ಏರಿಕೆಯಾಗುತ್ತಾ ನಂದಿನಿ ಹಾಲಿನ ದರ?; ಕೆಎಂಎಫ್​ ಅಧ್ಯಕ್ಷ ಹೇಳಿದೇನು ?

nandini milk
Spread the love

ಬೆಂಗಳೂರು : ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ರಾಮನಗರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಭಾಷಣದಲ್ಲಿ ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಎಲ್ಲ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದಿದ್ದರು. ಆದರೆ, ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಕೆಎಂಎಫ್​ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸದ್ಯಕ್ಕೆ ಹಾಲಿನ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ. ಆದರೆ ನಂದಿನಿ ಹಾಲಿನ ದರ ಏರಿಕೆಗೆ ರಾಜ್ಯದ ರೈತರು ಬೇಡಿಕೆ ಇಟ್ಟಿದ್ದಾರೆ. ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರ ವರ್ಗಾವಣೆ ಆಡಳಿತಾತ್ಮಕ ತೀರ್ಮಾನ ಅಷ್ಟೇ ಎಂದು ತಿಳಿಸಿದರು.

ನವೆಂಬರ್ 21ರಂದು ದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಚಾಲನೆ ನೀಡಲಾಗಿತ್ತು. ಅಲ್ಲಿ, ನಿತ್ಯ 5 ರಿಂದ 6 ಸಾವಿರ ಲೀಟರ್​​ ನಂದಿನಿ ಹಾಲು ಮಾರಾಟವಾಗುತ್ತಿದೆ. ದೆಹಲಿಯಲ್ಲಿ ನಂದಿನಿ ಹಾಲು ಮಾರಾಟ ಮಾಡುವುದು ನಮ್ಮ ಕನಸು ಇತ್ತು. ಮುಂದಿನ ತಿಂಗಳ ವೇಳೆಗೆ 1 ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ನಿರೀಕ್ಷೆ ಇದೆ ಎಂದರು.

ಬೇರೆ ಬ್ರ್ಯಾಂಡ್​ ಉತ್ಪನ್ನಗಳ ಬಗ್ಗೆ ಮಾತನಾಡುವುದಿಲ್ಲ. ನಮಗೆ ಗ್ರಾಹಕರ ಬೇಡಿಕೆ ಇದೆ, ಅದಕ್ಕೆ ತಕ್ಕಂತೆ ಪೂರೈಕೆ ಮಾಡುತ್ತೇವೆ. ಬ್ಯುಸಿನೆಸ್​ನಲ್ಲಿ ಸ್ಪರ್ಧೆ ಇರುತ್ತದೆ. ಅವೆಲ್ಲವನ್ನೂ ಎದುರಿಸಿ ಯಶಸ್ವಿ ಆಗುತ್ತೇವೆ. ಡಿಸೆಂಬರ್​ 9ರಂದು ನಾನು (ಭೀಮಾ ನಾಯ್ಕ್​), ಕೆಎಂಎಫ್​ ವ್ಯವಸ್ಥಾಪಕ ನಿರ್ದೇಶಕರು ದೆಹಲಿಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಅಮುಲ್ ಮತ್ತು ನಂದಿನಿ ವಿಲೀನ ಆಗಲಿದೆ ಎಂಬ ವದಂತಿ ವಿಚಾರವಾಗಿ ಮಾತನಾಡಿದ ಅವರು, ಆ ರೀತಿಯ ವಿಲೀನ ಮಾಡಲು ಸಾಧ್ಯವೇ ಇಲ್ಲ. ಈ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರು ಚುನಾವಣೆ ಸಂದರ್ಭದಲ್ಲಿ ಹೇಳಿದ್ದ ಯಾವುದೋ ಒಂದು ಮಾತಿನ ಹಿನ್ನಲೆಯಲ್ಲಿ ವದಂತಿ ಸೃಷ್ಟಿ ಆಗಿತ್ತು. ಇದೆಲ್ಲವೂ ಒಂದು ವದಂತಿ ಅಷ್ಟೇ. ಆ ರೀತಿಯ ವಿಲೀನ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!