“ನಿನಗೆಷ್ಟು ಹಣಬೇಕು ತಗೋ.. ಇದನ್ನೇ ತಿನ್ನು”; ಲಂಚ ಕೇಳಿದ ಸರ್ಕಾರಿ ಅಧಿಕಾರಿ ಹಣ ಸುರಿಸಿದ ಗ್ರಾಮಸ್ಥರು
ನ್ಯೂಸ್ ಆ್ಯರೋ: ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಲಂಚ ಕೇಳಿದ ಸರ್ಕಾರಿ ಅಧಿಕಾರಿ ಕಚೇರಿಗೆ ನುಗ್ಗಿದ ಗ್ರಾಮಸ್ಥರು ಆತನ ಮೇಲೆ ಹಣ ಸುರಿಮಳೆಯನ್ನೇ ಸುರಿಸಿದ ಘಟನೆ ಗುಜರಾತ್ ನಲ್ಲಿ ವರದಿಯಾಗಿದೆ.
ಮೂಲಗಳ ಪ್ರಕಾರ ತಮ್ಮ ಗ್ರಾಮದ ಕಲುಷಿತ ಕುಡಿಯುವ ನೀರು ಸಮಸ್ಯೆ ನೀಗಿಸಲು ಗ್ರಾಮಸ್ಥರು ಸರ್ಕಾರಿ ಅಧಿಕಾರಿಗೆ ಮನವಿ ಮಾಡಿದ್ದು, ಈ ವೇಳೆ ಆತ ಲಂಚ ಕೇಳಿದ್ದಾನೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನೋಟಿನ ಕಂತೆಗಳನ್ನೇ ಸರ್ಕಾರಿ ಕಚೇರಿಗೆ ತಂದು ಆತನ ಮೇಲೆ ಸುರಿದಿದ್ದಾರೆ. ಅಲ್ಲದೆ ನಿನಗೆಷ್ಟು ಹಣಬೇಕು ತಗೋ.. ಇದನ್ನೇ ತಿನ್ನು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
@kalamkeechot ಎಂಬ ಟ್ವಿಟರ್ ಖಾತೆಯಲ್ಲಿ ಈ ಕುರಿತ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ವಿಡಿಯೋದಲ್ಲಿರುವಂತೆ ಸರ್ಕಾರಿ ಅಧಿಕಾರಿ ಕಚೇರಿಗೆ ನುಗ್ಗಿದ ಜನರು ಎಷ್ಟು ಬೇಕು ಅಷ್ಟು ಹಣ ತೆಗೆದುಕೋ! ಎಂದು ಆತನ ಮೇಲೆ ಹಣದ ಮಳೆ ಸುರಿಸಿದ್ದಾರೆ.
ಈ ವೇಳೆ ಅಧಿಕಾರಿ ಕುರ್ಚಿಯ ಮೇಲೆ ಕೈಮುಗಿದು ಕುಳಿತಿರುವುದನ್ನು ಕಾಣಬಹುದು. ಜನರು ಗುಜರಾತಿ ಭಾಷೆಯಲ್ಲಿ ಅವರ ಮೇಲೆ ಆರೋಪ ಮಾಡುತ್ತಿದ್ದು, ಇದರೊಂದಿಗೆ, ತಾವು ತಂದಿದ್ದ ನೋಟುಗಳನ್ನು ಆತನ ಮೇಲೆ ಸುರಿದಿದ್ದಾರೆ.
Leave a Comment