ಅತುಲ್ ಆತ್ಮಹತ್ಯೆ ಕೇಸ್​: ಬಾಮೈದ, ಅತ್ತೆ ಬಂಧಿಸಿದ ಬೆಂಗಳೂರು ಪೊಲೀಸ್​​

atul-subhash
Spread the love

ನ್ಯೂಸ್ ಆ್ಯರೋ: ಪತ್ನಿ ಕಿರುಕುಳಕ್ಕೆ ನೊಂದು ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ ಅತುಲ್ ಮಾಡಿರುವ ವಿಡಿಯೋ, ಅದ್ರಲ್ಲಿ ಉಲ್ಲೇಖಸಿರುವ ಅಂಶಗಳು ದೇಶಾದ್ಯಂತ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಇನ್ನು ದೂರು ದಾಖಲಾಗುತ್ತಿದ್ದಂತೆ ದೆಹಲಿಯ ಜೌನ್ಪುರದಲ್ಲಿರುವ ತಮ್ಮ ಮನೆಯಿಂದ ಪರಾರಿಯಾಗಿದ್ದ ನಿಶಾ ಸಿಂಘಾನಿಯಾ ಮತ್ತು ಬಾಮೈದ ಅನುರಾಗ್​ರನ್ನು ಉತ್ತರ ಪ್ರದೇಶದ ಜೌನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ನಿಶಾ ಸಿಂಘಾನಿಯಾ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಮನೆಗೆ ಬೀಗ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿಯಾಗುತ್ತಿರು ವಿಡಿಯೋ ಸ್ಥಳೀಯ ಹೋಟೆಲ್​ಗೆ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.

ಆರೋಪಿಗಳಿಗಾಗಿ ಉತ್ತರ ಪ್ರದೇಶ, ದೆಹಲಿಯಲ್ಲಿ ಬೆಂಗಳೂರು ಪೊಲೀಸರಿಂದ ಹುಡುಕಾಟ ನಡೆಸಿ ಇದೀಗ ಇಬ್ಬರನ್ನೂ ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಜೌನ್ಪುರ ಠಾಣೆಗೆ ಇಬ್ಬರನ್ನೂ ಪೊಲೀಸರು ಕರೆದೊಯ್ದಿದ್ದು, ಪ್ರಾಥಮಿಕ ವಿಚಾರಣೆ ಮಾಡಲಾಗಿದೆ. ಮಾರತ್ತಹಳ್ಳಿ ಠಾಣೆ ಪೊಲೀಸರು ನಾಳೆ‌ ಕೋರ್ಟ್ ಅನುಮತಿ ಪಡೆದು ಬೆಂಗಳೂರಿಗೆ ಕರೆತರಲಿದ್ದಾರೆ.

ಸದ್ಯ ಅತುಲ್ ಸಾವಿನ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೆಂಗಳೂರು ಪೊಲೀಸರ ವಿಶೇಷ ತಂಡ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಅತುಲ್ ಪತ್ನಿ ನಿಖಿತಾ ಸಿಂಘಾನಿಯ ಸೇರಿದಂತೆ ನಾಲ್ವರಿಗೆ ಬಂಧನದ ಭೀತಿ ಎದುರಾಗಿದೆ. ಮೊದಲು ಪತ್ನಿಗೆ ನೋಟಿಸ್ ನೀಡಿ ಬಳಿಕ ವಿಚಾರಣೆ ನಡೆಸಲು ಮಾರತ್ತಹಳ್ಳಿ ಪೊಲೀಸರು ಸಜ್ಜಾಗಿದ್ದಾರೆ. ವಿಚಾರಣೆಗೆ ಸಹಕರಿಸದೇ ಇದ್ದರೆ, ನಿಖಿತಾ ಮೇಲೆ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ.

Leave a Comment

Leave a Reply

Your email address will not be published. Required fields are marked *

error: Content is protected !!