ನಟ ಆಮಿರ್ ಖಾನ್ ವಿವಾದಾತ್ಮಕ ಹೇಳಿಕೆ; ಸಹ ನಟಿಯರ ಜೊತೆಗೆ ವಿಚಿತ್ರ ವರ್ತನೆ
ನ್ಯೂಸ್ ಆ್ಯರೋ: ಜೋ ಜೀತಾ ವಹೀ ಸಿಕಂದರ್ ಚಿತ್ರೀಕರಣದ ವೇಳೆ ತಮ್ಮ ಸಹನಟಿಯರ ಕೈಗಳ ಮೇಲೆ ಉಗುಳುತ್ತಿದ್ದೆ ಎಂದು ಆಮಿರ್ ಖಾನ್ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿದೆ.
ತಮ್ಮ ಸಹನಟಿಯರ ಕೈಗಳ ಮೇಲೆ ಉಗುಳುವ ಅಭ್ಯಾಸದ ಬಗ್ಗೆ ಆಮಿರ್ ಖಾನ್ ತಮಾಷೆಯಾಗಿ ಮಾತನಾಡಿದ್ದಾರೆ. ಉಗುಳಿದ ನಟಿಯರು “ನಂಬರ್ ಒನ್” ಆಗಿದ್ದಾರೆ ಎಂದು ಆಮಿರ್ ಹೇಳಿದ್ದಾರೆ. ‘ನಾನು ಹೀರೋಯಿನ್ಗಳ ಕೈಗೆ ಏಕೆ ಉಗಿಯುತ್ತಿದ್ದೆ ಎಂಬುದನ್ನು ತಿಳಿದುಕೊಳ್ಳಬೇಕಿತ್ತು. ನಾನು ಯಾವ ಹೀರೋಯಿನ್ಗಳ ಕೈ ಮೇಲೆ ತುಪ್ಪೊತ್ತಿದ್ದೆನೋ ಅವರು ನಂಬರ್ ಒನ್ ಆಗುತ್ತಿದ್ದರು’ ಎಂದಿದ್ದ ಆಮಿರ್ ಖಾನ್, ಫಾತಿಮಾ ಹಾಗೂ ಸಾನ್ಯಾ ಕೈಗಳ ಮೇಲೆ ಉಗಿದಿದ್ದನ್ನು ಒಪ್ಪಿಕೊಂಡಿದ್ದರು.
ಆಮಿರ್ ಖಾನ್ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಗುರಿಯಾಗಿದೆ. ಫ್ಲಾಪ್ ಸಿನಿಮಾಗಳ ಮೇಲೆ ಉಗುಳಿದ್ದರೆ ಅವು ಹಿಟ್ ಆಗುತ್ತಿದ್ದವು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಈ ವಯಸ್ಸಿನಲ್ಲಿ ಆಮಿರ್ ಖಾನ್ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ದಂಗಲ್ ನಂತಹ ಚಿತ್ರಗಳಿಂದ ಗೌರವ ಗಳಿಸಿದ್ದ ಆಮಿರ್ ಖಾನ್ ಈಗ ವಿವಾದಗಳಲ್ಲಿ ಸಿಲುಕಿಕೊಂಡಿದ್ದಾರೆ.
ಆಮಿರ್ ಖಾನ್ ಅವರು ಸದ್ಯ ಸಿನಿಮಾ ನಿರ್ಮಾದಲ್ಲಿ ಬ್ಯುಸಿ ಇದ್ದಾರೆ. ಅವರು ‘ಸಿತಾರೆ ಜಮೀನ್ಪರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
Leave a Comment