70th National Film Awards : ಕಾಂತಾರದ “ಶಿವ” ರಿಷಭ್ ಶೆಟ್ಟಿಗೆ ಒಲಿದ ಅತ್ಯುತ್ತಮ ನಟ ಪ್ರಶಸ್ತಿ – ರಾಷ್ಟ್ರೀಯ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಹೀಗಿದೆ…
ನ್ಯೂಸ್ ಆ್ಯರೋ : ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು ಘೋಷಣೆ ಆಗಿದ್ದು, ‘ಕಾಂತಾರ’ ಸಿನಿಮಾಗಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಕೆಜಿಎಫ್ 2ಗೆ ಅತ್ತುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಅಕ್ಟೋಬರ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
2022ನೇ ಸಾಲಿನಲ್ಲಿ ಚಿತ್ರರಂಗದಲ್ಲಿ ಅತ್ಯುತ್ತಮ ಸಾಧನೆಗೈದ ಚಿತ್ರಗಳ ಪಟ್ಟಿಯನ್ನು ಕೇಂದ್ರ ವಾರ್ತಾ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಘೋಷಿಸಿದೆ. ಅತ್ಯುತ್ತಮ ನಟರ ರೇಸ್ ನಲ್ಲಿ ರಿಷಬ್ ಶೆಟ್ಟಿ ಹಾಗೂ ಮಲೆಯಾಳಂ ನಟ ಮಮ್ಮುಟ್ಟಿ ನಡುವೆ ಭಾರಿ ಸ್ಪರ್ಧೆ ಎರ್ಪಟ್ಟಿತ್ತು. ಕೊನೆಗೆ ರಿಷಭ್ ಶೆಟ್ಟಿಗೆ ಪ್ರಶಸ್ತಿ ಒಲಿದುಬಂದಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಅತ್ಯುತ್ತಮ ಕನ್ನಡ ಚಿತ್ರವಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಸಾಹಸ ನಿರ್ದೇಶನ ವಿಭಾಗದಲ್ಲೂ ಕೆಜಿಎಫ್-2 ಪ್ರಶಸ್ತಿ ಗೆದ್ದಿದೆ.
ಜನವರಿ 1, 2022 ರಿಂದ ಡಿಸೆಂಬರ್ 31,2022ರ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸಿ ಇದೀಗ ರಾಷ್ಟ್ರೀಯ ಪ್ರಶಸ್ತಿ ಘೋಷಿಸಲಾಗಿದೆ. 2023ರ ಮೇ ತಿಂಗಳಲ್ಲಿ ಈ ಪ್ರಶಸ್ತಿಗಳ ಘೋಷಣೆಯಾಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಪ್ರಶಸ್ತಿ ಘೋಷಣೆ ವಿಳಂಭವಾಗಿತ್ತು.
ಕಾಂತಾರ ಸಿನಿಮಾ 10 ಫಿಲ್ಮ್‌ಫೇರ್ ಪ್ರಶಸ್ತಿ ಪಡೆದುಕೊಂಡಿದೆ. ಇದರ ಜೊತೆ 10 ಸೈಮಾ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ ಇದೀಗ ರಾಷ್ಟ್ರೀಯ ಪ್ರಶಸ್ತಿ ಗರಿಯೂ ಸೇರಿಕೊಂಡಿದೆ.
ನಟ, ನಿರ್ದೇಶಕ ರಿಷಭ್ ಶೆಟ್ಟಿ 2016ರಲ್ಲಿ ʼರಿಕ್ಕಿʼ ಚಿತ್ರ ನಿರ್ದೇಶಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಬಳಿಕ ತೆರೆಕಂಡ ʼಕಿರಿಕ್ ಪಾರ್ಟಿʼ ಮತ್ತು ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆದರು. ಇನ್ನು 2022ರಲ್ಲಿ ತೆರೆಕಂಡ ʼಕಾಂತಾರʼ ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ.ಗಿಂತ ಹೆಚ್ಚು ಗಳಿಸಿ ಮೈಲಿಗಲ್ಲು ನೆಟ್ಟಿದೆ. ಈಗಾಗಲೇ ಫಿಲಂಫೇರ್‌ನಂತಹ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ
ಅತ್ಯುತ್ತಮ ಚಿತ್ರ: ಆಟ್ಟಂ
ಅತ್ಯುತ್ತಮ ನಟಿ: ಮಾನ್ಸಿ ಪರಾಖ್
ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ
ಅತ್ಯುತ್ತಮ ಮನರಂಜನಾ ಚಿತ್ರ: ಕಾಂತಾರ
ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಮಿಳು: ತಿರುಚಿತ್ರಂಬಲಂ)
ಅತ್ಯುತ್ತಮ ತೆಲುಗು ಪ್ರಾದೇಶಿಕ ಸಿನಿಮಾ- ಕಾರ್ತಿಕೇಯ 2
ವಿಶೇಷ ಪ್ರಶಸ್ತಿ: ನಟ ಮನೋಜ್ ಬಾಜ್ಪೇಯಿ- ಚಿತ್ರ: ಗುಲ್ಮೋಹರ್
ಅತ್ಯುತ್ತಮ ಚೊಚ್ಚಲ ನಿರ್ದೇಶಕ- ಬಸ್ತಿ ದಿನೇಶ್ ಶೆಣೈ (ಮಧ್ಯಂತರ-ಕಿರುಚಿತ್ರ-ಕನ್ನಡ)
ಅತ್ಯುತ್ತಮ ಸಾಹಸ ನಿರ್ದೇಶನ: ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ- ಕೆಜಿಎಫ್: ಚಾಪ್ಟರ್ 2
ಅತ್ಯುತ್ತಮ ಮರಾಠಿ ಪ್ರಾದೇಶಿಕ ಸಿನಿಮಾ- ವಾಲ್ವಿ
ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ- ಪೊನ್ನಿಯಿನ್ ಸೆಲ್ವನ್ 1
ಅತ್ಯುತ್ತಮ ಛಾಯಾಗ್ರಹಣ: ರವಿ ವರ್ಮನ್ (ಪೊನ್ನಿಯಿನ್ ಸೆಲ್ವನ್ 1)
ಅತ್ಯುತ್ತಮ ಸಂಗೀತ ನಿರ್ದೇಶನ (ಹಿನ್ನೆಲೆ ಸಂಗೀತ): ಎ ಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್
ಅತ್ಯುತ್ತಮ ಸಂಗೀತ ನಿರ್ದೇಶನ: ಪ್ರೀತಂ (ಬ್ರಹ್ಮಾಸ್ತ್ರ)
ಅತ್ಯುತ್ತಮ ನೃತ್ಯ ನಿರ್ದೇಶನ: ತಿರುಚಿತ್ರಂಬಲಂ (ತಮಿಳು)
Leave a Comment