ಹೊಸ ಜೀವನಕ್ಕೆ ಕಾಲಿಟ್ಟಿರುವ ಸಮಂತಾರ ಮಾಜಿ ಪತಿ; ನಿಗೂಢ ಸಂದೇಶ ಇರುವ ಪೋಸ್ಟ್ ಮಾಡಿದ ಸ್ಯಾಮ್
ನ್ಯೂಸ್ ಆ್ಯರೋ: ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಡಿಸೆಂಬರ್ 4 ರಂದು ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿಯುವ ಮೂಲಕ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಿದ್ದಾರೆ.
ಮದುವೆಗೆ ಸಂಬಂಧಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಈ ನಡುವೆ ನಾಗ ಚೈತನ್ಯರ ಮಾಜಿ ಪತ್ನಿ ಹಾಗೂ ನಟಿ ಸಮಂತಾ ರುತ್ ಪ್ರಭು ಪೋಸ್ಟ್ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಹಾಲಿವುಡ್ ತಾರೆ ವಯೋಲಾ ಡೇವಿಸ್ ಕಥೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕ ಹಾಗೂ ಬಾಲಕಿಯ ನಡುವೆ ಫೈಟ್ ನಡೆಯುತ್ತಿದೆ. ಆತ್ಮವಿಶ್ವಾಸದ ಮನೋಭಾವದಿಂದ ಹುಡುಗ ಜಗಳ ಆರಂಭಿಸಿ ನಂತರ ಹುಡುಗಿಯ ಎದುರು ಸೋತು ಅಳಲು ಆರಂಭಿಸುತ್ತಾನೆ.
ಈ ವೀಡಿಯೊ ಹಂಚಿಕೊಂಡಿರುವ ಸಮಂತಾ, ‘ಹುಡುಗಿಯಂತೆ ಹೋರಾಡಿ..’ ಎಂದು ಬರೆದಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸಮಂತಾ ಮತ್ತು ನಾಗ ಚೈತನ್ಯ 2017 ಲ್ಲಿ ವಿವಾಹವಾದರು. ಇಬ್ಬರ ಮದುವೆಯೂ ಸಾಕಷ್ಟು ಸುದ್ದಿಯಾಗಿತ್ತು. 2021ರಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿದೆ.
Leave a Comment