎಂದು ಹೇಳಿದ್ದಾರೆ.
2025 ರಲ್ಲಿ ಜಗತ್ತು ಬೃಹತ್ ಯುದ್ಧಗಳು ಮತ್ತು ಸಂಘರ್ಷಗಳನ್ನು ನೋಡಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಯುರೋಪಿನಲ್ಲಿ ಯುದ್ಧ ನಡೆಯಬಹುದು ಎನ್ನಲಾಗಿದೆ. ಈ ಯುದ್ಧದಲ್ಲಿ ಯುರೋಪಿಯನ್ ದೇಶಗಳು ಭಾರೀ ನಷ್ಟವನ್ನು ಅನುಭವಿಸಬಹುದು ಎಂದು ಹೇಳಲಾಗಿದೆ.
2025 ರ ವೇಳೆಗೆ, ಸಂಘರ್ಷದಿಂದಾಗಿ ವಿಶ್ವದ ಜನಸಂಖ್ಯೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಮಾನವರು ಬದುಕಲು ಹೊಸ ಸಂಪನ್ಮೂಲಗಳನ್ನು ಹುಡುಕಬೇಕಾಗಿರುವುದರಿಂದ ಅಳಿವಿನ ಸಾಧ್ಯತೆ ಹೆಚ್ಚಾಗಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. 2025 ರ ನಂತರದ ಭವಿಷ್ಯವು ತುಂಬಾ ಭಯಾನಕವಾಗಿದೆ ಮತ್ತು ಮಾನವರು 2028 ರಲ್ಲಿ ಶುಕ್ರವನ್ನು ತಲುಪಬಹುದು. ಇದಲ್ಲದೇ 2033ರಲ್ಲಿ ಬೃಹತ್ ಮಂಜುಗಡ್ಡೆ ಕರಗಿ ಸಮುದ್ರ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರಿಂದ ಸುನಾಮಿ ಸೃಷ್ಟಿಯಾಗಲಿದೆ, ಇಡೀ ಜಗತ್ತೇ ಮುಳುಗಬಹುದು ಎನ್ನಲಾಗಿದೆ.
ಹವಾಮಾನ ಬದಲಾವಣೆಯಿಂದಾಗಿ, ಇದು 2170 ರ ವೇಳೆಗೆ ಭೂಮಿ ನಾಶವಾಗಲಿದೆ. ಬರಗಾಲದಿಂದ ಭೂಮಿ ಮೇಲೆ ದುಷ್ಪರಿಣಾಮ ಉಂಟಾಗಿ ಮಾನವ ಕುಲ ನಾಶವಾಗಲಿದೆ ಎಂದು ಹೇಳಿದ್ದಾರೆ. ನಂತರ 3005 ರಲ್ಲಿ ಭೂಮಿ ಮತ್ತು ಮಂಗಳಕ್ಕೆ ತೆರಳಿದ ಮಾನವರ ನಡುವೆ ಯುದ್ಧ ನಡೆಯಲಿದೆ. 5079 ರಲ್ಲಿ ಪ್ರಪಂಚವು ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ ಮತ್ತು ಮಾನವ ಜನಾಂಗವು ಸಂಪೂರ್ಣವಾಗಿ ನಾಶವಾಗುವ ಸಮಯವದು ಎಂದು ಬಾಬಾ ವಂಗಾ ಭವಿಷ್ಯ ನುಡಿದ್ದಾರೆ ಎನ್ನಲಾಗಿದೆ.
Leave a Comment