ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಸೇರಿದ ಮಗ; ಹೆತ್ತಮ್ಮನಿಗಾಗಿ ಪುತ್ರ ಮಾಡಿದೆಂಥಾ ಕೆಲಸ?
ನ್ಯೂಸ್ ಆ್ಯರೋ: ತಾಯಿಯ ಆಸೆ ಈಡೇರಿಸಲು ಎನೆಲ್ಲಾ ಯೋಚನೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ಮಗ ತಾಯಿಯ ಆಸೆ ಈಡೇರಿಸಲು ಹೋಗಿ ಕಳ್ಳತನ ದಾರಿ ಹಿಡಿದು ಕಂಬಿ ಎಣಿಸುವಂತೆ ಆಗಿದೆ. ತಾಯಿಯ ಆಸೆ ಈಡೇರಿಸಲು ಹೋಗಿ ಮಗ ಜೈಲು ಸೇರಿದ ಘಟನೆ, ಬೆಳಗಾವಿ ಜಿಲ್ಲೆಯ ಜ್ಯೋತಿ ನಗರದ ನಿವಾಸಿ ಕೃಷ್ಣಾ ಸುರೇಶ ದೇಸಾಯಿ (23) ಜೈಲು ಪಾಲದ ಯುವಕ.
ಕಳೆದ ಎರಡು ದಿನಗಳ ಹಿಂದೆ ಕೋರ್ಟ್ ಎದುರಿನ ಹೆಚ್ ಡಿಫ್ ಸಿ ಬ್ಯಾಂಕ್ ನ ಎಟಿಎಂನಲ್ಲಿದ್ದ ಹಣ ಕಳ್ಳತನವಾಗಿತ್ತು. ಸುಮಾರು 8.65 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ವಿಚಾರ ಬೆಳಕಿಗೆ ಬರುತ್ತಿದ್ದಂತೆ , ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯವಾಳಿ ಪರಿಶೀಲಿಸಿದಾಗ, ಎಟಿಎಂಗೆ ಬರೋದು ಹಾಗೂ ಹಣ ಕದ್ದುಕೊಂಡು ಹೋಗುವ ದೃಶ್ಯ ಸೆರೆಯಾಗಿತ್ತು.
ಪೊಲೀಸರ ತನಿಖೆಯ ನಂತರ ಕಳ್ಳತನ ಮಾಡಿದ ವ್ಯಕ್ತಿ ಕೃಷ್ಣ ಸುರೇಶ್ ದೇಸಾಯಿ ಅನ್ನೋದು ದೃಢವಾಯಿತು. ಅಷ್ಟಕ್ಕೂ ಕೃಷ್ಣ ದೇಸಾಯಿ ಯಾರೆಂದರೆ ಎಚ್ ಡಿಎಫ್ ಸಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.
ಎಚ್ ಡಿಎಫ್ ಸಿ ಬ್ಯಾಂಕ್ ನ ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ. ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲಾ ಎಚ್ ಡಿಎಫ್ ಸಿ ಎಟಿಎಂಗೆ ಹಣ ಹಾಕುತ್ತಿದ್ದ. ಎರಡು ದಿನಗಳ ಹಿಂದೆ ಎಚ್ ಡಿಎಫ್ ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ. ಕೆಲ ಹೊತ್ತಿನ ಬಳಿಕ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.
ಹಣ ಎಗರಿಸಿದ ನಂತರ, ಕೃಷ್ಣಾ ಮಾಡಿದ ಮೊದಲ ಕೆಲಸವೇ ಅಮ್ಮನ ಆಸೆ ಈಡೇರಿಸುವುದು. ಈತನ ಅಮ್ಮನಿಗೆ ಚಿನ್ನಾಭರಣ ಕಂಡರೆ ಹೆಚ್ಚು ಇಷ್ಟವಂತೆ. ಅದಕ್ಕಾಗಿ ಕದ್ದ ಹಣದಲ್ಲಿ 20 ಗ್ರಾಂನ ಚಿನ್ನದ ಸರವನ್ನು ಮಾಡಿಸಿಕೊಟ್ಟಿದ್ದಾನೆ. ಉಳಿದ ಹಣದಲ್ಲಿ ಎಂಜಾಯ್ ಮಾಡಿದ್ದಾನೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರು 5.74 ಲಕ್ಷ ರೂಪಾಯಿ ಜಪ್ತಿ ಮಾಡಿದ್ದಾರೆ. ಒಟ್ಟಿನಲ್ಲಿ ಕದ್ದ ಹಣದಿಂದ ತಾಯಿಯ ಆಸೆ ಈಡೇರಿಸಲು ಹೋಗಿ, ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತಾಗಿದೆ.
Leave a Comment