ʼಆ ದಿನ ರಾತ್ರಿ ನಾನು ಹೋಗಿದ್ರೆ ಬಹುಶಃ ಅವರು ಇವತ್ತು ಬದುಕಿರ್ತಿದ್ರುʼ; ಸಾವಿಗೂ ಮುನ್ನ ಗೆಳತಿ ಅನುರಾಧಾ ಬಳಿ ಸಿಲ್ಕ್ ಸ್ಮಿತಾ ಹೇಳಿದ್ದೇನು ?

Silk Smitha
Spread the love

ನ್ಯೂಸ್ ಆ್ಯರೋ: ಜೀವಂತ ಇದ್ದಾಗ ಸಿನಿಮಾ ಜಗತ್ತಿನಲ್ಲಿ ಮಹತ್ವದ ಪಾತ್ರ ವಹಿಸಿದ್ರೂ ಸರಿಯಾಗಿ ಗುರುತಿಸಿಕೊಳ್ಳದ ನಟಿ ಸಿಲ್ಕ್ ಸ್ಮಿತಾ. ಆದ್ರೆ ಅವರ ಸಾವಿನ ನಂತರ ಅವರ ಬಗ್ಗೆ ಪ್ರಶಂಸೆಗಳ ಸುರಿಮಳೆಯೇ ಆಯ್ತು. ಇಂದಿಗೂ ಯಾರೂ ತುಂಬಲಾರದ ಸ್ಥಾನದಲ್ಲಿರುವ ಸಿಲ್ಕ್ ಸ್ಮಿತಾ ತೀರಿಕೊಂಡು ಸೆಪ್ಟೆಂಬರ್ 23ಕ್ಕೆ 28 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಸ್ಮಿತಾಳ ಆತ್ಮೀಯ ಗೆಳತಿ ಮತ್ತು ನಟಿ ಅನುರಾಧಾ ಹೇಳಿದ ಕೆಲವು ವಿಷಯಗಳು ಗಮನ ಸೆಳೆದಿವೆ.

ಸಿಲ್ಕ್ ಸ್ಮಿತಾ ತೀರಿಕೊಂಡ ದಿನ ರಾತ್ರಿ ತನಗೆ ಫೋನ್ ಮಾಡಿದ್ರು, ಆದ್ರೆ ತಾನು ಆ ಸಮಯದಲ್ಲಿ ಹೋಗೋಕೆ ಆಗ್ಲಿಲ್ಲ ಅಂತ ಅನುರಾಧಾ ಹೇಳಿದ್ದಾರೆ. ಒಂದು ವೇಳೆ ಆ ದಿನ ನಾನು ಹೋಗಿದ್ರೆ ಸ್ಮಿತಾ ಇನ್ನೂ ಬದುಕಿರ್ತಿದ್ರು ಅಂತ ನಟಿ ಹೇಳಿದ್ದಾರೆ. ತಮಿಳು ಯೂಟ್ಯೂಬ್ ಚಾನೆಲ್ ​ಗಲಾಟಾ ಮೀಡಿಯಾಗೆ ಅನುರಾಧಾ ಈ ವಿಷಯ ತಿಳಿಸಿದ್ದಾರೆ.

“ಸಿಲ್ಕ್ ಸ್ಮಿತಾ ಜೋರು ಇರೋರು ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದು ನಿಜವಲ್ಲ. ಚಿಕ್ಕ ಮಕ್ಕಳ ತರ ಇದ್ರು. ಸಿಲ್ಕ್ ಸ್ಮಿತಾ ತೀರಿಕೊಳ್ಳೋ ಮೊದಲು ಕೆಲವು ವಿಷಯಗಳನ್ನ ನನಗೆ ಹೇಳಿದ್ರು. ಆ ವಿಷಯಗಳನ್ನ ನಾನು ಯಾರಿಗೂ ಹೇಳಿಲ್ಲ, ನನ್ನ ಮಗಳಿಗೂ ಹೇಳಿಲ್ಲ. ನನ್ನ ಗೆಳತಿ ನನ್ನ ಮೇಲೆ ನಂಬಿಕೆ ಇಟ್ಟು ಹೇಳಿದ್ದನ್ನ ನಾನು ಬಹಿರಂಗವಾಗಿ ಹೇಳೋಕೆ ಇಷ್ಟ ಪಡೋದಿಲ್ಲ. ಅದರಲ್ಲೂ ಅವರಿಲ್ಲದ ಸಮಯದಲ್ಲಿ. ಅದೆಲ್ಲ ನನಗೂ ಸಿಲ್ಕ್‌ಗೂ ಮಾತ್ರ ಗೊತ್ತಿರೋ ವಿಷಯಗಳು. ಅವರ ಕೊನೆಯ ದಿನಗಳಲ್ಲಿ ನಡೆದ ಮುಖ್ಯವಾದ ವಿಷಯಗಳೆಲ್ಲ ನನಗೆ ಗೊತ್ತು”, ಅಂತ ಅನುರಾಧಾ ಹೇಳಿದ್ದಾರೆ.

“ಅವರು ತೀರಿಕೊಂಡ ದಿನ ನನಗೆ ಫೋನ್ ಮಾಡಿದ್ರು. ರಾತ್ರಿ ಒಂಬತ್ತು-ಒಂಬತ್ತು ಮುಕ್ಕಾಲು ಆಗಿತ್ತು. ಮನೆಗೆ ಬರಬಹುದಾ ಅಂತ ಕೇಳಿದ್ರು. ನನ್ನ ಗಂಡ ಬೆಂಗಳೂರಿನಿಂದ ಬರ್ತಾ ಇದ್ರು. ಮಕ್ಕಳೆಲ್ಲಾ ನಿದ್ದೆ ಮಾಡ್ತಾ ಇದ್ರು. ಅದಕ್ಕೆ ನಾಳೆ ಬೆಳಿಗ್ಗೆ ಬರ್ತೀನಿ ಅಂತ ಹೇಳಿದೆ. ಬರ ಬೇಡ ಅಂತ ಕೇಳಿದ್ರು. ಏನೋ ಸರಿಯಿಲ್ಲ ಅಂತ ಅನಿಸ್ತು, ನಾನು ಬರ್ತೀನಿ ಅಂದೆ. ಆದ್ರೆ ಅವರೇ ಬೇಡ ಅಂದ್ರು. ಬೆಳಿಗ್ಗೆ ಮಕ್ಕಳನ್ನ ಶಾಲೆಗೆ ಕಳಿಸೋ ತಯಾರಿ ಮಾಡ್ತಾ ಇದ್ದಾಗ ಟಿವಿಯಲ್ಲಿ ಫ್ಲ್ಯಾಶ್ ನ್ಯೂಸ್ ನೋಡಿದೆ. ಸಿಲ್ಕ್ ಸ್ಮಿತಾ ತೀರಿಕೊಂಡ್ರು ಅಂತ. ನನಗೆ ತುಂಬಾ ಆಘಾತ ಆಯ್ತು. ಆ ದಿನ ರಾತ್ರಿ ನಾನು ಹೋಗಿದ್ರೆ ಬಹುಶಃ ಅವರು ಇವತ್ತು ಬದುಕಿರ್ತಿದ್ರು. ಇದನ್ನ ನಾನು ಯಾವಾಗಲೂ ಯೋಚನೆ ಮಾಡ್ತಾ ಇರ್ತೀನಿ”, ಅಂತ ಅನುರಾಧಾ ಹೇಳಿದ್ದಾರೆ.

ಸಿಲ್ಕ್ ಸ್ಮಿತಾ ಸ್ಟಾರ್ ಹೀರೋಗಳನ್ನು ಮೀರಿ ಬೆಳೆದ ಈ ನಟಿಯ ಬದುಕು ಒಂದು ದುರಂತ ಕತೆ. ಕನ್ನಡ, ತೆಲುಗು ಸೇರಿದಂತೆ ಬಹುತೇಕ ಸೌತ್ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದಾರೆ. 18 ವರ್ಷಗಳ ವೃತ್ತಿಜೀವನದಲ್ಲಿ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಪೇಮೆಂಟ್‌ ಆಗಿನ ಕಾಲಕ್ಕೆ ಅತೀ ಹೆಚ್ಚು ಅಂದರೆ 50 ಸಾವಿರ. ಇಂತಹ ನಟಿ ಕೊನೆಗಾಲದಲ್ಲಿ ಕೈಯಲ್ಲಿ ಹಣವಿಲ್ಲದ ಕಡು ಬಡತನ, ಸಾಲದ ಸುಳಿಯಲ್ಲಿ ಸಿಲುಕಿ 36ನೇ ವಯಸ್ಸಿನಲ್ಲಿ ಸಾವಿಗೆ ಶರಣಾದರು.

Leave a Comment

Leave a Reply

Your email address will not be published. Required fields are marked *

error: Content is protected !!