ಬರೇ 23 ಲಕ್ಷಕ್ಕೆ ತಯಾರಾಯ್ತು 30 ಕೋಟಿ ರೂಪಾಯಿ ಬೆಲೆಯ ಬುಗಾಟಿ ಕಾರ್ – ಈ ಸ್ಪೋರ್ಟ್ಸ್ ಕಾರ್ ತಯಾರಿಸಿದ್ದು ಯಾರು ಗೊತ್ತಾ?

ಬರೇ 23 ಲಕ್ಷಕ್ಕೆ ತಯಾರಾಯ್ತು 30 ಕೋಟಿ ರೂಪಾಯಿ ಬೆಲೆಯ ಬುಗಾಟಿ ಕಾರ್ – ಈ ಸ್ಪೋರ್ಟ್ಸ್ ಕಾರ್ ತಯಾರಿಸಿದ್ದು ಯಾರು ಗೊತ್ತಾ?

ನ್ಯೂಸ್ ಆ್ಯರೋ‌ : ಬುಗಾಟಿ ವೆಯ್ರಾನ್ ಜಗತ್ತಿನ ದುಬಾರಿ ಕಾರುಗಳಲ್ಲಿ ಒಂದು. ಅತ್ಯಂತ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಸ್ಪೋರ್ಟ್ಸ್ ಕಾರು ಕಾಣ ಸಿಗುವುದು ಅಪರೂಪ. ಭಾರತದಲ್ಲಿ ಇವು ಮಾರಾಟವಾಗುವುದಿಲ್ಲ. ಇದೀಗ ವಿಯೆಟ್ನಾಂ ನ ಯುವಕರ ತಂಡ ಕೇವಲ ಒಂದು ವರ್ಷದಲ್ಲಿ ಇಂತಹ ಬುಗಾಟಿ ಕಾರಿನ ಪ್ರತಿಕೃತಿ ರಚಿಸಿ ಗಮನ ಸೆಳೆದಿದೆ.

ಈ ಕಾರಿನ ಕುರಿತಾದ ಮಾಹಿತಿ ಹೊಂದಿದ ವೀಡಿಯೋವನ್ನು ಕೇರಳದ ಯೂ ಟ್ಯೂಬ್ ಚಾನಲ್ ಯಾಸೀನ್ ವ್ಲಾಗ್ಸ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಸುಮಾರು 30 ಕೋಟಿ ರೂ. ಬೆಲೆಬಾಳುವ ಕಾರಿನ ಪ್ರತಿಕೃತಿ ಇದು ಎಂದು ಯೂಟ್ಯೂಬರ್ ಹೇಳಿದ್ದಾರೆ.

ಜೇಡಿ ಮಣ್ಣಿನಿಂದ ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ಈ ಕಾರನ್ನು ತಯಾರಿಸಲಾಗಿದೆ. ಇದರಲ್ಲಿ ಬಳಸಿದ ಎಲ್.ಇ.ಡಿ. ಲೈಟ್ ಗಳನ್ನು ಚೀನಾದಿಂದ ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಈ ಕಾರು ನೀಲಿ ಬಣ್ಣ ಹೊಂದಿತ್ತು. ಆದರೆ ಫಿನಿಶಿಂಗ್ ಸಿಗದ ಕಾರಣ ಪರ್ಲ್ ವೈಟ್ ಬಣ್ಣ ನೀಡಲಾಯಿತು. ಈ ಕಾರಿನಲ್ಲಿ ಹಳೆಯ ಟೊಯೊಟಾ ಎಂಜಿನ್ ಬಳಸಲಾಗಿದೆ. ವಿಶೇಷ ಎಂದರೆ ರಸ್ತೆಯಲ್ಲಿ ಓಡಿಸಲು ವಿಯೆಟ್ನಾಂ ಸರ್ಕಾರದ ಅನುಮತಿ ಇವರಿಗೆ ಲಭಿಸಿದೆ. ಈ ಕಾರಿಗೆ ಯುವಕರ ತಂಡದ ಯೂ ಟ್ಯೂಬ್ ಚಾನಲ್ NHETTV ಎಂಬ ಹೆಸರಿಡಲಾಗಿದೆ ಎಂದು ವೀಡಿಯೋದಲ್ಲಿ ಮಾಹಿತಿ ನೀಡಲಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *