ಆರ್​​ಸಿಬಿ ತಂಡದಿಂದ ಮಹತ್ವದ ನಿರ್ಧಾರ; ದೇವದತ್​ ಪಡಿಕ್ಕಲ್​ಗೆ ಬಿಗ್​ ಶಾಕ್​​

devdutt-padikkal
Spread the love

ನ್ಯೂಸ್ ಆ್ಯರೋ: ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿನಲ್ಲಿ ಸ್ಟಾರ್​​ ಕನ್ನಡಿಗನನ್ನು ಖರೀದಿಸುವಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಯಶಸ್ವಿಯಾಗಿದೆ. ತನ್ನ ಐಪಿಎಲ್ ವೃತ್ತಿಜೀವನವನ್ನು ಆರ್​ಸಿಬಿಯಿಂದಲೇ ಶುರು ಮಾಡಿದ್ದ ಸ್ಟಾರ್​ ಬ್ಯಾಟರ್​ ದೇವದತ್ ಪಡಿಕ್ಕಲ್ ಅವರು 2 ಕೋಟಿ ಬೇಸ್​ ಪ್ರೈಸ್​ಗೆ ಬೆಂಗಳೂರು ತಂಡದ ಪಾಲಾಗಿದ್ದಾರೆ.

ಕಳೆದ ಸೀಸನ್​​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ ಆಡಿದ್ದ ಪಡಿಕ್ಕಲ್​ಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ. ಇವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲಿಲ್ಲ. ಹೀಗಾಗಿ ಲಕ್ನೋ ತಂಡ ಕನ್ನಡಿಗ ಪಡಿಕ್ಕಲ್​​ ಅವರನ್ನು ರಿಲೀಸ್​ ಮಾಡಿತ್ತು.

ಇನ್ನು 2022ರ ಐಪಿಎಲ್​ನಲ್ಲಿ ರಾಜಸ್ಥಾನ್​ ಪರ 376 ರನ್ ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2023ರಲ್ಲಿ 261 ರನ್ ಮಾತ್ರ ಕಲೆ ಹಾಕಿದ್ದರು. 2024ರಲ್ಲಿ ಲಕ್ನೋ ತಂಡ ಸೇರಿದ್ದ ಪಡಿಕ್ಕಲ್ 7 ಪಂದ್ಯಗಳನ್ನು ಆಡಿ ಕೇವಲ 38 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಇವರನ್ನು ಮುಂದಿನ ಸೀಸನ್​ನಲ್ಲಿ ಆರ್​​ಸಿಬಿ ಬೆಂಚ್​​ ಕಾಯಿಸಬಹುದು.

ಇವರು ಆರ್​​ಸಿಬಿ ಪರ ಓಪನಿಂಗ್​ ಅಥವಾ 1ನೇ ಕ್ರಮಾಂಕದಲ್ಲಿ ಆಡಬಹುದು. ಸದ್ಯ ಆರ್​​ಸಿಬಿಗೆ ಓಪನಿಂಗ್​ ಮಾಡಲು ಫಿಲ್​ ಸಾಲ್ಟ್​ ಇದ್ದು, 1ನೇ ಕ್ರಮಾಂಕದಲ್ಲಿ ಜೇಕಬ್ ಬೆಥೆಲ್ ಅವರನ್ನು ಆಡಿಸಬಹುದು. ಹೀಗಾಗಿ ಪಡಿಕ್ಕಲ್​​ ಆರ್​​ಸಿಬಿಗೆ ಕೇವಲ ಬ್ಯಾಕಪ್​​ ಪ್ಲೇಯರ್​ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

Leave a Comment

Leave a Reply

Your email address will not be published. Required fields are marked *

error: Content is protected !!