ಅಯ್ಯಪ್ಪನ ಭಕ್ತರು ಕಪ್ಪು ಬಟ್ಟೆಯನ್ನೇ ಧರಿಸಲು ಕಾರಣವೇನು?; ಮಾಲಾಧಾರಣೆ ಹೇಗೆ..?- ಹೇಗಿರುತ್ತೆ ವ್ರತ ?

ayyappa-swamy
Spread the love

ನ್ಯೂಸ್ ಆ್ಯರೋ: ಡಿಸೆಂಬರ್ ಅಂತ್ಯ ಹಾಗೂ ಜನವರಿ ಆರಂಭ ಸಮಯದಲ್ಲಿ ಸಾವಿರಾರು ಭಕ್ತಾಧಿಗಳು ಅಯ್ಯಪ್ಪ ಮಾಲೆಯನ್ನು ಧರಿಸಿರುವುದನ್ನ ನಾವು ನೋಡುತ್ತೇವೆ. ಶಬರಿಮಲೆ ಯಾತ್ರೆ ಹೋಗುವ ಮೊದಲು ಸುಮಾರು 41 ದಿನಗಳ ಕಾಲ ಕಠಿಣ ವ್ರತ ಆಚರಣೆ ಮಾಡಿ, ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡುತ್ತಾರೆ. ಹಾಗೆಯೇ ಈ ಸಮಯದಲ್ಲಿ ಕಡ್ಡಾಯವಾಗಿ ಕಪ್ಪು ಬಟ್ಟೆ ಧರಿಸುವುದು ಸಹ ಒಂದು.

ಹಿರಿಯರು ಕಪ್ಪು ಬಟ್ಟೆಯನ್ನು ಧರಿಸುವುದು ಅಶುಭ ಎನ್ನುತ್ತಾರೆ, ಆದರೆ ಅಯ್ಯಪ್ಪ ಮಾಲಾಧಾರಿಗಳು ಮಾತ್ರ ಕಡ್ಡಾಯವಾಗಿ ಕಪ್ಪು ಹಾಕಲೇ ಬೇಕು. ಇದಕ್ಕೆ ಕಾರಣ ಶನಿ. ಹೌದು, ಶನಿ ಹಾಗೂ ಅಯ್ಯಪ್ಪನಿಗೂ ಏನು ಎಂಬಂಧ ಎಂಬ ಅನುಮಾನ ಬರಬಹುದು. ಅದಕ್ಕೆ ಉತ್ತರ ಇಲ್ಲಿದೆ.

ನಂಬಿಕೆಗಳ ಪ್ರಕಾರ ಅಯ್ಯಪ್ಪನ ದೀಕ್ಷೆ ತೆಗೆದುಕೊಳ್ಳುವುದರಿಂದ ಶನಿಯ ಕಾಟ ಇರುವುದಿಲ್ಲ ಎನ್ನಲಾಗುತ್ತದೆ. ತನ್ನ ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆಗಳನ್ನು ಮಾಡಬಾರದು ಎಂದು ಶನಿಗೆ ಅಯ್ಯಪ್ಪ ಆಜ್ಞಾಪಿಸಿದ್ದಾನೆ ಎಂದು ಸಹ ಹೇಳಲಾಗುತ್ತದೆ.
ಅಲ್ಲದೇ ಅಯ್ಯಪ್ಪನ ಈ ಮಾತಿಗೆ ಒಪ್ಪಿಕೊಂಡ ಶನಿ ಸಹ ವ್ರತ ಮಾಡುವಾಗ ಕಪ್ಪು ಬಟ್ಟೆ ಧರಿಸಬೇಕು ಎಂಬ ಶರತ್ತು ಹಾಕಿದ್ದ ಎಂದು ಹೇಳಲಾಗುತ್ತದೆ. ಈ ಕಾರಣದಿಂದ ಮಾಲಾಧಾರಿಗಳು ಕಪ್ಪು ಬಟ್ಟೆ ಧರಿಸುತ್ತಾರೆ.

Vijay Karnataka 61964649

ಸಾಮಾನ್ಯವಾಗಿ ಸಾಡೇಸಾತಿ ಆರಂಭವಾದರೆ 7 ವರ್ಷಗಳ ಕಾಲ ಹಿಂಸೆ ಅನುಭವಿಸಬೇಕಾಗುತ್ತದೆ. ಜೀವನದಲ್ಲಿ ಕಷ್ಟಗಳು ಸಾಲು ಸಾಲಾಗಿ ಬರುತ್ತದೆ. ಆದರೆ ಅಯ್ಯಪ್ಪನ ಮಾಲೆ ಹಾಕುವುದರಿಂದ ಶನಿಯ ಪ್ರಭಾವ ಕಡಿಮೆ ಆಗುತ್ತದೆ ಹಾಗೂ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗುತ್ತದೆ. ಅಲ್ಲದೇ ಈ ಕಪ್ಪು ಬಟ್ಟೆಯೂ ಎಲ್ಲಾ ಲೌಕಿಕ ಆಸೆಗಳನ್ನು ಮರೆತು, ಅಯ್ಯಪ್ಪನ ಧ್ಯಾನದಲ್ಲಿ ಮಗ್ನರಾಗುವುದರ ಸಂಕೇತ ಸಹ ಎಂದು ಹೇಳಲಾಗುತ್ತದೆ. ಹಾಗೆಯೇ ಚಳಿಗಾಲದಲ್ಲಿ ವ್ರತ ಮಾಡುವುದರಿಂದ ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

Shabarimala

ಇನ್ನು ಈ 41 ದಿನಗಳ ವ್ರತ ಮಾಡಿದ ನಂತರ ಶಬರಿಮಲೆಗೆ ಯಾತ್ರೆ ಹೋಗಲಾಗುತ್ತದೆ. ಅಲ್ಲಿ ಮಕರ ಸಂಕ್ರಾಂತಿಯ ದಿನ ಮಕರ ಜ್ಯೋತಿಯನ್ನು ನೋಡಿ, ಅಯ್ಯಪ್ಪನ ದರ್ಶನ ಪಡೆದು ವ್ರತ ಪೂರ್ಣಗೊಳಿಸಲಾಗುತ್ತದೆ. ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲಿ ಒಂದು ಬೆಳಕು ಅದ್ಭುತವಾಗಿ ಗೋಚರಿಸುತ್ತದೆ. ದಟ್ಟ ಕತ್ತಲೆಯಲ್ಲೂ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುತ್ತದೆ. ಈ ಬೆಳಕನ್ನು ನೋಡಿದಾಗಲೆಲ್ಲಾ ಅದರ ಜೊತೆಯಲ್ಲಿ ಶಬ್ದವೂ ಕೇಳಿಸುತ್ತದೆ ಎಂದು ಹೇಳಲಾಗುತ್ತದೆ.

ಮಾಲಾಧಾರಣೆ ಹೇಗೆ:

ಅಯ್ಯಪ್ಪ ಸ್ವಾಮಿಯ ಮಾಲಾಧಾರಣೆ ಮಾಡುವಾಗ ಕೆಲವೊಂದು ನಿಯಮಗಳಿವೆ. ಮನೆಯ ಹೊರಗೆ ಎಲ್ಲಿಯಾದರೂ ಮಾಲಾಧಾರಣೆ ಮಾಡಿದರೆ ನೇರವಾಗಿ ಮನೆಗೆ ಹೋಗುವುದು ವಾಡಿಕೆ. ಮಾಲೆ ಹಾಕಿದ ಬಳಿಕ ಯಾವುದೇ ಸಾವು ಸಂಭವಿಸಿದ ಕಡೆ ಹೋಗುವುದು. ಅಂದರೆ ಆಸ್ಪತ್ರೆಗಳು, ಹೋಟೆಲ್‍ಗಳು ಅಥವಾ ಇತರರ ಮನೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಮಾಲೆಯನ್ನು ಧರಿಸಿರುವಾಗ ಯಾವುದೇ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಬಾರದು. ಹಾಗೆಯೇ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು. ಇಷ್ಟು ಮಾತ್ರವಲ್ಲದೇ ಮಾಲೆ ಹಾಕಿದ ಬಳಿಕ ಹಗಲು ಹೊತ್ತಿನಲ್ಲಿ ಮಲಗಬಾರದು ಎಂದು ಸಹ ಹೇಳಲಾಗುತ್ತದೆ.

Mala

ಮಾಲೆ ಧರಿಸಿದ ಸ್ವಾಮಿಗಳು ಕಪ್ಪು ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಆದರೆ ನೀಲಿ, ಕೇಸರಿ ಬಟ್ಟೆಯನ್ನು ಸಹ ಹಾಕಲು ಅವಕಾಶವಿದೆ. ಶಬರಿಮಲೆಗೆ ತೀರ್ಥಯಾತ್ರೆ ಪೂರ್ಣಗೊಳ್ಳುವವರೆಗೆ ಮಾಲೆಯನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಈ ಸಮಯದಲ್ಲಿ ನಿಮ್ಮನ್ನು ಸ್ವಾಮಿ ಎಂದು ಕರೆಯಲಾಗುತ್ತದೆ. ಅಲ್ಲದೇ ಮಾಲಾಧಾರಿ ಕೂಡ ಎಲ್ಲರನ್ನೂ ಸ್ವಾಮಿ ಎಂದೇ ಕರೆಯಬೇಕು. ಈ ಸಮಯದಲ್ಲಿ ಯಾವುದೇ ರೀತಿಯ ಸೌಂದರ್ಯವರ್ಧಕಗಳು ಅಥವಾ ಇತರ ಅಲಂಕಾರಗಳನ್ನು ಮಾಡುವಂತಿಲ್ಲ. ಭೌತಿಕ ಅಗತ್ಯತೆಗಳು ಮತ್ತು ಆಹಾರದ ವಿಷಯದಲ್ಲಿ ಅತ್ಯಂತ ಸರಳ ಜೀವನವನ್ನು ನಡೆಸಬೇಕು. ಹಾಗೆಯೇ ನಿಮ್ಮ ಉಗುರುಗಳನ್ನು ಕಟ್? ಮಾಡುವುದು ಅಥವಾ ಕೂದಲು ಕತ್ತರಿಸುವುದು ಕೂಡ ಮಾಡಬಾರದು.

ಹೇಗಿರತ್ತೆ ವ್ರತ?:

ತಮ್ಮ ಕಷ್ಟಗಳನ್ನು ದೂರಾಗಿಸುವಂತೆ ಬೇಡಿಕೆಯನ್ನಿಟ್ಟು ಮಾಲೆ ಹಾಕುವ ಭಕ್ತರು ಕಠಿಣ ವ್ರತವನ್ನು ಪಾಲಿಸಬೇಕಾಗುತ್ತದೆ. ಮಾಲೆ ಧರಿಸಿದ ವ್ರತ ಧಾರಿಗಳು ಕೊರೆಯುವ ಚಳಿಯಲ್ಲಿ ಮುಂಜಾನೆ ಬೇಗ ಎದ್ದು, ತಣ್ಣೀರಿನಿಂದ ಸ್ನಾನ ಮಾಡುತ್ತಾರೆ. ಬಾಯಲ್ಲಿ ಅಯ್ಯಪ್ಪ ಸ್ವಾಮಿಯ ಭಜನೆ ಹೇಳುತ್ತಿರುತ್ತಾರೆ. ಹಿಡಿದ ವ್ರತ ಮುಗಿಯುವವರೆಗೆ ಚಪ್ಪಲಿ ಧರಿಸುವುದಿಲ್ಲ. ಒಟ್ಟಾರೆಯಾಗಿ ಮಾಂಸಾಹಾರದೊಂದಿಗಿನ ತಮ್ಮ ಐಷಾರಾಮಿ ಜೀವನ ಶೈಲಿಯನ್ನು ತ್ಯಜಿಸಿ, ದುಶ್ಚಟಗಳಿಂದ ದೂರಾಗಿ ಅಯ್ಯಪ್ಪನ ನಾಮ ಸ್ಮರಣೆಯಲ್ಲಿ ತಲ್ಲೀನರಾಗಿರುತ್ತಾರೆ.

Guru Swmy

ಅಯ್ಯಪ್ಪ ಭಕ್ತರು 41 ದಿನಗಳ ಕಾಲ ಉಪವಾಸ ವ್ರತವನ್ನು ಕೈಗೊಳ್ಳಬೇಕು. ಪ್ರತೀ ವರ್ಷದ ನವೆಂಬರ್ ತಿಂಗಳ ಎರಡನೇ ವಾರದಿಂದ ಭಕ್ತರು ಉಪವಾಸ ವ್ರತವನ್ನು ಕೈಗೊಂಡು ಮಾಲೆಯನ್ನು ಧರಿಸುತ್ತಾರೆ. ಉಪವಾಸದ ಸಮಯದಲ್ಲಿ ಅಯ್ಯಪ್ಪ ಭಕ್ತರು ಯಾವುದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ. ಭಕ್ತರು ಮಾಲೆ ಧರಿಸಿದ ಸಮಯದಲ್ಲಿ ಕೇವಲ ದೇವರ ಭಜನೆಯಲ್ಲಿ, ಪೂಜೆಯಲ್ಲಿ, ದೇವರ ನಾಮ ಸ್ಮರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಡವರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು.

ಗುರುಸ್ವಾಮಿ ಅಗುವುದು ಹೇಗೆ?;

ಪ್ರತಿಯೊಬ್ಬ ಅಯ್ಯಪ ಸ್ವಾಮಿ ಮಾಲಾಧಾರಿಗೆ ಗುರುಸ್ವಾಮಿಯ ಮಾರ್ಗದರ್ಶನ ಬೇಕಾಗುತ್ತದೆ. ಗುರುಸ್ವಾಮಿಯಾಗಬೇಕಾದರೆ ಓರ್ವ ಅಯ್ಯಪ್ಪ ಮಾಲಾಧಾರಿಯು ಸತತವಾಗಿ 5 ವರ್ಷಗಳ ಕಾಲ ಮಾಲೆಯನ್ನು ಹಾಕಿ, ಪ್ರತೀ ಮಕರ ಸಂಕ್ರಾಂತಿಯಂದು ಅಯ್ಯಪ್ಪನ ದರ್ಶನ ಭಾಗ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ. 5 ವರ್ಷ ಸಂಪೂರ್ಣಗೊಂಡ ನಂತರ ಅಯ್ಯಪ್ಪ ಸ್ವಾಮಿಯ ಸಾನಿಧ್ಯದಲ್ಲಿ ಶಬರಿಮಲೆಯ ತಂತ್ರಿಗಳ ಉಪಸ್ಥಿತಿಯಲ್ಲಿ ಗುರುಗಳಿಂದ ದೀಕ್ಷೆಯನ್ನು ಪಡೆದು ನಂತರ ಗುರುಸ್ವಾಮಿಯಾಗಬೇಕಾಗುತ್ತದೆ.

Guruswamy

ದೀಕ್ಷೆ ಪಡೆದ ನಂತರ ಅಲ್ಲಿಗೆ ತನ್ನ ಕರ್ತವ್ಯವನ್ನು ಕೈಬಿಡುವಂತಿಲ್ಲ. ಪ್ರತೀ ವರ್ಷ ಒಬ್ಬ ಕನ್ನಿ ಸ್ವಾಮಿಯೊಂದಿಗೆ ಶಬರಿಮಲೆಗೆ ಹೋಗಬೇಕಾಗುತ್ತದೆ. ತನ್ನ ಶಿಷ್ಯರ ಯಾತ್ರೆಯ ಎಲ್ಲಾ ಜವಬ್ದಾರಿಗಳು, ನೀತಿ – ನಿಯಮಗಳು ಗುರುಸ್ವಾಮಿಯ ಮೇಲಿರುತ್ತದೆ. ಈ ಗುರುಸ್ವಾಮಿಯವರ ಕೈಯಿಂದ ಇತರೆ ವ್ರತಧಾರಿಗಳು ಮಾಲಾಧಾರಣೆ ಮಾಡಿಕೊಂಡು, ಗುರುಸ್ವಾಮಿ ಬೋಧಿಸಿದ ನೀತಿ ನಿಯಮಗಳನ್ನು ಪಾಲಿಸಿಕೊಂಡು ವ್ರತಾಚರಣೆ ಮಾಡಬೇಕಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!