ನಿದ್ದೆಯಲ್ಲಿ ಹಲ್ಲಿನ ಸೆಟ್ಟನ್ನೇ ನುಂಗಿದ ವ್ಯಕ್ತಿ; ಆಮೇಲೆ ಏನಾಯ್ತು ? ಈ ಬಗ್ಗೆ ವೈದ್ಯರು ಹೇಳಿದ್ದೇನು?

set-of-teeth
Spread the love

ನ್ಯೂಸ್ ಆ್ಯರೋ: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ವ್ಯಕ್ತಿಯೊಬ್ಬ ಮಲಗಿರುವಾಗ ಹಲ್ಲಿನ ಸೆಟ್‌ ಅನ್ನೇ ನುಂಗಿಬಿಟ್ಟಿದ್ದಾನೆ. ಆದರೆ ದೇವರಂತೆ ಬಂದ ವೈದ್ಯರು, ಆ ಹಲ್ಲಿನ ಸೆಟ್ಟನ್ನು ಹೊರತೆಗೆದು ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ.

ಹೌದು ಇದು ನೀವೂ ಸಂಬಲೇಬೇಕಾದ ಸ್ಟೋರಿ. . ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. 52 ವರ್ಷದ ವ್ಯಕ್ತಿಯೊಬ್ಬ ಮಲಗಿದ್ದಾಗ ತನ್ನದೇ ನಕಲಿ ಹಲ್ಲಿನ ಸೆಟ್ಟನ್ನು ನುಂಗಿದ್ದಾನೆ. ಆದರೆ ಹಲ್ಲಿನ ಸೆಟ್ಟು ಎಲ್ಲೋಗಿತ್ತು ಎಂದು ತಿಳಿದೇ ಇರಲಿಲ್ಲ. ಟೆಸ್ಟ್ ಮಾಡಿಸಿದಾಗ ಹಲ್ಲಿನ ಸೆಟ್ ನುಂಗಿರುವುದು, ಶ್ವಾಸಕೋಶದಲ್ಲಿರುವುದು ಪತ್ತೆಯಾಗಿದೆ. ಆದರೆ, ಕಿಮ್ಸ್ ಐಕಾನ್ ಆಸ್ಪತ್ರೆಯ ವೈದ್ಯರು ಶ್ವಾಸಕೋಶದ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆದಿದ್ದಾರೆ.

Set Of Teeth

ಮಾಹಿತಿ ಪ್ರಕಾರ, 52 ವರ್ಷದ ವ್ಯಕ್ತಿ ಸ್ಥಳೀಯ ಉದ್ಯೋಗಿಯಾಗಿದ್ದು, ಕಳೆದ 2-3 ವರ್ಷಗಳಿಂದ ನಕಲಿ ಡೆಂಟಲ್ ಸೆಟ್ ಬಳಸುತ್ತಿದ್ದರು. ಆದರೆ ಕಾಲಾನಂತರದಲ್ಲಿ ಸೆಟ್‌ ತುಂಬಾನೇ ಸಡಿಲವಾಯಿತು ಎನ್ನಲಾಗಿದೆ. ಇದರಿಂದಲೇ ಆ ವ್ಯಕ್ತಿ ಮಲಗಿರುವಾಗ ನುಂಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ವೈದ್ಯರು ಹೇಳಿದ್ದೇನು?

ಕಿಮ್ಸ್ ಐಕಾನ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಪಲ್ಮನಾಲಜಿಸ್ಟ್ ಡಾ.ಸಿ.ಎಚ್.ಭರತ್, ರೋಗಿ ಆರೋಗ್ಯದ ಬಗ್ಗೆ ಮಾತನಾಡಿದ್ದು, ಸದ್ಯ ಉಸಿರಾಟದ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಅವರ ಎಡ ಶ್ವಾಸಕೋಶ ಮತ್ತು ಬಲ ಶ್ವಾಸಕೋಶಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದಾಗ್ಯೂ, ಅವರು ನಿರಂತರವಾಗಿ ಕೆಮ್ಮುತ್ತಿದ್ದರು, ಇದರಿಂದಾಗಿ ಅವರು ವೈದ್ಯಕೀಯ ಸಹಾಯವನ್ನು ಪಡೆಯಬೇಕಾಯಿತು ಎನ್ನಲಾಗಿದೆ.

ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಮಾಡಿದ ನಂತರ, ದಂತದ ಸೆಟ್ ಶ್ವಾಸಕೋಶದಲ್ಲಿ ಸಿಲುಕಿಕೊಂಡಿರುವುದನ್ನು ವೈದ್ಯರು ಕಂಡುಕೊಂಡರು. ಇನ್ನು ಈ ಹಲ್ಲಿನ ಸೆಟ್‌ ಅನ್ನು ತೆಗೆಯಲು ವೈದ್ಯರಯ ಬ್ರಾಂಕೋಸ್ಕೋಪ್ ಬಳಸಿದ್ದಾರೆ. ಸದ್ಯ ವ್ಯಕ್ತಿ ಯಾವುದೇ ಸಮಸ್ಯೆಯಿಲ್ಲದೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!