ಖ್ಯಾತ ಹಾಸ್ಯ ಕಲಾವಿದ ಸುನಿಲ್ ನಿಗೂಢ ನಾಪತ್ತೆ; ಕಿಡ್ನಾಪ್ ಆಗಿರುವ ಶಂಕೆ !

Comedian Sunil Pal
Spread the love

ನ್ಯೂಸ್ ಆ್ಯರೋ: ಹಾಸ್ಯಗಾರ ಮತ್ತು ನಟ ಸುನಿಲ್ ಪಾಲ್ ನಾಪತ್ತೆಯಾಗಿದ್ದಾರೆ ಎಂದು ಮುಂಬೈನ ಸಂತಕ್ರುಜ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್​ ದಾಖಲಾಗಿದೆ. ಕಳೆದ 24 ಗಂಟೆಯಿಂದ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಅವರ ಮನೆಯವರು ಕಂಗಾಲಾಗಿದ್ದರು. ಇದೀಗ ಪೊಲೀಸ್ ಅಧಿಕಾರಿಗಳು ಮನೆಯವರಿಗೆ ನಿಟ್ಟುಸಿರು ಬಿಡುವ ವಿಚಾರ ತಿಳಿಸಿದ್ದಾರೆ.

ಸುನಿಲ್ ಪಾಲ್ ಅವರು ಕಾರ್ಯಕ್ರಮ ನಿಮಿತ್ತ ಮುಂಬೈನಿಂದ ಹೊರ ಹೋಗೋದಾಗಿ ಪತ್ನಿಗೆ ತಿಳಿಸಿದ್ದರು. ಕಾರ್ಯಕ್ರಮ ಮುಗಿದ ಬಳಿಕ ವಾಪಸ್ ಬರೋದಾಗಿ ತಿಳಿಸಿದ್ದರು. ಆದರೆ ಅವರು ಮನೆಗೆ ಬಂದಿರುವುದಿಲ್ಲ. ಹೀಗಾಗಿ ಅವರ ಪತ್ನಿ ಫೋನ್ ಕರೆ ಮಾಡಲು ಪ್ರಯತ್ನ ಮಾಡಿದ್ದಾರೆ. ಸಂಪರ್ಕ ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರ ಬಳಿ ಸಹಾಯ ಕೇಳಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಕೊನೆಗೂ ಪೊಲೀಸರು ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಾಹಿತಿಗಳ ಪ್ರಕಾರ ಸುನಿಲ್ ಪಾಲ್ ಕಿಡ್ನಾಪ್ ಆಗಿದ್ದರು ಎಂದು ಹೇಳಲಾಗಿದೆ. ಆದರೆ ಯಾರು ಅವರನ್ನು ಕಿಡ್ನಾಪ್ ಮಾಡಿದ್ದರು ಅನ್ನೊದ್ರ ಬಗ್ಗೆ ಇನ್ನಷ್ಟೇ ಮಾಹಿತಿ ಬರಬೇಕಿದೆ.

ಸಿನಿಲ್ ಪಲ್ ‘The Great Indian Laughter Challenge-2005’ ಶೋಗೆಲ್ಲುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅಲ್ಲದೇ ಬಾಲಿವುಡ್​ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!