ಶಿವಣ್ಣಗೆ ಇಂದು ಅಮೆರಿಕದಲ್ಲಿ ಸರ್ಜರಿ; ಅಭಿಮಾನಿಗಳಿಂದ ವಿಶೇಷ ಪೂಜೆ

Shivnna
Spread the love

ನ್ಯೂಸ್ ಆ್ಯರೋ: ಡಾ.ಶಿವರಾಜ್​ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದು ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ದೇವರ ಮೊರೆ ಹೋಗಿದ್ದು ಸರ್ಜರಿ ಯಶಸ್ವಿಯಾಗಿ, ಆರೋಗ್ಯವಾಗಿ ಶಿವಣ್ಣ ತವರಿಗೆ ಮರಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸಿಲಿಕಾನ್​ ಸಿಟಿಯ ಮಾಗಡಿ ರೋಡ್​ನಲ್ಲಿನ ವಿರೇಶ್ ಥಿಯೇಟರ್ ಬಳಿ ಇರುವ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶಿವಣ್ಣನ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿದ್ದಾರೆ.

ಪ್ರಸ್ತುತ ಅಮೆರಿಕದಲ್ಲಿ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಡಾ.ಶಿವರಾಜ್​ಕುಮಾರ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿಯೇ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಶಿವಣ್ಣಗೆ ಶಸ್ತ್ರಚಿಕಿತ್ಸೆಯ ಬಳಿಕ ಒಂದು ತಿಂಗಳು ಕಾಲ ಅಮೆರಿಕದಲ್ಲೇ ಇರಲಿದ್ದಾರೆ. ಜನವರಿ 26ಕ್ಕೆ ಭಾರತಕ್ಕೆ ಶಿವಣ್ಣ ವಾಪಸ್ ಆಗಲಿದ್ದಾರೆ. ಶಿವಣ್ಣ ಜೊತೆ ಗೀತಾ ಶಿವರಾಜ್​ಕುಮಾರ್ ಕೂಡ ಜೊತೆಯಲ್ಲಿ ಇರಲಿದ್ದಾರೆ. ಇಂದು ಬೆಳಗ್ಗೆಯಿಂದ ರಾಜ್ಯದ ನಾನಾ ಭಾಗಗಳಲ್ಲಿ ಅಭಿಮಾನಿಗಳು ದೇವಸ್ಥಾನಗಳಲ್ಲಿ ಹೋಮ- ಹವನಗಳ ಜೊತೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!