ಎಲ್ಲಾ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದ ಮಂಜು; ಐಶ್ವರ್ಯ-ಮಂಜು ನಡುವೆ ಹೊತ್ತಿಕೊಂಡ ಕಿಚ್ಚು !
![Manju and Aishwarya](https://news-arrow.com/wp-content/uploads/cwv-webp-images/2024/12/bbk-1.png.webp)
ನ್ಯೂಸ್ ಆ್ಯರೋ: ಬಿಗ್ಬಾಸ್ ಮನೆ ಎರಡು ಟಿವಿ ವಾಹಿನಿಗಳಾಗಿ ಪರಿವರ್ತನೆ ಆಗಿದೆ. ಎರಡು ವಾಹಿನಿಗಳ ಉದ್ಯೋಗಿಗಳು ಎದುರಾಳಿಗಳಿಗೆ ಟಕ್ಕರ್ ನೀಡುವ, ಕಾಲೆಳೆಯುವ ಟಾಸ್ಕ್ ಜೋರಾಗಿ ನಡೆಯುತ್ತಿದೆ.
ಇದರ ನಡುವೆ ಮನೆಯಲ್ಲಿ ನಾಮಿನೇಷನ್ ಬೆಂಕಿ ಹೊತ್ತಿಕೊಂಡಿದೆ. ಬಿಗ್ಬಾಸ್ ಇವತ್ತು ನಾಮಿನೇಷನ್ಗೆ ಸಂಬಂಧಿಸಿದ ಟಾಸ್ಕ್ ನೀಡಿದ್ದಾರೆ. ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ಟಾಸ್ಕ್ ನೀಡಲಾಗಿದೆ. ಈ ಟಾಸ್ಕ್ನಲ್ಲಿ ಬಹುತೇಕ ಸ್ಪರ್ಧಿಗಳು ಮಂಜು ಅವರ ಬೆನ್ನಿಗೆ ಚುರಿ ಚುಚ್ಚಿದ್ದಾರೆ.
ವಿಡಿಯೋದಲ್ಲಿ ಕಾಣುವಂತೆ ಸುಮಾರು 8 ಚೂರಿಗಳು ಮಂಜು ಬೆನ್ನಿಗೆ ಬಿದ್ದಿವೆ. ಚೂರಿ ಚುಚ್ಚುವ ವೇಳೆ ಐಶ್ವರ್ಯ ನೀಡಿರುವ ಕಾರಣ ಮಂಜು ಅವರನ್ನು ಕೆರಳಿಸಿದೆ.
ಇಬ್ಬರು ಸ್ಪರ್ಧಿಗಳ ನಡುವೆ ವಾಗ್ಯುದ್ಧ ನಡೆದಿದೆ. ನೀವು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ನೋಡಿದ್ರೆ, ನಾನು ಕುಗ್ಗುವಂತಹ ಮಗಳೇ ಅಲ್ಲ. ಅದು ಏನೇನು ಚುಚ್ಚಿ ಮಾತನಾಡ್ತಿರೋ ಆಡಿ ಎಂದು ಐಶ್ವರ್ಯ ಸವಾಲ್ ಹಾಕಿದ್ದಾರೆ. ಅದಕ್ಕೆ ಮಂಜು ಅವರ ಕೌಂಟಿಗ್ ರಿಯಾಕ್ಷನ್ ಹೇಗಿರುತ್ತೆ? ಅಲ್ಲದೇ ಇವರಿಬ್ಬರ ಗಲಾಟೆಗೆ ನಿಜವಾದ ಕಾರಣ ಏನು ಅನ್ನೋದು ಇವತ್ತಿನ ಎಪಿಸೋಡ್ನಲ್ಲಿ ತಿಳಿಯಲಿದೆ.
Leave a Comment