ಬಾಲಿವುಡ್ ಪ್ರವೇಶ ಮಾಡಿದ ರಿಷಬ್ ಶೆಟ್ಟಿ; ʼಶಿವಾಜಿ’ ಅವತಾರಕ್ಕೆ ವ್ಯಾಪಕ ವಿರೋಧ
ನ್ಯೂಸ್ ಆ್ಯರೋ: ಕಾಂತಾರಾ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕನ್ನಡ ವಿರೋಧಿ ಅನ್ನೋ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ. ಮಹಾರಾಜಾ ಛತ್ರಪತಿ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವುದು ಈಗ ದೊಡ್ಡ ವಿವಾದವಾಗಿದೆ.
ಶಿವಾಜಿ ಪಾತ್ರ ಮಾಡಿದ್ದಕ್ಕೆ ಕನ್ನಡ ನಾಡಿನ ವಿರೋಧಿ ರಿಷಬ್ ಶೆಟ್ಟಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಬ್ಬರ ಶುರುವಾಗಿದೆ. ಬಾಯ್ಕಾಟ್ ರಿಷಬ್ ಶೆಟ್ಟಿ ಅಂತಲೂ ಅಭಿಯಾನ ಶುರುವಾಗಿದೆ. ರಿಷಬ್ ಶೆಟ್ಟಿ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಆರಂಭಗೊಂಡಿವೆ.
ಇನ್ನು ವಿರೋಧದ ಜೊತೆಗೆ ರಿಷಬ್ ಶೆಟ್ಟಿ ಪರ ಬ್ಯಾಟಿಂಗ್ ಕೂಡ ನಡೆದಿದೆ. ರಿಷಬ್ ಶೆಟ್ಟಿ ಒಬ್ಬ ಕಲಾವಿದ. ಪಾತ್ರಗಳನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಅವರಿಗಿರುವುದರ ಜೊತೆಗೆ ರಿಷಬ್ ಶಿವಾಜಿ ಪಾತ್ರ ಮಾಡಿದರೆ ತಪ್ಪೇನು. ಉತ್ತರ ಭಾರತೀಯರಲ್ಲಿ ಶಿವಾಜಿ ಬಗ್ಗೆ ದೈವಿಕ ಭಾವನೆ ಇದೆ. ಹಿಂದೂಗಳ ರಕ್ಷಣೆಗಾಗಿ ಹೋರಾಡಿದ ಧೀರ ಅಂತ ವಾದವಿವೆ. ಶಿವಾಜಿ ಪಾತ್ರಕ್ಕೆ ರಿಷಬ್ ಸೂಕ್ತ ಎನಿಸಿದ್ದಿಂದ ಅವರನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ತಪ್ಪೇನಿದೆ ಎಂದು ರಿಷಬ್ ಶೆಟ್ಟಿಯ ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ಮತ್ತೊಂದು ಕಡೆ ಶಿವಾಜಿ ಪಾತ್ರ ಮಾಡುತ್ತಿರುವುದಕ್ಕೆ ಹಲವು ಕನ್ನಡಿಗರು ವಿರೋಧ ಮಾಡುತ್ತಿದ್ದಾರೆ. ಕರುನಾಡನ್ನು ಲೂಟಿ ಹೊಡೆಯಲು ಯತ್ನಿಸಿದವರ ಸಿನಿಮಾ ಏಕೆ ಮಾಡಬೇಕು ಎನ್ನುವ ಕಾರಣದಿಂದ ಹಿಡಿದು. ಶಿವಾಜಿ ತನ್ನ ಕಾಲದಲ್ಲಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದ, ಬೆಳವಡಿ ಮಲ್ಲಮ್ಮನ ಜೊತೆ ಯುದ್ಧ ಮಾಡಿ ಶಿವಾಜಿ ಸೋತಿದ್ದ.
ಶಿವಾಜಿ ಮಲ್ಲಮ್ಮನ ವಿರುದ್ಧ ಸೋತು ಕ್ಷಮೆ ಕೇಳಿದ್ದ. ಸಿನಿಮಾದಲ್ಲಿ ಕ್ಷಮೆ ಕೇಳಿದ ದೃಶ್ಯವೂ ಕೂಡ ಇರಬೇಕು ಎಂದು ಆಗ್ರಹಿಸುವುದರ ಜೊತೆಗೆ ಒಂದು ವೇಳೆ ಆ ದೃಶ್ಯವಿಲ್ಲವಾದರೆ ಸಿನಿಮಾ ಕೈಬಿಡಬೇಕು ಎಂದು ಪಟ್ಟು ಹಿಡಿದ್ದಾರೆ.
Leave a Comment