ಈ ಹೊಟೇಲ್‌ನಲ್ಲಿ ನೀವು ಕಾಗೆ ಮಾಂಸ ತಿಂದಿರಬಹುದು; ಬಿರಿಯಾನಿಗಾಗಿ ದಂಪತಿಯಿಂದ ಕಾಗೆಗಳ ಮಾರಣಹೋಮ
ನ್ಯೂಸ್ ಆ್ಯರೋ: ಕಾಗೆ ಬಿರಿಯಾನಿ ತಿನ್ನುವ ಆಸೆಗೆ 19 ಕಾಗೆಗಳನ್ನು ಕೊಂದ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮಿಳುನಾಡಿನ ತಿರುವಳ್ಳೂರಿನ ಹಳ್ಳಿಯೊಂದರಲ್ಲಿ ಕಾಗೆಗಳನ್ನು ಕೊಂದು ಬಿರಿಯಾನಿ ಸಿದ್ಧಪಡಿಸಲು ಮುಂದಾಗಿದ್ದ ದಂಪತಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಜತೆಗೆ ದಂಡವನ್ನೂ ವಿಧಿಸಲಾಗಿದೆ.
ತಿರುವಳ್ಳೂರು ಜಿಲ್ಲೆಯ ನಯಪಕ್ಕಂ ಮೀಸಲು ಸಮೀಪದ ತೊರೈಪಕ್ಕಂ ಗ್ರಾಮದಲ್ಲಿ ರಮೇಶ್ ಮತ್ತು ಭೂಚಮ್ಮ ಎಂಬ ದಂಪತಿ ಕಾಗೆಗಳನ್ನು ಕೊಲ್ಲುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ರಮೇಶ್ ದಂಪತಿಯ ಮನೆಯಲ್ಲಿ ಶೋಧ ನಡೆಸಿದ್ದು, ಮನೆಯಲ್ಲಿದ್ದ 19 ಕಾಗೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರಣ್ಯಾಧಿಕಾರಿಗಳು ದಂಪತಿಯನ್ನು ವಿಚಾರಿಸಿದಾಗ, ಮನೆಯಲ್ಲಿ ಊಟಕ್ಕೆ ಈ ಕಾಗೆಗಳನ್ನು ಹಿಡಿದರು. ಇದಲ್ಲದೆ, ರಸ್ತೆ ಬದಿಯ ತಿನಿಸುಗಳು ಮತ್ತು ಹೆದ್ದಾರಿಗಳಲ್ಲಿನ ಸಣ್ಣ ಮಾಂಸಾಹಾರಿ ರೆಸ್ಟೋರೆಂಟ್ ಗಳಿಗೆ ಮಾಂಸವನ್ನು ಪೂರೈಸಲು ಈ ಕಾಗೆಗಳನ್ನು ಹಿಡಿಯಲಾಗುತ್ತಿದೆ ಎಂದು ಅರಣ್ಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಮಾಂಸಕ್ಕಾಗಿ ಕಾಗೆಗಳನ್ನು ಕೊಲ್ಲುತ್ತಿದ್ದಾರೆ. ಈಗಾಗಲೇ ಕಾಗೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಅರಣ್ಯ ಇಲಾಖೆಯ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ಕಾಗೆಗಳನ್ನು ಕೀಟಗಳೆಂದು ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ದಂಪತಿಯನ್ನು ಬಂಧಿಸಲಿಲ್ಲ. ಆದರೂ ಎಚ್ಚರಿಕೆ ನೀಡಿ 5 ಸಾವಿರ ರೂ.ದಂಡ ವಿಧಿಸಿ, ಅರಣ್ಯ ಒತ್ತುವರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Leave a Comment