ವಾಹನೋದ್ಯಮವನ್ನು ಕಬ್ಜ ಮಾಡಲು ಹೊಸ ರೂಪ ತಾಳಿದ ಟಾಟಾ ನೆಕ್ಸಾನ್ – ಹೇಗಿದೆ ಗೊತ್ತಾ ಈ ಅತ್ಯಾಧುನಿಕ ಕಾರು?

ವಾಹನೋದ್ಯಮವನ್ನು ಕಬ್ಜ ಮಾಡಲು ಹೊಸ ರೂಪ ತಾಳಿದ ಟಾಟಾ ನೆಕ್ಸಾನ್ – ಹೇಗಿದೆ ಗೊತ್ತಾ ಈ ಅತ್ಯಾಧುನಿಕ ಕಾರು?

ನ್ಯೂಸ್ ಆ್ಯರೋ : ವಾಹನೋದ್ಯಮದಲ್ಲಿ ಹೊಸ ಭಾಷ್ಯ ಬರೆದ ಹೆಸರಾಂತ ಕಾರು ತಯಾರಿಕಾ ಕಂಪೆನಿಯಾದ ಟಾಟಾ ಮೋಟರ್ಸ್ ತನ್ನ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಅನ್ನು ಬಿಡುಗಡೆ ಮಾಡುವ ಮೂಲಕ ಡಾರ್ಕ್ ಎಡಿಷನ್ ಸೀರಿಸನ್ನು ವಿಸ್ತರಿಸಿದೆ. ಹೊಸ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಅನ್ನು ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಪ್ರೈಮ್‌ನೊಂದಿಗೆ ಮಾರಾಟ ಮಾಡಲಾಗುವ ಈ ಅತ್ಯಾಧುನಿಕ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸದ್ಯ, ವಾಹನೋದ್ಯಮದಲ್ಲಿ ಸಂಚನ ಸೃಷ್ಟಿಸುತ್ತಿರುವ ಈ ಕಾರಿನ ಮಾದರಿಯು ಎರಡೂ ರೂಪಾಂತರಗಳಲ್ಲ ಲಭ್ಯವಿದೆ. ಇದರ XZ+ LUX ರೂಪಾಂತರದ ಬೆಲೆಯು ರೂ.19.04 ಲಕ್ಷ ಮತ್ತು 7.2 kW AC ಫಾಸ್ಟ್ ಚಾರ್ಜರ್‌ನೊಂದಿಗೆ XZ+ LUX ರೂಪಾಂತರದ ಬೆಲೆಯು ರೂ,19.54 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರ ನಿಗದಿಯಾಗಿದೆ.

ಹೇಗಿದೆ ಗೊತ್ತಾ ಈ ಸೂಪರ್ ಕಾರ್?

ವಾಹನ ಮಾರುಕಟ್ಟೆಗೆ ಪರಿಚಯವಾಗಿರುವ ಈ ಕಾರು ಮಿಡ್‌ನೈಟ್ ಬ್ಲ್ಯಾಕ್ ಬಾಡಿ ಬಣ್ಣದ ಫಿನಿಶಿಂಗ್ ಹೊಂದಿದೆ, ಅಲ್ಲದೇ ಗ್ರೇ ಫಿನಿಶ್ಡ್ ಅಲಾಯ್ ವ್ಹೀಲ್ ಗಳು, ಸ್ಯಾಟಿನ್ ಬ್ಲ್ಯಾಕ್ ಹ್ಯುಮಾನಿಟಿ ಲೈನ್, ಟ್ರೈ-ಆರೋ LED ಡೇಟೈಮ್ ರನ್ನಿಂಗ್ ಲೈಟ್‌ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಟ್ರೈ-ಆರೋ ಸಿಗ್ನೇಚರ್ LED ಟೈಲ್ ಲ್ಯಾಂಪ್‌ಗಳು, ಫೆಂಡರ್‌ನಲ್ಲಿ ಡಾರ್ಕ್ ಮ್ಯಾಸ್ಕಾಟ್, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ಲಭ್ಯವಿದೆ.

ಜೊತೆಗೆ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಕ್ಯಾಬಿನ್ ಜ್ಯುವೆಲ್ಡ್ ಕಂಟ್ರೋಲ್ ನಾಬ್‌ನೊಂದಿಗೆ ಡಾರ್ಕ್ ಥೀಮ್‌ನೊಂದಿಗೆ ಬರುತ್ತದೆ, ಸಿಗ್ನೇಚರ್ ಟ್ರೈ-ಆರೋ ಪ್ಯಾಟರ್ನ್‌ನೊಂದಿಗೆ ಗ್ಲೋಷಿ ಪಿಯಾನೋ ಬ್ಲ್ಯಾಕ್ ಡ್ಯಾಶ್‌ಬೋರ್ಡ್, ಟ್ರೈ-ಆರೋ ಹೋಕ್ಸ್ ಗಳೊಂದಿಗೆ ಡಾರ್ಕ್-ಥೀಮ್ ಲೆಥೆರೆಟ್ ಸೀಟ್ ಅಪ್ಹೋಲ್‌ಸ್ಟರಿ ಮತ್ತು ಇವಿ ಬ್ಲೂ ಹೈಲೈಟ್ ಹೊಲಿಗೆಗಳು ಮತ್ತು ಲೆದರರ್ಡ್ ಸುತ್ತುವರೆದ ಸ್ಟೀರಿಂಗ್ ವ್ಹೀಲ್ ಕೂಡ ಈ ಕಾರಿನಲ್ಲಿ‌ ಲಭ್ಯವಿದೆ.

ಹಾಗೆಯೇ, ರಿವರ್ಸ್ ಪಾರ್ಕಿಂಗ್ ಎಚ್‌ಡಿ ಕ್ಯಾಮೆರಾ ಮತ್ತು ಆರು ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್ ಅಸಿಸ್ಟ್ ಅನ್ನು ಹೊಂದಿದ್ದು, ಇದು ಇಂಗ್ಲಿಷ್, ಹಿಂದಿ, ಬಂಗಾಳಿ ತಮಿಳು, ತೆಲುಗು ಮತ್ತು ಮರಾಠಿಯಲ್ಲಿ 180ಕ್ಕೂ ಹೆಚ್ಚು ವಾಯ್ಸ್ ಕಾಮೆಂಡ್ ಗಳು ಮತ್ತು ವಿಸ್ತೃತ ಬಾಸ್ ಕಾರ್ಯಕ್ಷಮತೆಯೊಂದಿಗೆ ವರ್ಧಿತ ಆಡಿಯೊ ಕಾರ್ಯಕ್ಷಮತೆ ನೀಡುತ್ತದೆ. ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮ್ಯಾಕ್ಸ್‌ಗೆ ಹೋಲಿಸಿದರೆ, ಇದು ಒಳಗೆ ಮತ್ತು ಹೊರಗೆ ಹಲವಾರು ಪರಿಷ್ಕರಣೆಗಳನ್ನು ಹೊಂದಿದೆ.

ವಿವೇಕ್ ಶ್ರೀವತ್ಸ ಹೇಳಿದ್ದೇನು?

ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಬಿಡುಗಡೆಯ ಬಗ್ಗೆ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸರ್ವಿಸ್ ಕಾರ್ಯತಂತ್ರದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಅವರು ಮಾತನಾಡಿ, ನೆಕ್ಸಾನ್ ಇವಿ ಭಾರತದ #1 EV ಆಗಿದೆ ಮತ್ತು ಕಡಿಮೆ ಅವಧಿಯಲ್ಲಿ 50,000ಕ್ಕೂ ಹೆಚ್ಚು ಗ್ರಾಹಕರು ಪ್ರೀತಿಸಿದ್ದಾರೆ ಮತ್ತು ನಂಬಿದ್ದಾರೆ. ಇದನ್ನು ಭಾರತದ ಎಲೆಕ್ತ್ರಿಕ್ ಕಾರಿನ ವಿಭಾಗದ ವಿಕಾಸ ಪರ್ವ ಎಂದಿದ್ದಾರೆ.

ಮುಂದುವರೆಸಿ, ‘#DARK ಸರಣಿಯ ಗ್ರಾಹಕರ ಜನಪ್ರಿಯತೆ ಗಳಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಯಶಸ್ಸು ಮತು ನೆಕ್ಸಾನ್ ಇವಿ ಮ್ಯಾಕ್ಸ್ ಜನಪ್ರಿಯತೆಯೊಂದಿಗೆ #DARK ನಿಂದ MAX ಎಂಬ ರೀತಿಯಲ್ಲಿ ಹೊಸ ಅವತಾರವನ್ನು ನಮ್ಮ ಗ್ರಾಹಕರಿಗೆ ಪ್ರಸ್ತುತಪಡಿಸಲು ಸರಿಯಾದ ಸಮಯವೆಂದು ಭಾವಿಸಿದ್ದೇವೆ’ ಎಂದು ಹೇಳಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *