ಅಂದು ಜರ್ಮನಿ ಐಟಿ ಉದ್ಯೋಗಿ; ಇಂದು ಬೆಂಗಳೂರಿನ ಭಿಕ್ಷುಕ, ಕಾಸಿಗಾಗಿ ಪರದಾಟ
ನ್ಯೂಸ್ ಆ್ಯರೋ: ಕಷ್ಟಪಟ್ಟು ಓದಿ, ಜರ್ಮನಿಯಲ್ಲಿ ಐಟಿ ಕಂಪನಿ ಉದ್ಯೋಗ ಗಿಟ್ಟಿಸಿಕೊಂಡು ಕೈತುಂಬಾ ಸಂಬಳ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು, ಇಂದು ಇದೇ ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಹೌದು, ಜರ್ಮನಿಯಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಐಟಿ ಉದ್ಯೋಗಿ, ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಇದರ ವಿಡಿಯೋ ಒಂದು ವೈರಲ್ ಆಗ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಎಂಎಸ್ ವ್ಯಾಸಂಗ ಮಾಡಿದ್ದಾನೆ. ಅವನ ತಂದೆ ತಾಯಿ ತೀರಿಕೊಂಡಾಗ ಮತ್ತು ಪ್ರೀತಿಸುತ್ತಿದ್ದ ಹುಡುಗಿ ಬಿಟ್ಟು ಹೋದಾಗ ಈ ಮನುಷ್ಯ ಅದ್ಭುತ ಜೀವನ ಇಷ್ಟೊಂದು ಹೀನ ಪರಿಸ್ಥಿತಿಗೆ ಬರಲು ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ. ಈ ಘಟನೆಗಳು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ವೈರಲ್ ವಿಡಿಯೋದಲ್ಲಿ, ವ್ಯಕ್ತಿ 2013 ರಲ್ಲಿ ಫ್ರಾಂಕ್‌ಫರ್ಟ್‌ನಲ್ಲಿದ್ದೆ ಎಂದು ಹೇಳುವುದನ್ನು ಕೇಳಬಹುದು.
ಸೋಷಿಯಲ್ ಮೀಡಿಯಾದೊಂದಿಗೆ ಮಾತನಾಡುವಾಗ, ವ್ಯಕ್ತಿಯು ತಾನು ಎಂಜಿನಿಯರ್ ಎಂದು ಹೇಳುತ್ತಾನೆ. ಹೆತ್ತವರ ಸಾವು, ಪ್ರೀತಿಸಿದ ಹುಡುಗಿ ಬಿಟ್ಟೋಗಿದ್ದರಿಂದ ಕುಡಿತದ ಚಟಕ್ಕೆ ಬಿದ್ದು ಇಂದು ಈ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇನ್ನು ಈ ವ್ಯಕ್ತಿ ಗ್ಲೋಬಲ್ ವಿಲೇಜ್ ಮತ್ತು ಫ್ರಾಂಕ್‌ಫರ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. ತಂದೆ-ತಾಯಿ ತೀರಿಕೊಂಡ ನಂತರ ಕುಡಿತದ ಚಟಕ್ಕೆ ಬಿದ್ದ ಈತ ಈಗ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಭಾರೀ ವೈರಲ್ ಆಗುತ್ತಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ಬಳಕೆದಾರರು ವ್ಯಕ್ತಿಯ ಬಗ್ಗೆ ಸಹಾನುಭೂತಿ ತೋರಿಸುತ್ತಿದ್ದಾರೆ. ಕೆಲಸ ಮತ್ತು ಹಣಕ್ಕಿಂತ ಹೆಚ್ಚಾಗಿ ಒಬ್ಬರ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿಯನ್ನು ಭೇಟಿಯಾಗಲು ಬಯಸುತ್ತಿದ್ದಾರೆ.
https://www.instagram.com/p/DCqgtXGB9Xz/?utm_source=ig_embed&utm_campaign=embed_video_watch_again
Leave a Comment